ಸಂಗ್ರಹ ಚಿತ್ರ 
ವಿಶೇಷ

ಗದಗ: ಕುರಿ ಕಾಯುವ ಕುರುಬರಿಂದ ವಿಶಿಷ್ಟ ರೀತಿಯಲ್ಲಿ ದೀಪಾವಳಿ ಆಚರಣೆ!

ಪಟಾಕಿ ಸಿಡಿಸಿ, ಸಿಹಿ ಹಂಚಿ, ರಜಾ ದಿನಗಳನ್ನು ಆಚರಿಸುವ ಮೂಲಕ ದೀಪಾವಳಿಯನ್ನು ಆಚರಿಸುತ್ತಿರುವಾಗ, ಇಂತಹ ಆಸ್ವಾದನೆಯ ರೂಪಗಳಿಂದ ಮೌನವಾಗಿರುವ ಸಮುದಾಯಗಳಿವೆ ಎಂಬುದನ್ನು ನಾವು ಮರೆಯುತ್ತಿದ್ದೇವೆ. ಅವರ ಆಚರಣೆಗಳು ವಿಲಕ್ಷಣವಾಗಿ ಕಾಣಿಸಬಹುದು, ಆದರೆ ಹಿಂದಿನ ತಲೆಮಾರುಗಳಿಂದ ಅವರಿಗೆ ನೀಡಿದ ದೃಢವಾದ ನಂಬಿಕೆ ವ್ಯವಸ್ಥೆಯಿಂದ ಇದು ಹುಟ್ಟುಕೊಂಡಿದೆ.

ಗದಗ: ಪಟಾಕಿ ಸಿಡಿಸಿ, ಸಿಹಿ ಹಂಚಿ, ರಜಾ ದಿನಗಳನ್ನು ಆಚರಿಸುವ ಮೂಲಕ ದೀಪಾವಳಿಯನ್ನು ಆಚರಿಸುತ್ತಿರುವಾಗ, ಇಂತಹ ಆಸ್ವಾದನೆಯ ರೂಪಗಳಿಂದ ಮೌನವಾಗಿರುವ ಸಮುದಾಯಗಳಿವೆ ಎಂಬುದನ್ನು ನಾವು ಮರೆಯುತ್ತಿದ್ದೇವೆ. ಅವರ ಆಚರಣೆಗಳು ವಿಲಕ್ಷಣವಾಗಿ ಕಾಣಿಸಬಹುದು, ಆದರೆ ಹಿಂದಿನ ತಲೆಮಾರುಗಳಿಂದ ಅವರಿಗೆ ನೀಡಿದ ದೃಢವಾದ ನಂಬಿಕೆ ವ್ಯವಸ್ಥೆಯಿಂದ ಇದು ಹುಟ್ಟುಕೊಂಡಿದೆ.

ಈ ಅಲೆಮಾರಿ ಕುರುಬರು, ಇತರರು ಪಟಾಕಿಗಳನ್ನು ಸಿಡಿಸುತ್ತಿದ್ದರೂ ಸಹ, ತಮ್ಮ ಕುರಿಗಳ ಹಿಂಡುಗಳನ್ನು ಮೇಯಿಸಲು ಸ್ಥಳಗಳನ್ನು ಹುಡುಕುವಲ್ಲಿ ನಿರತರಾಗಿರುತ್ತಾರೆ. ಮಳೆ ಬರಲಿ, ಬಿಸಿಲೇ ಇರಲಿ ಅದಾವುದರ ಲೆಕ್ಕವಿಲ್ಲದೇ ಈ ಕುಟುಂಬ, ಕುರಿಗಳ ಸಮೇತ ಓಡಾಡುತ್ತಲೇ ಇರುತ್ತವೆ. ಈ ಟ್ರೆಕ್ಕಿಂಗ್ ಮತ್ತು ಕಠಿಣ ಜೀವನವನ್ನು ನಡೆಸುತ್ತಿರುವ ನಡುವೆ, ಅವರು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ದೀಪಾವಳಿಯನ್ನು ಆಚರಿಸಲು ಮರೆಯುವುದಿಲ್ಲ. ಗದಗ ಜಿಲ್ಲೆಯ ನರೇಗಲ್ ಪಟ್ಟಣದ ಬಳಿ ಇಂತಹ ಒಂದು ಕುರುಬರ ಗುಂಪಿದೆ. ಎಡೆಬಿಡದೆ ಮಳೆ ಸುರಿಯುತ್ತಿದ್ದರಿಂದ ಹೊರವಲಯದಲ್ಲಿ ಬಿಡಾರ ಹೂಡಿ ಐದು ದಿನಗಳು ಅಥವಾ ಅದಕ್ಕಿಂತ ದಿನಗಳ ಕಾಲ ತಮ್ಮ ಊರಿನಿಂದ ದೂರದಲ್ಲಿ ಹಬ್ಬವನ್ನು ಆಚರಿಸುತ್ತಾರೆ.

