ಸ್ನೇಹಲೋಕ ಗೆಳೆಯರ ಬಳಗ(ಫೇಸ್ ಬುಕ್ ಫೋಟೋ) 
ವಿಶೇಷ

ಸ್ನೇಹಿತರ ದಿನಾಚರಣೆ: ಸೋಷಿಯಲ್ ಮೀಡಿಯಾ ಮೂಲಕ ಆರಂಭವಾದ ಸ್ನೇಹಲೋಕ ಗೆಳೆಯರ ಬಳಗಕ್ಕೆ ಈಗ 5ರ ಹರೆಯ

ಸ್ನೇಹ ಈ ಪದವೇ ಅಪ್ಯಾಯಮಾನವಾದದ್ದು. ಮನುಷ್ಯನ ಬದುಕಿನಲ್ಲಿ ಸ್ನೇಹ, ಸ್ನೇಹಿತರಿಗೆ ವಿಶೇಷ ಅರ್ಥ ಮತ್ತು ಜಾಗವಿದೆ. ಕುಟುಂಬ ಎಷ್ಟು ಮುಖ್ಯವೋ ಸ್ನೇಹಿತರು ಕೂಡ ಜೀವನದಲ್ಲಿ ಅಷ್ಟೇ ಮುಖ್ಯವಾಗಿರುತ್ತದೆ. ಸ್ನೇಹಿತರು ಕಷ್ಟಕ್ಕೆ, ನಮ್ಮ ಕಷ್ಟದ ಸಮಯದಲ್ಲಿ, ನಮ್ಮ ಸುಖ-ದುಃಖ ಹಂಚಿಕೊಳ್ಳಲು, ಜೀವನದಲ್ಲಿ ಸ್ವಲ್ಪ ಬದಲಾವಣೆ ಬೇಕೆಂದಾಗ ಹೊರಗೆ ಸುತ್ತಾಡಲು ಬೇಕಾಗುತ್ತದೆ.

ಸ್ನೇಹ ಈ ಪದವೇ ಅಪ್ಯಾಯಮಾನವಾದದ್ದು. ಮನುಷ್ಯನ ಬದುಕಿನಲ್ಲಿ ಸ್ನೇಹ, ಸ್ನೇಹಿತರಿಗೆ ವಿಶೇಷ ಅರ್ಥ ಮತ್ತು ಜಾಗವಿದೆ. ಕುಟುಂಬ ಎಷ್ಟು ಮುಖ್ಯವೋ ಸ್ನೇಹಿತರು ಕೂಡ ಜೀವನದಲ್ಲಿ ಅಷ್ಟೇ ಮುಖ್ಯವಾಗಿರುತ್ತದೆ. ಸ್ನೇಹಿತರು ಕಷ್ಟಕ್ಕೆ, ನಮ್ಮ ಕಷ್ಟದ ಸಮಯದಲ್ಲಿ, ನಮ್ಮ ಸುಖ-ದುಃಖ ಹಂಚಿಕೊಳ್ಳಲು, ಜೀವನದಲ್ಲಿ ಸ್ವಲ್ಪ ಬದಲಾವಣೆ ಬೇಕೆಂದಾಗ ಹೊರಗೆ ಸುತ್ತಾಡಲು ಬೇಕಾಗುತ್ತದೆ.

ಆದರೆ ಸ್ನೇಹಿತರು ಜೀವನದಲ್ಲಿ ಎಷ್ಟು ಮುಖ್ಯವೋ, ಯಾವಾಗ, ಹೇಗೆ ಅವರನ್ನು ನಿಭಾಯಿಸಿಕೊಳ್ಳಬೇಕು ಎಂಬುದು ತಿಳಿದಿದ್ದರೆ ಬದುಕು ಸೊಬಗು. ಇಂದು ಭಾರತದ ದೇಶದಲ್ಲಿ ಸ್ನೇಹಿತರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಇಂದು ಆನ್ ಲೈನ್ ನಲ್ಲಿ, ಸೋಷಿಯಲ್ ಮೀಡಿಯಾದಲ್ಲಿ ಸ್ನೇಹಿತರನ್ನು ಸಂಪಾದಿಸುವುದು ಸುಲಭವಾಗಿದೆ. ಅಂತಹ ಆನ್ ಲೈನ್ ನಲ್ಲಿ ಸ್ನೇಹ ಲೋಕದ ಗೆಳೆಯರ ಬಳಗ ಎಂದು ಐದೂವರೆ ವರ್ಷಗಳ ಹಿಂದೆ ರಘು ಭಾರದ್ವಾಜ್ ಮತ್ತು ಇತರ ಸ್ನೇಹಿತರು ಒಟ್ಟು ಸೇರಿ ಸ್ಥಾಪಿಸಿದರು.

