ಯಶ್ ಮನ್ಸುಖಭಾಯಿ ಮೊರಾಡಿಯಾ 
ವಿಶೇಷ

ದುಬೈ: ಭಾರತೀಯ ಮೂಲದ ಯೋಗಪಟುವಿನಿಂದ 29 ನಿಮಿಷಗಳ ಕಾಲ ವೃಶ್ಚಿಕಾಸನ; ಗಿನ್ನೆಸ್ ವಿಶ್ವ ದಾಖಲೆ!

ದುಬೈನಲ್ಲಿ ನೆಲೆಸಿರುವ ಭಾರತೀಯ ಮೂಲದಯೋಗ ಶಿಕ್ಷಕರೊಬ್ಬರು 29 ನಿಮಿಷಗಳ ಕಾಲ ವೃಶ್ಚಿಕಾಸನದಲ್ಲಿದ್ದು ಗಿನ್ನೆಸ್ ದಾಖಲೆ ನಿರ್ಮಿಸಿದ್ದಾರೆ.

ದುಬೈ: ದುಬೈನಲ್ಲಿ ನೆಲೆಸಿರುವ ಭಾರತೀಯ ಮೂಲದಯೋಗ ಶಿಕ್ಷಕರೊಬ್ಬರು 29 ನಿಮಿಷಗಳ ಕಾಲ ವೃಶ್ಚಿಕಾಸನದಲ್ಲಿದ್ದು ಗಿನ್ನೆಸ್ ದಾಖಲೆ ನಿರ್ಮಿಸಿದ್ದಾರೆ. 

ಯೋಗ ಶಿಕ್ಷಕ ಯಶ್ ಮನ್ಸುಖಭಾಯಿ ಮೊರಾಡಿಯಾ ಅವರ ವೀಡಿಯೊವನ್ನು ಗಿನ್ನೆಸ್ ವರ್ಲ್ಡ್ಸ್ ರೆಕಾರ್ಡ್ಸ್ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪೋಸ್ಟ್ ಮಾಡಿದೆ.

21 ವರ್ಷ ವಯಸ್ಸಿನ ಇವರು ನಂಬಲಾಗದ 29 ನಿಮಿಷ ನಾಲ್ಕು ಸೆಕೆಂಡುಗಳ ಕಾಲ ವೃಶ್ಚಿಕಾಸನ ಭಂಗಿಯಲ್ಲೇ ಇದ್ದರು. ಈ ಮೂಲಕ ಈ ಹಿಂದಿನ  ನಾಲ್ಕು ನಿಮಿಷಗಳು ಮತ್ತು 47 ಸೆಕೆಂಡುಗಳ ಹಿಂದಿನ ದಾಖಲೆಯನ್ನು ಹಿಂದಿಕ್ಕಿದ್ದಾರೆ.   ಅಂತರಾಷ್ಟ್ರೀಯ ಯೋಗ ದಿನದಂದು ಈ ವಿಡಿಯೋನ ಹಂಚಿಕೊಳ್ಳಲಾಗಿದೆ.

ವೃಶ್ಚಿಕಾಸನವು ಯೋಗದ ಅಡಿಯಲ್ಲಿ ಬರುತ್ತದೆ. ಒಬ್ಬ ವ್ಯಕ್ತಿಯು ತನ್ನ ಮುಂದೋಳುಗಳನ್ನು ನೆಲದ ಮೇಲೆ ಮತ್ತು ಕಮಾನಿನ ರೀತಿ ಕಾಲುಗಳನ್ನು ತಲೆಯ ಮೇಲೆ ಇರಿಸಬೇಕಾಗುತ್ತದೆ. ವೃಶ್ಚಿಕಾಸನವು  ಸ್ಥಿರತೆಗೆ ಸಂಬಂಧಿಸಿದೆ. ನೀವು ಭಂಗಿಯನ್ನು ಎಷ್ಟು ಸಮಯ ಹಿಡಿದಿಟ್ಟುಕೊಳ್ಳುತ್ತೀರಿ, ನಿಮ್ಮ ಮಾನಸಿಕ ಸ್ಥಿತಿಸ್ಥಾಪಕತ್ವವನ್ನು ಸ್ಥಾಪಿಸಲು ನೀವು ಉತ್ತಮವಾಗಿ ಕಲಿಯುತ್ತೀರಿ ಎಂದು  ಮೊರಾಡಿಯಾ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಗೆ ತಿಳಿಸಿದರು.

2001ರಲ್ಲಿ ಜನಿಸಿದ ಅವರು ತಮ್ಮ ಎಂಟನೇ ವಯಸ್ಸಿನಲ್ಲಿ ಯೋಗ ಪಯಣವನ್ನು ಪ್ರಾರಂಭಿಸಿದರು. ಈ ವರ್ಷದ ಫೆಬ್ರವರಿ 22ರಂದು ಮೊರಾಡಿಯಾ ಅವರು ಈ ಪ್ರಯತ್ನವನ್ನು ಮಾಡಿದರು. ಅದು ಅನನ್ಯವಾಗಿದೆ ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಹೇಳಿದೆ.  ಮೊರಾಡಿಯಾ ಅವರು 2010 ರಿಂದ ನಿಯಮಿತವಾಗಿ ಯೋಗವನ್ನು ಅಭ್ಯಾಸ ಮಾಡಲು ಪ್ರಾರಂಭಿಸಿದರು.

ಗಿನ್ನೆಸ್ ದಾಖಲೆ ಸೃಷ್ಟಿಸುವ ಪ್ರಯತ್ನಕ್ಕೂ ಮುನ್ನ ಎರಡು ವರ್ಷಗಳ ಕಾಲ ತಯಾರಿ ನಡೆಸಿದ್ದರು ಎಂದು ಹೇಳಲಾಗಿದೆ ಮೊರಾಡಿಯಾ ಅವರು ಕೋವಿಡ್ 19 ಲಾಕ್‌ಡೌನ್ ಸಮಯದಲ್ಲಿ ಮನೆಯಲ್ಲಿ ಕಳೆದ ಹೆಚ್ಚುವರಿ ಸಮಯವನ್ನು ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಬಳಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

SCROLL FOR NEXT