ಪಾಡ್ಯದ ಬೆಳಿಗ್ಗೆ, ಅವರು ತಮ್ಮ ಕುರಿ ಮಂದೆಯನ್ನು ಪೂಜಿಸುತ್ತಾರೆ ಮತ್ತು ಹಾಲು ಕುದಿಸಿ ಸಿಹಿ ಮಾಡಿ ತಿಂದು ಸಂಭ್ರಮಿಸುತ್ತಾರೆ, ಇದು ಮುಂದಿನ ಹುಲ್ಲುಗಾವಲು ಹುಡುಕುವ ದಿಕ್ಕನ್ನು ತೋರಿಸುತ್ತದೆ ಎಂದು ನಂಬಿದ್ದಾರೆ. ಉಳಿದ ದಿನಗಳಲ್ಲಿ ಲಕ್ಷ್ಮಿ ಪೂಜೆ ಮತ್ತಿತರ ಆಚರಣೆಗಳನ್ನು ಮಾಡುತ್ತಾರೆ. ಅವರು ಕುರಿಮಂದೆಯ ಮುಂದೆ ದೀಪವನ್ನು ಇಟ್ಟು, ಮಡಕೆಯ ಮುಂದೆ ಕೊಡಲಿ, ಚಾಕು ಮುಂತಾದ ಆಯುಧಗಳನ್ನು ಜೋಡಿಸಿ, ಕುಂಕುಮ ಮತ್ತು ಅರಿಶಿಣ ಇಟ್ಟು ಪೂಜೆ ಮಾಡಿ ಸಮೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ಸಗಣಿ ಸಂಗ್ರಹಿಸಿ ನೆಲದ ಮೇಲೆ ಹರಡಿ, ಅದರ ಒಂದು ಭಾಗವನ್ನು ಮಡಿಕೆಯಲ್ಲಿ ಇಡಲಾಗುತ್ತದೆ. 

ಕುರುಬರು ಸಿಹಿ ತಿನಿಸುಗಳು, ಅನ್ನ, ಸಾಂಬಾರು ಮತ್ತು ಹಪ್ಪಳಗಳನ್ನು ತಯಾರಿಸಿ, ಮೊದಲು ತಮ್ಮ ಹಿಂಡಿಗೆ ಅರ್ಪಿಸುತ್ತಾರೆ ಬಳಿಕ ಊಟ ಮಾಡುತ್ತಾರೆ. ಈ ಪೂಜೆಯ ಮೂಲಕ ಅವರಿಗೆ ಕುರಿಮಂದೆಯನ್ನು ಯಾವ ದಿಕ್ಕಿನಲ್ಲಿ ಮುನ್ನಡೆಸಬೇಕೆಂದು ತಿಳಿಯುತ್ತಾರೆ. ಗುಂಪಿನಲ್ಲಿರುವ ಮಹಿಳೆಯರು ಸಮೀಪದ ಹಳ್ಳಿಗಳಲ್ಲಿ ಕುರಿ ಹಾಲು ಮಾರಾಟ ಮಾಡುತ್ತಾರೆ, ನೀರು ತರುತ್ತಾರೆ ಮತ್ತು ಅಡುಗೆ ಮಾಡುತ್ತಾರೆ. ಕೆಲವು ಮಹಿಳೆಯರು ಬಟ್ಟೆಗಳನ್ನು ಹೊಲಿದು ಮಾರಾಟ ಮಾಡುತ್ತಾರೆ. 

ನರೇಗಲ್ ಬಳಿ ಕುಟುಂಬ ಸಮೇತ ದೀಪಾವಳಿ ಆಚರಿಸಿದ ಕುರುಬ ಸಮುದಾಯದ ಕಳಕಪ್ಪ ರಾಠೋಡೆ ಅವರು ಮಾತನಾಡಿ, ನಾವು ಗಜೇಂದ್ರಗಡದಿಂದ ಬಂದಿದ್ದೇವೆ. ನಿಲ್ಲದ ಮಳೆ ನಮ್ಮನ್ನು ಇಲ್ಲಿ ನಿಲ್ಲಿಸುವಂತೆ ಮಾಡಿತು. ಈ ಬಾರಿ, ಕುದಿಯುವ ಹಾಲು ನಮಗೆ ದಕ್ಷಿಣದ ಕಡೆಗೆ ದಾರಿ ತೋರಿಸಿತು ಮತ್ತು ನಾವು ಆ ದಿಕ್ಕಿನಲ್ಲಿ ಹೋಗುತ್ತೇವೆ. ನಮ್ಮ ಪ್ರಯಾಣದ ಸಮಯದಲ್ಲಿ ನಾವು ಕಪ್ಪತಗುಡ್ಡವನ್ನು ಕಂಡುಕೊಳ್ಳುತ್ತೇವೆ ಮತ್ತು ಎರಡು ದಿನಗಳಲ್ಲಿ ಅಲ್ಲಿಗೆ ತಲುಪುತ್ತೇವೆ. ನಾವು 70 ಕುರಿಗಳ ಹಿಂಡುಗಳೊಂದಿಗೆ 12 ಜನರ ಗುಂಪನಲ್ಲಿ ಮುನ್ನಡೆಯುತ್ತಿದ್ದೇವೆ ಎಂದರು.

ಗಜೇಂದ್ರಗಡದ ರಾಜೂರು ಗ್ರಾಮದ ಇನ್ನೊಂದು ಗುಂಪಿನ ಸದಸ್ಯರು ಮಾತನಾಡಿ, ಬಾಗಲಕೋಟೆ ಜಿಲ್ಲೆ ಸಮೀಪದ ನಾಗೇಂದ್ರಗಡದ ಹೊರವಲಯದಲ್ಲಿ ದೀಪಾವಳಿ ಆಚರಿಸಿದ್ದೇವೆ. ನಾವು ನಮ್ಮಲ್ಲಿ 19 ಜನರಿದ್ದೇವೆ ಮತ್ತು ನಮ್ಮ ಹಿಂಡುಗಳನ್ನು ಮೇಯಿಸಲು ಸ್ಥಳವನ್ನು ಹುಡುಕಲು ನಾವು ಬೆಟ್ಟಗಳು ಮತ್ತು ಕಾಡುಗಳನ್ನು ಸುತ್ತಬೇಕಾಗಿತ್ತು. ನಾಗೇಂದ್ರಗಡದ ಬಳಿ ಹಾಲನ್ನು ಕುದಿಸಿ ಪ್ರಾರ್ಥಿಸಿದಾಗ ಬಳ್ಳಾರಿ ಕಡೆಗೆ ದಾರಿ ತೋರಿಸಿತು. ಆದರೂ ನಿರಂತರ ಮಳೆಯು 114 ಕುರಿಗಳ ಹಿಂಡಿನೊಂದಿಗೆ ತಿರುಗಾಡಲು ಕಷ್ಟಕರವಾಗಿದೆ ಎಂದು ಹೇಳಿದ್ದಾರೆ.

ಗಜೇಂದ್ರಗಡದ ಮಹಿಳೆ ಲಾಲವ್ವ ಮಾತನಾಡಿ, ಕುರಿ ಹಾಲು ಬೇಕಾದವರಿಗೆ ಮಾರಾಟ ಮಾಡುತ್ತೇವೆ. ನಮ್ಮ ಮಕ್ಕಳಿಗೆ ಒಳ್ಳೆಯ ಕೆಲಸ ಸಿಗಲಿ ಎಂದು ಕೆಲವರು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದಾರೆ. ನಮ್ಮ ವಲಸೆಯಿಂದಾಗಿ ಅವರು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಹೇಳಿದರು.

ಪಾಂಡವರ ಪೂಜೆ
ಅಲೆಮಾರಿ ಕುರುಬರು ಹಸುವಿನ ಸಗಣಿ ಬಳಸಿ ಪಾಂಡವರ ಮೂರ್ತಿಗಳನ್ನು ತಯಾರಿಸುತ್ತಾರೆ. ಈ ಮೂರ್ತಿಗಳಿಗೆ ನೈವೇದ್ಯ ಅರ್ಪಿಸಿ, ಆರೋಗ್ಯ ಮತ್ತು ಸಮೃದ್ಧಿಗಾಗಿ ದೇವರನ್ನು ಪೂಜಿಸುತ್ತಾರೆ. ದೀಪಾವಳಿಗೆ ಹೊಂದಿಕೆಯಾಗುವ ತಮ್ಮ ಆಚರಣೆಗಳನ್ನು ಹಟ್ಟಿ ಪೂಜೆ ಎಂದು ಕರೆಯುತ್ತಾರೆ.

ದೀಪೋತ್ಸವ
ಕುರುಬರು ತಮ್ಮ ಹಟ್ಟಿಯನ್ನು ಅಥವಾ ಹಿಂಡುಗಳಿಗೆ ವಿಶ್ರಾಂತಿ ನೀಡುವ ಸ್ಥಳವನ್ನು ಸ್ವಚ್ಛಗೊಳಿಸುತ್ತಾರೆ ಮತ್ತು ದೀಪಾವಳಿಯ ಎಲ್ಲಾ ಐದು ದಿನಗಳಲ್ಲಿ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಹಲವಾರು ದೀಪಗಳನ್ನು ಬೆಳಗಿಸುತ್ತಾರೆ. ಪ್ರತಿದಿನ ಸಂಜೆ ತಮ್ಮ ಹಟ್ಟಿಯಲ್ಲಿ ದೀಪೋತ್ಸವ ಆಚರಿಸಲು ಸೇರುತ್ತಾರೆ. ಈ ವರ್ಷ ಸೂರ್ಯಗ್ರಹಣದ ನಂತರ ಕುರುಬರು ಅಮಾವಾಸ್ಯೆಯಂದು ಸಮೀಪದ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಹಿಂತಿರುಗಿದ ನಂತರ, ಅವರು ತಮ್ಮ ಪ್ರಧಾನ ದೇವರನ್ನು ಪೂಜಿಸುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಲಬುರಗಿ: ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಕರ್ನಾಟಕದ ಅಂಧ ಕ್ರಿಕೆಟ್ ಆಟಗಾರ್ತಿಯರಿಗೆ ತಲಾ 10 ಲಕ್ಷ ರೂ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ನಾಯಕತ್ವ ಬದಲಾವಣೆ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

SCROLL FOR NEXT