ಬೆಂಗಳೂರಿನಂತಹ ನಗರದಲ್ಲಿ ಯಾಂತ್ರೀಕೃತ ಜೀವನ ಮಧ್ಯೆ ಆಗಾಗ ಸ್ನೇಹಿತರನ್ನು ಭೇಟಿ ಮಾಡಿ ಹರಟೆ ಹೊಡೆಯುವುದು, ಹೊರಗಡೆ ಸುತ್ತಾಡುವುದು, ಹೊಟೇಲ್ ಗೆ ಹೋಗುವುದು, ಬಿಡುವಾದಾಗ ರಮಣೀಯ ಸ್ಥಳಗಳಿಗೆ ಹೋಗುವುದು ಇತ್ಯಾದಿಗಳನ್ನು ಮಾಡುತ್ತಿದ್ದರೆ ಬದುಕಿನಲ್ಲಿ ಆಹ್ಲಾದಕರ ವಾತಾವರಣ ಇರುತ್ತದೆ. ಬದುಕಿನಲ್ಲಿ ಜೀವಂತಿಕೆ, ಆಸಕ್ತಿಯೂ ಇರುತ್ತದೆ.

ಇಂದು ಸ್ನೇಹಿತರ ದಿನಾಚರಣೆ ಬಗ್ಗೆ ರಘು ಭಾರದ್ವಾಜ್ ಹೀಗೆ ಹೇಳುತ್ತಾರೆ: ಹ್ಯಾಪಿ ಹುಟ್ಟು ಹಬ್ಬ ಸ್ನೇಹಲೋಕ.  ಹೇಗೆ  ಮೂರು ವರ್ಷಗಳಾಯಿತು ಗೊತ್ತೆ ಆಗಲಿಲ್ಲ. ಇಷ್ಟು ದಿನದಿಂದ ಜೊತೆಲಿರೋ ಸ್ನೇಹಿತರಿಗೂ ಹಾಗು ಜೊತೆಲಿ ಇಲ್ಲದಿದ್ದರೂ ಇನ್ ಬಾಕ್ಸ್ ನಲ್ಲಿ ಸಂಪರ್ಕ ದಲ್ಲಿ ಇರುವ ಎಲ್ಲಾ ಸ್ನೇಹಿತರಿಗೆ ಹೃದಯ ಪೂರ್ವಕ ಧನ್ಯವಾದಗಳು.  ಇದೊಂದು ಗುಂಪಲ್ಲ. ನನ್ನ ಎರಡನೇ ಮನೆ. ಇಲ್ಲಿನ ಸದಸ್ಯರು ನನಗೆ ಕುಟುಂಬದ ಹಾಗೆ. ನಮ್ಮ ಮನೆಗಳಲ್ಲಿ ಹೇಗೆ ಜಗಳ ಪ್ರೀತಿ ಇರುತ್ತದೆ ಹಾಗೆ ಇಲ್ಲು ಸಹ. ಕೆಲವು ಸರ್ತಿ ಜಗಳ ಆದರೂ ಮತ್ತೆ ಸರಿಹೋಗುತ್ತದೆ. ಅವೆಲ್ಲವನ್ನೂ ಮುನ್ನುಗ್ಗಿ ನಡೆಯೋಣ. ಈ ಸ್ನೇಹ ಪ್ರೀತಿ ವಿಶ್ವಾಸ ಸದಾ ಇರಲಿ ಎಂದು ಆಶಿಸುತ್ತಾರೆ. 

