ವಿಶೇಷ

ಪರಿಸರಸ್ನೇಹಿ ದೀಪಾವಳಿ: ಮೈಸೂರಿನ ಹಲವು ಮನೆಗಳಲ್ಲಿ ಬೆಳಗಲಿದೆ ಹಸುವಿನ ಸಗಣಿಯ ದೀಪ!

ಈ ಬಾರಿ ಕೊರೋನಾ ಕಾರಣದಿಂದ ದೀಪಾವಳಿ ಹಬ್ಬಕ್ಕೆ ಪಟಾಕಿ ನಿಷೇಧಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಈ ನಡುವೆ ಮೈಸೂರಿನ ಹಲವು ಕುಟುಂಬಗಳು ಈ ಬಾರಿ ಪರಿಸರಸ್ನೇಹಿ ದೀಪಾವಳಿ ಆಚರಣೆಗೆ ಮುಂದಾಗಿದ್ದು ಸಾಮಾನ್ಯ ಮಣ್ಣಿನ ಹಣತೆಯ ಬದಲಿಗೆ ಪರಿಸರ ಸ್ನೇಹಿ ಹಸುವಿನ ಸಗಣಿಯಿಂದ ಮಾಡಿದ್ದ ದೀಪಗಳನು ಹಚ್ಚಿ ದೀಪಾವಳಿ ಆಚರಣೆಗೆ ನಿರ್ಧರಿಸಿವೆ.

ಮೈಸೂರು: ಈ ಬಾರಿ ಕೊರೋನಾ ಕಾರಣದಿಂದ ದೀಪಾವಳಿ ಹಬ್ಬಕ್ಕೆ ಪಟಾಕಿ ನಿಷೇಧಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಈ ನಡುವೆ ಮೈಸೂರಿನ ಹಲವು ಕುಟುಂಬಗಳು ಈ ಬಾರಿ ಪರಿಸರಸ್ನೇಹಿ ದೀಪಾವಳಿ ಆಚರಣೆಗೆ ಮುಂದಾಗಿದ್ದು ಸಾಮಾನ್ಯ ಮಣ್ಣಿನ ಹಣತೆಯ ಬದಲಿಗೆ ಪರಿಸರ ಸ್ನೇಹಿ ಹಸುವಿನ ಸಗಣಿಯಿಂದ ಮಾಡಿದ್ದ ದೀಪಗಳನು ಹಚ್ಚಿ ದೀಪಾವಳಿ ಆಚರಣೆಗೆ ನಿರ್ಧರಿಸಿವೆ.

ಹಸುವಿನ ಸಗಣಿ, ಗೊಮೂತ್ರ(ಹಸುವಿನ ಮೂತ್ರ) ಮತ್ತು ಗೋಧಿ ಪುಡಿಯನ್ನು ಬಳಸಿ ತಯಾರಿಸಲಾಗುವ ಈ ದೀಪಗಳು ಅರಿಶಿನ ಮತ್ತು ಕುಂಕುಮದ ಬಣ್ಣ ಹೊಂದಿರುತ್ತದೆ. ಈ ಬಗೆಯ ವಿಶೇಷ ದೀಪಗಳನ್ನು 5000 ಕ್ಕೂ ಹೆಚ್ಚುಸಂಖ್ಯೆಯಲ್ಲಿ ತಯಾರಿಸಿ ಸಾರ್ವಜನಿಕರಿಗೆ ಮಾರಾಟ ಮಾಡಲಾಗುತ್ತದೆ, ಇದರಿಂಡ ಸಂಗ್ರಹವಾದ ಹಣವನ್ನು ಪಿಂಜರಾಪೋಲ್ ಸೊಸೈಟಿಯ ದತ್ತಿ ಕಾರ್ಯಗಳಿಗೆ ಬಳಸಲಾಗುತ್ತದೆ.

