ಹರ್ಲಾಪುರ ದರ್ಗಾ 
ವಿಶೇಷ

ಬೆಳಗಾವಿ ಜಿಲ್ಲೆಯ ಈ ಗ್ರಾಮದಲ್ಲಿ ಹಿಂದೂಗಳಿಂದ ಮೊಹರಂ ಆಚರಣೆ!

ಈ ಗ್ರಾಮದಲ್ಲಿ ಒಂದೇ ಒಂದು ಮುಸ್ಲಿಂ ಕುಟುಂಬವಿಲ್ಲಾ. ಆದರೆ, ಮೊಹರಂ ಹಬ್ಬವನ್ನು ಕಳೆದ 11 ವರ್ಷಗಳಿಂದಲೂ ಆಚರಿಸುತ್ತಾ ಬರಲಾಗಿದೆ. ಹಿಂದೂಗಳೇ ದೇಣಿಗೆ ಸಂಗ್ರಹಿಸಿ 'ಫಕೀರ್ ಸ್ವಾಮಿ' ದರ್ಗಾ ನಿರ್ಮಿಸಲಾಗಿದ್ದು, ಸವದತ್ತಿ ತಾಲೂಕಿನ ಹರ್ಲಾಪುರ ಗ್ರಾಮ  ಧಾರ್ಮಿಕ ಸಾಮರಸ್ಯದ ಸಂಕೇತದಂತಿದೆ.

ಬೆಳಗಾವಿ: ಈ ಗ್ರಾಮದಲ್ಲಿ ಒಂದೇ ಒಂದು ಮುಸ್ಲಿಂ ಕುಟುಂಬವಿಲ್ಲಾ. ಆದರೆ, ಮೊಹರಂ ಹಬ್ಬವನ್ನು ಕಳೆದ 11 ವರ್ಷಗಳಿಂದಲೂ ಆಚರಿಸುತ್ತಾ ಬರಲಾಗಿದೆ. ಹಿಂದೂಗಳೇ ದೇಣಿಗೆ ಸಂಗ್ರಹಿಸಿ 'ಫಕೀರ್ ಸ್ವಾಮಿ' ದರ್ಗಾ ನಿರ್ಮಿಸಲಾಗಿದ್ದು, ಸವದತ್ತಿ ತಾಲೂಕಿನ ಹರ್ಲಾಪುರ ಗ್ರಾಮ ಧಾರ್ಮಿಕ ಸಾಮರಸ್ಯದ ಸಂಕೇತದಂತಿದೆ.

ಪ್ರತಿ ವರ್ಷ ಗ್ರಾಮಸ್ಥರು ಹೊಸ ಇಸ್ಲಾಮಿಕ್ ವರ್ಷವನ್ನು ಸೂಚಿಸುವ ಮೊಹರಂ ಅನ್ನು ಆಚರಿಸುತ್ತಾರೆ. ಈ ಬಾರಿ ಕೋವಿಡ್-19 ಪರಿಸ್ಥಿತಿಯಿಂದಾಗಿ ನಿಯಮ ಪಾಲನೆಯೊಂದಿಗೆ ಸರಳ ರೀತಿಯಲ್ಲಿ ಹಬ್ಬ ಆಚರಿಸಲಾಯಿತು. ಮೆರವಣಿಗೆ ನಂತರ 'ಪಂಜಾ'ವನ್ನು ತಯಾರಿಸಿ ದರ್ಗಾದಲ್ಲಿ ಇಡಲಾಯಿತು. ವಿಶೇಷ ಪ್ರಾರ್ಥನೆ, ಪೂಜೆಗಳು ನಡೆದವು. ದರ್ಗಾ ನಿರ್ಮಾಣವಾದಾಗಿನಿಂದಲೂ ಹಿಂದೂ ಆರ್ಚಕರೊಬ್ಬರು ಪ್ರತಿನಿತ್ಯ ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ.

ದರ್ಗಾದ ಆವರಣದಲ್ಲಿರುವ ಬೇವಿನ ಮರವು ಹಾವು ಕಡಿತದಿಂದ ಬಳಲುತ್ತಿರುವವರಿಗೆ ಜೀವರಕ್ಷಕ ಎಂದು ನಂಬಲಾಗಿದೆ. ಗ್ರಾಮಸ್ಥರ ಪ್ರಕಾರ, ಬೇವಿನ ಎಲೆಯನ್ನು ಬಳಸಿ ತಯಾರಿಸಿದ ರಸವನ್ನು ಸೇವಿಸಿದ ಎರಡು ಗಂಟೆಗಳಲ್ಲಿ ಹಾವು ಕಡಿತವು ಗುಣವಾಗುತ್ತದೆ. ಬೆಳಗಾವಿಯ ಹೊರತಾಗಿ ಧಾರವಾಡ ಮತ್ತು ಗದಗ ಜಿಲ್ಲೆಗಳ ಹಾವು ಕಡಿತಕ್ಕೆ ಒಳಗಾದವರು ಕೂಡ ಆಗಾಗ್ಗ ದರ್ಗಾಕ್ಕೆ ಭೇಟಿ ನೀಡುತ್ತಾರೆ.

 ಅಲ್ಲಾಹುನಲ್ಲಿ ಅತ್ಯಂತ ನಂಬಿಕೆ ಇದ್ದು, ಪ್ರತಿನಿತ್ಯ ದರ್ಗಾದಲ್ಲಿ ಪ್ರಾರ್ಥನೆ ಮಾಡುತ್ತೇವೆ, ಪ್ರತಿ ವರ್ಷ ಮೊಹರಂ ಆಚರಿಸುತ್ತೇವೆ. ಈ ವರ್ಷ ಕೋವಿಡ್-19 ತೊಲಗಿ ಸಮಾಜಕ್ಕೆ ಒಳ್ಳೆಯದಾಗಲಿ ಎಂದು ಅಲ್ಲಾಹುನಲ್ಲಿ ಪ್ರಾರ್ಥನೆ ಮಾಡಿರುವುದಾಗಿ ಆರ್ಚಕ ಗೌಡಪ್ಪ ಅದಿವೇಪ್ಪ ವಾಕುಂದ್ ಹೇಳಿದರು.

3,500 ಜನಸಂಖ್ಯೆಯಿರುವ ಹರ್ಲಾಪುರ ಗ್ರಾಮದಲ್ಲಿ ಅನೇಕ ದಶಗಳಿಂದಲೂ ಮೊಹರಂ ಆಚರಿಸುತ್ತಾ ಬರಲಾಗಿದೆ. ಪ್ರಸಿದ್ಧ ಯಲ್ಲಮ್ಮ ಗುಡ್ಡದ ರೇಣುಕಾ ದೇವಿ ದೇವಾಲಯಕ್ಕೆ ಆಗಮಿಸುವ ಭಕ್ತರು ಕೂಡಾ ಈ ದರ್ಗಾಕ್ಕೆ ಭೇಟಿ ನೀಡುತ್ತಾರೆ. ದರ್ಗಾಕ್ಕೆ ಭೇಟಿ ನೀಡುವ ಯಾವುದೇ ಭಕ್ತರ ಆಶಯಗಳು ಈಡೇರುತ್ತವೆ ಎಂಬ ಬಲವಾದ ನಂಬಿಕೆ ಇದೆ ಎಂದು ಗ್ರಾಮಸ್ಥ ರವಿ ಚೌಲಕಿ ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT