ವಿಶೇಷ

ಒಡಿಶಾ: ಮಗನ ಜನ್ಮ ದಿನಕ್ಕೆ ಉಡುಗೊರೆಯಾಗಿ ಚಂದ್ರನ ಮೇಲೆ ಒಂದು ಎಕರೆ ಭೂಮಿ ಖರೀದಿಸಿದ ಯೋಧ!

Srinivasamurthy VN

ಭುವನೇಶ್ವರ: ಚಂದ್ರನನ್ನು ತಲುಪುವುದು ಈಗ ಕೇವಲ ಗಾದೆಯಾಗಿ ಉಳಿದಿಲ್ಲ... ಆದೆರ ವಾಸ್ತವವಾಗಿದ್ದು, ಮಗನ ಜನ್ಮ ದಿನಕ್ಕ ಉಡುಗೊರೆಯಾಗಿ ಯೋಧನೋರ್ವ ಚಂದ್ರನ ಮೇಲೆ ಭೂಮಿ ಖರೀದಿಸಿ ಸುದ್ದಿಯಾಗಿದ್ದಾರೆ.

ಒಡಿಶಾ ಮೂಲದ ಯೋಧ ಅಮರೇಂದ್ರ ಬಾರಿಕ್ ಅವರು ನ್ಯೂಯಾರ್ಕ್‌ನಲ್ಲಿ ಇಂಟರ್ನ್ಯಾಷನಲ್ ಲೂನಾರ್ ಲ್ಯಾಂಡ್ ರಿಜಿಸ್ಟ್ರಿ (ಐಎಲ್‌ಎಲ್ಆರ್) ಚಂದ್ರನ ಮೇಲೆ ಭೂಮಿ ಖರಿಸಿದ ಕುರಿತು ಆಸ್ತಿ ನೋಂದಣಿ ಪ್ರಮಾಣಪತ್ರವನ್ನು ಪಡೆದಿದ್ದಾರೆ. ಈ ಕುರಿತಂತೆ ಮಾಹಿತಿ ನೀಡಿರುವ ಯೋಧ ಅಮರೇಂದ್ರ ಬಾರಿಕ್,  'ನನ್ನ ಮಗ ಸಾಯಿ ಸ್ಪಂದನ್ ನ ಮೊದಲ ಜನ್ಮದಿನದಂದು ಏನಾದರೂ ವಿಶೇಷ ಉಡುಗೊರೆ ನೀಡಲು ನಾನು ಬಯಸಿದ್ದೆ. ಹಾಗಾಗಿ ಅವನಿಗೆ ಚಂದ್ರನ ಮೇಲೆ ಭೂಮಿಯನ್ನು ಖರೀದಿಸಲು ಯೋಚಿಸಿದೆ ಎಂದು ಹೇಳಿದ್ದಾರೆ.

ಅಲ್ಲದೆ ಇದಕ್ಕಾಗಿ ಬಾರಿಕ್ ಚಂದ್ರನ ಮೇಲೆ ಭೂಮಿಯನ್ನು ಖರೀದಿಸಲು ಅನುಮತಿ ಕೋರಿ ಇಮೇಲ್ ಮೂಲಕ ಐಎಲ್ಎಲ್ಆರ್ ಅನ್ನು ಸಂಪರ್ಕಿಸಿದ್ದಾರೆ. ಅಲ್ಲದೆ 50,000 ರೂ. ಹಣವನ್ನು ಪಾವತಿಸಿ ಅನುಮೋದನೆ ಕೂಡ ಪಡೆದರು. ಅಂತೆಯೇ ನೋಂದಣಿಗಾಗಿ ದಾಖಲೆಗಳನ್ನು ಸಲ್ಲಿಸಿದ್ದರು. ಇದೀಗ ಬಾರಿಕ್ ಅವರು ನೋಂದಾವಣಿ ಪ್ರಮಾಣಪತ್ರವನ್ನು ಸ್ವೀಕರಿಸಿದ್ದಾರೆ. 

ಬ್ಯಾರಿಕ್ ಖರೀದಿಸಿದ ಭೂಮಿ ಲ್ಯಾಕಸ್ ಫೆಲಿಸಿಟಾಟಿಸ್‌ನಲ್ಲಿದ್ದು, ಲ್ಯಾಕಸ್ ಫೆಲಿಸಿಟಾಟಿಸ್‌ ಎಂದರೆ ಚಂದ್ರನ ಮೇಲೆ ‘ಸಂತೋಷದ ಸರೋವರ’ ಎಂದು. ಇತ್ತೀಚೆಗೆ, ಧೆಂಕನಾಲ್ ಎಂಡಿ ಸಜನ್ ನಿವಾಸಿ ಚಂದ್ರನ ಮೇಲೆ ಐದು ಎಕರೆ ಭೂಮಿಯನ್ನು ಅವರ ಪತ್ನಿ ನಾಜಿಯಾ ಅವರಿಗೆ ಹುಟ್ಟುಹಬ್ಬದ ಉಡುಗೊರೆಯಾಗಿ ಖರೀದಿಸಿದ್ದರು. 

SCROLL FOR NEXT