ಮೂರು ವರ್ಷಗಳ ಹಿಂದೆ ರಚನೆ: ಸ್ನೇಹಲೋಕ ಗೆಳೆಯರ ಬಳಗ ಆರಂಭವಾಗಿದ್ದು ಐದು ವರ್ಷಗಳ ಹಿಂದೆ. ಸ್ನೇಹಿತರೆ ಮೂರು  ವರ್ಷಗಳ ಹಿಂದೆ ಇದೇ ಸಮಯದಲ್ಲಿ ನಮ್ಮದು ಅಂಥ ಯಾಕೆ ಒಂದು ಗುಂಪು ಇರಬಾರದು ಎಂದು ಆರಂಭಿಸಿದರು. 

ಎಲ್ಲರೂ ಒಪ್ಪಿಕೊಂಡರು. ಆಗ ಶುರು ಆಯಿತು ಸ್ನೇಹದ ಕಡಲಲ್ಲಿ ಎಂದು ಫೇಸ್ ಬುಕ್ ಮತ್ತು ವಾಟ್ಸಾಪ್ ನಲ್ಲಿ ಗೆಳೆಯರ ಬಳಗ. ಈಗ ಆ ಗುಂಪಿಗೆ ಮೂರು ವರ್ಷಗಳ ಪ್ರಾಯ. ಆಗಸ್ಟ್ 23ಕ್ಕೆ ಮೂರು ವರ್ಷವಾಗುತ್ತದೆ. ಬಿಡುವಾದಾಗ ಗುಂಪಿನ ಸದಸ್ಯರು ಒಟ್ಟು ಸೇರುವುದು, ಹೊಟೇಲ್ ನಲ್ಲಿ ಒಟ್ಟಾಗಿ ಊಟ-ತಿಂಡಿ ಮಾಡುವುದು, ಹರಟುವುದು, ಗುಂಪಿನ ಸದಸ್ಯರು ಒಬ್ಬರಿಗೊಬ್ಬರು ಕಷ್ಟ-ಸುಖ ಹೇಳಿಕೊಳ್ಳುವುದು, ಅಗತ್ಯವಿರುವವರಿಗೆ ಸಹಾಯ ಮಾಡುವುದು, ಗುಂಪಿನಲ್ಲಿರುವವರು ಒಬ್ಬರಿಗೊಬ್ಬರು ಪರಿಚಯವಾಗಿ ಆ ಮೂಲಕ ತಮ್ಮ ಉದ್ಯಮ, ವ್ಯವಹಾರ, ವಹಿವಾಟುಗಳನ್ನು ಮಾಡಿಕೊಳ್ಳುವುದು, ಎಲ್ಲಾದರೂ ಬಿಡುವಾದಾಗ ಪ್ರವಾಸ ಹೋಗುವುದು, ಬೆಂಗಳೂರಿನ ಯಾವುದಾದರೂ ಸ್ಥಳಗಳಲ್ಲಿ ಒಟ್ಟು ಸೇರಿ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮ ಮಾಡುವುದು ಈ ಸ್ನೇಹಲೋಕ ಗೆಳೆಯರ ಬಳಗದ ಸದಸ್ಯರ ಚಟುವಟಿಕೆಗಳಾಗಿವೆ.

ಇಂದು ಸ್ನೇಹಲೋಕ ಗೆಳೆಯರ ಬಳಗದಲ್ಲಿ ಸಾವಿರಕ್ಕೂ ಹೆಚ್ಚು ಸದಸ್ಯರಿದ್ದಾರೆ. ಬೆಳಗ್ಗೆ ಗುಡ್ ಮಾರ್ನಿಂಗ್, ಶುಭೋದಯದಿಂದ ಹಿಡಿದು ರಾತ್ರಿ ಮಲಗುವ ತನಕ ಗುಡ್ ನೈಟ್, ಶುಭರಾತ್ರಿಯವರೆಗೆ ಸಂದೇಶಗಳು ಸದಸ್ಯರ ಮಧ್ಯೆ ವಿನಿಮಯವಾಗುತ್ತಿರುತ್ತದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT