ವಿಶೇಷ

ಬರಡು ಭೂಮಿಯಲ್ಲಿ ಸೋಲಾರ್ ಬೆಳೆ ತೆಗೆದ ರಾಜಸ್ಥಾನ ರೈತ: ತಿಂಗಳಿಗೆ 4 ಲಕ್ಷ ರೂ. ಆದಾಯ

Harshavardhan M

ಜೈಪುರ: ರಾಜಸ್ಥಾನದ ಜೈಪುರ ಜಿಲ್ಲೆಯಲ್ಲಿನ ರೈತ ಕುಟುಂಬವೊಂದು 3.5 ಎಕರೆ ಜಮೀನಿನಲ್ಲಿ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕ ಪ್ರಾರಂಭಿಸಿ ತಿಂಗಳಿಗೆ 4 ಲಕ್ಷ ರೂ. ಗಳಿಸುತ್ತಿರುವ ಸುದ್ದಿ ಬೆಳಕಿಗೆ ಬಂದಿದೆ. 

ರೈತರಾದ ದೇವ್ ಕಿರಣ್ ಯಾದವ್ ಮತ್ತು ಅವರ ಪುತ್ರ ಡಾ. ಅಮಿತ್ ಯಾದವ್ ಕೊತ್ಪುಲಿ ಗ್ರಾಮದಲ್ಲಿನ ತಮ್ಮ ಜಮೀನಿನಲ್ಲಿ ಸೋಲಾರ್ ಪ್ಲಾಂಟ್ ಗಳನ್ನು ಸ್ಥಾಪಿಸಿದ್ದಾರೆ. ಪ್ರಧಾನ ಮಂತ್ಫ್ರಿ ಕಿಸಾನ್ ಉಜ್ರಾ ಸುರಕ್ಷಾ ಏವಂ ಉತ್ಥಾನ್ ಮಹಾಭಿಯಾನ್(KUSUM) ಯೋಜನೆ ಸಹಕಾರದೊಂದಿಗೆ ಈ ಸೋಲಾರ್ ಪ್ಲಾಂಟ್ ಸ್ಥಾಪಿಸಲಾಗಿದೆ.

ಯಾದವ್ ಅವರ ರೈತ ಕುಟುಂಬ ರಾಜಸ್ಥಾನ ನವೀಕರಿಸುವ ಶಕ್ತಿ ಪ್ರಾಧಿಕಾರದೊಂದಿಗೆ 25 ವರ್ಷಗಳ ಕಾಲ ವಿದ್ಯುತ್ ಪೂರೈಸುವ ಒಪ್ಪಂದ ಮಾಡಿಕೊಂಡಿದೆ. ಅದರಿಂದಾಗಿ ಪ್ರತಿ ತಿಂಗಳು ಈ ಕುಟುಂಬ 4 ಲಕ್ಷ ರೂ. ಸಂಪಾದಿಸುತ್ತಿದೆ. 

ಕೆಲವರ್ಷಗಳ ಹಿಂದೆ ತಪ್ಪಿನಿಂದಾಗಿ ಅಗಾಧ ಮೊತ್ತದ ವಿದ್ಯುತ್ ಬಿಲ್ ಬಂದಿತ್ತು. ಆ ತಪ್ಪನ್ನು ಪರಿಹರಿಸುವಷ್ಟರಲ್ಲಿ ಯಾದವ್ ಕುಟುಂಬಕ್ಕೆ ಸಾಕೋಸಾಕಾಗಿತ್ತು. ಆಗಲೇ ವಿದ್ಯುತ್ ಶಕ್ತಿಗೆ ಬದಲಾಗಿ ಇತೆರೆ ಆಯ್ಕೆಯಾದ ಸೋಲಾರ್ ಕಡೆ ಗಮನ ಹರಿದಿದ್ದು. 

ಅವರ ಬಳಿ ತುಂಬಾ ಜಮೀನಿದ್ದರೂ ಅಂತರ್ಜಲ ಕೊರತೆಯಿಂದಾಗಿ ಬರಡು ಭೂಮಿಯಾಗಿ ಬಿಟ್ಟಿದ್ದವು. ಹೀಗಾಗಿ ಸೋಲಾರ್ ಘಟಕ ಸ್ಥಾಪಿಸಲು ತಮ್ಮ ಬರಡು ಭೂಮಿಯನ್ನೇ ಬಳಸಿಕೊಂಡಿದ್ದಾರೆ ದೇವ್ ಕಿರಣ್ ಯಾದವ್. 

SCROLL FOR NEXT