ಈ ಯೋಜನೆಯ ಹಿಂದಿನ ಶಕ್ತಿ ಜೀವ್ ದಯಾ ಜೈನ್ ಚಾರಿಟಿಯ ಅಧ್ಯಕ್ಷ ಕೋಕಿಲಾ ರಮೇಶ್ ಜೈನ್ ಅವರಾಗಿದ್ದಾರೆ. “ನಾವು ಮಣ್ಣಿನ ಹಣತೆಯ ಬದಲಿಗೆ ಹಸುವಿನ ಸಗಣಿಗಳನ್ನು ಬಳಸಲು ಪ್ರೋತ್ಸಾಹಿಸಲು ಬಯಸುತ್ತೇವೆ. ಮಣ್ಣಿನ ಹಣತೆ ಮಣ್ಣಿನಲ್ಲಿಒಂದುಗೂಡಲು ಸಮಯ ತೆಗೆದುಕೊಳ್ಳುತ್ತದೆ, ಆದರೆ ಹಸುವಿನ ಸಗಣಿಯಿಂದಾದ ದೀಪಗಳು ಬಹುಬೇಗ ಮಣ್ಣಿನೊಂದಿಗೆ ಸೇರಿ ಬೂದಿಯಾಗುತ್ತದೆ.  ಅಲ್ಲದೆ ಇಂತಹಾ ದೀಪಗಳಿಂದ ಬೆಳಗಿದಾಗ ಸಕಾರಾತ್ಮಕ ಶಕ್ತಿ ಹರಡುತ್ತದೆ. ಚಿತಾಭಸ್ಮವನ್ನು ಗೊಬ್ಬರವಾಗಿ ಬಳಸಬಹುದು. ಈ ದೀಪಗಳು ಹಸುವಿನ ಸಗಣಿಗೂ ಆದಾಯ ತರಬಲ್ಲವು.

“ನಾವು ಪರಿಸರಕ್ಕೆ ಹಾನಿಯಾಗದ ಪರಿಸರ ಸ್ನೇಹಿ ಬಣ್ಣಗಳನ್ನು ಬಳಸಿ ದೀಪಗಳನ್ನು ಅಲಂಕರಿಸಿದ್ದೇವೆ. ಹಬ್ಬಗಳನ್ನು ಪರಿಸರ ಸ್ನೇಹಿ ರೀತಿಯಲ್ಲಿ ಆಚರಿಸಲು ನಾವು ಜನರನ್ನು ವಿನಂತಿಸುತ್ತೇವೆ ”ಎಂದು ಮತ್ತೊಬ್ಬ ಸದಸ್ಯೆ ರೋಹಿಣಿ ಹೇಳಿದ್ದಾರೆ.

ಪ್ರಗತಿ ಪ್ರತಿಷ್ಠಾನ ಮತ್ತು ಜೀವ್ ದಯಾ ಜೈನ್ ಚಾರಿಟಿಗಳ ಸ್ವಯಂಸೇವಕರು ಈ ದೀಪಗಳನ್ನು ತಯಾರಿಸಿದ್ದಾರೆ. ಖೊವಿಡ್ ಕಾರಣದಿಂಡ ಈ ವರ್ಷ ಮಾರಾಟ ನಿರ್ಬಂಧಿಸಲಾಗಿದೆ. ಮುಂದಿನ ವರ್ಷದಿಂದ ದೊಡ್ಡ ಪ್ರಮಾಣದಲ್ಲಿ ವಿವಿಧ ರೀತಿಯ ದೀಪಗಳನ್ನು ತಯಾರಿಸಲು ಅವರು ಯೋಜಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸತತ 3ನೇ ದಿನ SIR ವಿರುದ್ಧ ಪ್ರತಿಭಟನೆ: ರಾಜ್ ಘಾಟ್ ನತ್ತ ಇಂಡಿಯಾ ಬ್ಲಾಕ್ ಸಂಸದರ ಮೆರವಣಿಗೆ!

ಫ್ರೀಡಂ ಪಾರ್ಕ್‌ನಲ್ಲಿ CJP ಪ್ರತಿಭಟನೆ: ಜ್ಞಾನೇಶ್ ಹೋದರೆ ಅಜ್ಞಾನೇಶ್ ಬರುತ್ತಾನೆ; ಮೊದಲು SIR ರದ್ದುಗೊಳಿಸಿ - ಪ್ರಕಾಶ್ ರಾಜ್

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video

Indian Stock Market ಮತ್ತೆ ಭಾರಿ ಕುಸಿತ; ಸೆನ್ಸೆಕ್ಸ್ 1,045 ಅಂಕ ಕುಸಿತ, 10 ಲಕ್ಷ ಕೋಟಿ ರೂ ನಷ್ಟ!

ಶಾಸಕರ ಲೆಟರ್‌ಹೆಡ್'ನಲ್ಲೇ 'ಸತ್ತಿದ್ದಾರೆ' ಎಂದು ಅರ್ಜಿ: ಯತ್ನಾಳ್ ಸೇರಿ ಮೂವರ ವಿರುದ್ಧ FIR ದಾಖಲು