ಸಾಂದರ್ಭಿಕ ಚಿತ್ರ 
ವಿಶೇಷ

ಪಶ್ಚಿಮ ಬಂಗಾಳ: ಅಪ್ರಾಪ್ತ ಬಾಲಕಿಯ ವಿವಾಹ ನಿಲ್ಲಿಸಿದ ಕ್ಲಾಸ್ ಮೇಟ್!

ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳ ವಿವಾಹವನ್ನು ಆಕೆಯ ಕ್ಲಾಸ್ ಮೇಟ್ ನಿಲ್ಲಿಸಿರುವ ಘಟನೆ ಪಶ್ಚಿಮ ಬಂಗಾಳದ ಪಶ್ಚಿಮ ಮಿಡ್ನಾಪುರ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.

ಕೊಲ್ಕತ್ತ: ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳ ವಿವಾಹವನ್ನು ಆಕೆಯ ಕ್ಲಾಸ್ ಮೇಟ್ ನಿಲ್ಲಿಸಿರುವ ಘಟನೆ ಪಶ್ಚಿಮ ಬಂಗಾಳದ ಪಶ್ಚಿಮ ಮಿಡ್ನಾಪುರ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.

ಕಳೆದ ವಾರದಿಂದ ತನ್ನ ಕ್ಲಾಸ್ ಮೇಟ್ ಶಾಲೆಗೆ ಗೈರು ಹಾಜರಿಯನ್ನು ಗಮನಿಸಿದ  ಗೊಲಾರ್ ಪ್ರೌಢಶಾಲೆಯ  10ನೇ ತರಗತಿ ವಿದ್ಯಾರ್ಥಿ ಶುಹಿಲಾ, ಮದುವೆ ನಿಗದಿಯಾಗಿರುವುದು ಗೊತ್ತಾಗಿದೆ. ನಂತರ ಆಕೆಯ ಮನೆಗೆ ತೆರಳಿ, ಶಾಲೆಗೆ ಕಳುಹಿಸುವಂತೆ ಒತ್ತಾಯಿಸಿದ್ದಾಳೆ. ಆದರೆ, ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಬಾಲಕಿಯ ಕುಟುಂಬ ಸದಸ್ಯರು ಹಿಂಬಾಗಿಲಿನ ಮೂಲಕ ವರನ ಮನೆಗೆ ರಹಸ್ಯವಾಗಿ ಹುಡುಗಿಯನ್ನು ಕಳುಹಿಸಿದ್ದಾರೆ.

ಈ ವಿಚಾರ ತಿಳಿಯುತ್ತಿದ್ದಂತೆಯೇ ಕ್ಲಾಸ್ ಮೇಟ್ ಶುಹಿಲಾ, ವರನ ಮನೆಗೆ ತೆರಳಿ, ಅನಿರ್ದಿಷ್ಟಾವದಿ ಪ್ರತಿಭಟನೆ ಆರಂಭಿಸಿದ್ದಾಳೆ. ಇದರಿಂದ ಸಮಸ್ಯೆಯಾಗುವುದನ್ನು ಅರಿತ ವರನ ಕಡೆಯವರು, ಬಾಲಕಿಯನ್ನು ಪ್ರತಿಭಟನಾನಿರತ ವಿದ್ಯಾರ್ಥಿ ಕೈಗೆ ಹಸ್ತಾಂತರಿಸಿದ್ದಾರೆ. ನಂತರ ಆಕೆಯನ್ನು ಶಾಲೆಗೆ ಕರೆದೊಯ್ಯಲಾಗಿದೆ. 

ವಿದ್ಯಾರ್ಥಿನಿ ಶುಹಿಲಾ ಧೈರ್ಯವನ್ನು ಶಾಲೆಯ ಮುಖ್ಯೋಪಾಧ್ಯಾಯ ಸುರೇಶ್ ಚಂದ್ರ ಪಾಡಿಯಾ ಕೊಂಡಾಡಿದ್ದಾರೆ. ಆಕೆಯ ಬದ್ಧತೆಯ ಕಾರಣದಿಂದ ಮದುವೆ ನಿಂತಿದೆ ಎಂದು ಅವರು ಹೇಳಿದ್ದಾರೆ.  18 ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲಿ ಮದುವೆ ಮಾಡುವುದಿಲ್ಲ ಎಂದು ಬಾಲಕಿಯ ಕುಟುಂಬಸ್ಥರು ಮಾತು ನೀಡಿದ್ದಾರೆ ಎಂದು ಬಿಡಿಒ ದೀಪಕ್ ಕುಮಾರ್ ಘೋಷ್ ಹೇಳಿದ್ದಾರೆ.

ಹಣಕಾಸಿನ ತೊಂದರೆಯಿಂದ ಬಾಲಕಿ ಕುಟುಂಬದವರು ಅಪ್ರಾಪ್ತ ವಯಸ್ಸಿನಲ್ಲಿ ಮದುವೆಗೆ ಮುಂದಾಗಿದ್ದರು ಎಂದು ಬಾಲಕಿಯ ನೆರೆಹೊರೆಯವರು ತಿಳಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT