ವಿಶೇಷ

50ರ ದಶಕದಲ್ಲಿ ಪುಸ್ತಕ ಕೊಂಡು ಓದಲಾಗದ ಬಾಲಕ, ಇಂದು 2 ಲಕ್ಷ ಪುಸ್ತಕಗಳಿರುವ ಗ್ರಂಥಾಲಯ ಸ್ಥಾಪಕ

Harshavardhan M

ಹೈದರಾಬಾದ್: ಬಹಳ ಹಿಂದೆ ಭಾರತ ಸರ್ಕಾರದೊಡನೆ ಹೈದರಾಬಾದ್ ರಾಜ್ಯ ವಿಲೀನವಾಗುವುದನ್ನು ವಿರೋಧಿಸಿದ್ದ ರಜಾಕರು, ರಾಜ್ಯದಲ್ಲಿ ದೊಂಬಿ ನಡೆಸಿದ್ದರು. ಆ ಸಮಯದಲ್ಲಿ ಬಾಲಕನೋರ್ವ ತನ್ನ ಹಳ್ಳಿಯಲ್ಲಿ ಒಂದು ಗ್ರಂಥಾಲಯವನ್ನು ತೆರೆದಿದ್ದ.

ಹಳ್ಳಿಗರು ವಿದ್ಯಾವಂತರಾದರೆ ತನಗೇ ಕಂಟಕ ಎಂದು ತಿಳಿದ ಜಮೀನ್ದಾರರು ಆ ಗ್ರಂಥಾಲಯವನ್ನು ಮುಚ್ಚಿಹಾಕಿದ್ದರು. ಮುಂದೆ ಅದೇ ಬಾಲಕ ಓದಿ ವಿದ್ಯಾವಂತನಾಗಿ ಉಪನ್ಯಾಸಕನಾಗಿ ಕೆಲಸಕ್ಕೆ ಸೇರುತ್ತಾರೆ. ತೆಲುಗು ಸಾಹಿತ್ಯ ವಲಯದಲ್ಲಿ ಉತ್ತಮ ಬರಹಗಾರ ಎಂದು ಹೆಸರು ಪಡೆಯುತ್ತಾರೆ. ಅನೇಕ ಪ್ರತಿಷ್ಟಿತ ಪ್ರಶಸ್ತಿಗಳು, ಬಿರುದುಗಳು ಅವರನ್ನರಸಿ ಬರುತ್ತವೆ. 

ಇಂದು ಆ ಮಹನೀಯರು ಸ್ಥಾಪಿಸಿರುವ ಗ್ರಂಥಾಲಯದಲ್ಲಿ 2 ಲಕ್ಷ ಪುಸ್ತಕಗಳಿವೆ. ಆ ಮಹನೀಯರ ಹೆಸರು ಕುರೆಲ್ಲ ವಿಟ್ಠಲಾಚಾರ್ಯ. ಅವರಿಗೀಗ 84 ವರ್ಷ ವಯಸ್ಸು. ಉಪನ್ಯಾಸಕರಾಗಿ ಕೆಲಸಕ್ಕೆ ಸೇರಿದ್ದ ಅವರು ಕಾಲೇಜು ಪ್ರಿನ್ಸಿಪಾಲರಾಗಿ ನಿವೃತ್ತರಾಗಿದ್ದಾರೆ. ಭುವನಗಿರಿ ಜಿಲ್ಲೆಯ ರಾಮಣ್ಣ ಪೇಟ್ ಎಂಬಲ್ಲಿ ಅವರು ನೆಲೆಸಿದ್ದಾರೆ. 

ಇದುವರೆಗೂ ಅವರು ಒಟ್ಟು 22 ಪುಸ್ತಕಗಳನ್ನು ರಚಿಸಿದ್ದಾರೆ. ತಾವು ಚಿಕ್ಕವರಾಗಿದ್ದಾಗ ಪುಸ್ತಕ ಕೊಂಡು ಓದಲು ಶಕ್ತರಾಗಿರಲಿಲ್ಲ. ಹೀಗಾಗಿ ನೆರೆಹೊರೆಯವರು, ಸ್ನೇಹಿತರಿಂದ ಪುಸ್ತಕ ಪಡೆದು ಒಂದೇ ದಿನದಲ್ಲಿ ಓದಿ ಹಿಂದಿರುಗಿಸುತ್ತಿದ್ದರು. ಈ ಕಷ್ಟ ಇನ್ನೊಬ್ಬರಿಗೆ ಬರಬಾರದು ಎನ್ನುವ ಉದ್ದೇಶವೇ ಗ್ರಂಥಾಲಯ ಸ್ಥಾಪನೆಗೆ ಕಾರಣವಾಯಿತು.  ಈ ಗ್ರಂಥಾಲಯ ಸ್ಥಾಪನೆಗೆ ವಿಟ್ಠಲಾಚಾರ್ಯ ಅವರ್ ವಿದ್ಯಾರ್ಥಿಗಳೂ ಕಾಣಿಕೆ ನೀಡಿದ್ದಾರೆ ಎನ್ನುವುದು ವಿಶೇಷ.

SCROLL FOR NEXT