ಶಾಲೆಯಲ್ಲಿ ಕೊಳವೆ ಬಾವಿ ಕೊರೆಯಿಸಿದ ಶಿಕ್ಷಕಿಯರು. 
ವಿಶೇಷ

ಸರ್ಕಾರಿ ಶಾಲೆಗೆ ಹೊಸ ರೂಪ: ನೂರಾರು ವಿದ್ಯಾರ್ಥಿಗಳಿಗೆ ಆಶಾಕಿರಣವಾದ ಶಿಕ್ಷಕಿಯರು..!

ಶಾಲೆಯು 12 ಎಕರೆ ಜಾಗದಲ್ಲಿದ್ದು, ಇಲ್ಲಿ ಅಂಗನವಾಡಿ. ಕಿರಿಯ ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜನ್ನು ನಡೆಸಲಾಗುತ್ತಿದೆ. ಈ ಭೂ ಪ್ರದೇಶ ಮಲೆನಾಡಿನ ಹಸಿರು ವಲಯದಲ್ಲಿದ್ದರೂ, ಬೇಸಿಗೆಯಲ್ಲಿ ನೀರಿನ ಕೊರತೆ ತೀವ್ರವಾಗಿ ಕಾಡುತ್ತದೆ.

ಚಿಕ್ಕಮಗಳೂರು: ವಿದ್ಯಾರ್ಥಿಗಳ ಕೊರತೆ, ಮೂಲಭೂತ ಸೌಕರ್ಯಗಳ ಕಡೆಗಣನೆಯಿಂದ ಸರ್ಕಾರಿ ಶಾಲೆಗಳನ್ನು ಮುಚ್ಚುವ ಸ್ಥಿತಿ ಎದುರಾಗಿದೆ. ಸರ್ಕಾರಿ ಶಾಲೆಗಳು ಇತ್ತೀಚಿನ ದಿನಗಳಲ್ಲಿ ಬಾಗಿಲು ಹಾಕುತ್ತಿವೆ. ಆದರೆ, ಚಿಕ್ಕಮಗಳೂರಿನ ಈ ಸರ್ಕಾರಿ ಶಾಲೆ ಮುಚ್ಚುವ ಹಂತದಿಂದ ಮತ್ತೆ ಪುನರುಜ್ಜೀವನಗೊಂಡಿದೆ. ಶಾಲೆ ಮತ್ತೆ ಉಳಿಯಲು ಶಾಲೆಯ ಶಿಕ್ಷಕರ ಪರಿಶ್ರಮವಿದೆ.

ಮಚಗೊಂಡನಹಳ್ಳಿ ಗ್ರಾಮದ ಸರ್ಕಾರಿ ಶಾಲೆ ಪುನಶ್ಚೇತನಕ್ಕೆ ಶಿಕ್ಷಕಿಯರಾದ ಹಿನಾ ತಬಸ್ಸುಮ್ ಮತ್ತು ರಜಿಯಾ ಸುಲ್ತಾನ ಅವರು ಸಾಕಷ್ಟು ಶ್ರಮ ಪಟ್ಟಿದ್ದಾರೆ.

ಪೋಷಕರಲ್ಲಿ ಜಾಗೃತಿ ಮೂಡಿಸುವುದರಿಂದ ಹಿಡಿದು ಮಕ್ಕಳನ್ನು ಶಾಲೆಗೆ ಸೇರಿಸುವವರೆಗೆ, ಮಕ್ಕಳಿಗೆ ಕುಡಿಯುವ ನೀರು ಸಿಗುವಂತೆ ಮಾಡಲು ಕೊಳವೆ ಬಾವಿ ಕೊರೆಯಲು ತಮ್ಮ ಉಳಿತಾಯ ಬಳಕೆ ಹಾಗುೂ ಕುಟುಂಬಸ್ಥರಿಂದ ನೆರವು ಪಡೆದಿದ್ದಾರೆ. ಈ ಇಬ್ಬರೂ ಶಿಕ್ಷಕಿಯರು ಇಂದು ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿರುವ ನೂರಾರು ವಿದ್ಯಾರ್ಥಿಗಳಿಗೆ ಆಶಾಕಿರಣವಾಗಿದ್ದಾರೆ.

ಶಾಲೆಯು 12 ಎಕರೆ ಜಾಗದಲ್ಲಿದ್ದು, ಇಲ್ಲಿ ಅಂಗನವಾಡಿ. ಕಿರಿಯ ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜನ್ನು ನಡೆಸಲಾಗುತ್ತಿದೆ. ಈ ಭೂ ಪ್ರದೇಶ ಮಲೆನಾಡಿನ ಹಸಿರು ವಲಯದಲ್ಲಿದ್ದರೂ, ಬೇಸಿಗೆಯಲ್ಲಿ ನೀರಿನ ಕೊರತೆ ತೀವ್ರವಾಗಿ ಕಾಡುತ್ತದೆ.

ನೀರಿನ ಸಮಸ್ಯೆ ವೇಳೆ ಸ್ಥಳೀಯ ಗ್ರಾಮ ಪಂಚಾಯಿತಿಯು 300 ಮನೆಗಳಿಗೆ ಮತ್ತು ಶಾಲೆಗೆ ನೀರು ಸರಬರಾಜು ಮಾಡುತ್ತದೆ, ಆದರೆ, ಇದನ್ನು ಸರದಿ ಆಧಾರದ ಮೇಲೆ ಮಾಡಲಾಗುತ್ತದೆ. ಶಾಲೆಗೆ ಮೂರು ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುತ್ತದೆ, ಅದೂ ಕೂಡ ಗ್ರಾಮದ ಮನೆಗಳ ಬೇಡಿಕೆಗಳನ್ನು ಪೂರೈಸಿದ ನಂತರವೇ ಇತರೆ ಅನುಕೂಲಗಳಿಗೆ ಸರಬರಾಜು ಮಾಡುತ್ತದೆ.

ಕುಡಿಯುವ ನೀರು ಮಕ್ಕಳನ್ನು ಸಾಕಷ್ಟು ಬಾಧಿಸುತ್ತಿತ್ತು. ಕೊಳವೆ ಬಾವಿ ಕೂಡ ಬತ್ತಿ ಹೋಗಿದ್ದವು. ಹೀಗಾಗಿ, ನಾವು ನಮ್ಮ ಉಳಿತಾಯದ ಹಣ ಹಾಗೂ ಕುಟುಂಬಸ್ಥರ ನೆರವನಿಂದ ಕೊಳವೆ ಬಾವಿ ಕೊರೆಯಲು ಮುಂದಾಗಿದ್ದೆವು. ಎರಡು ಬಾರಿ ನಡೆಸಿದ ಪ್ರಯತ್ನ ವಿಫಲವಾಗಿತ್ತು. ಮಾರ್ಚ್.26 ರಂಜದು ಮೂರನೇ ಬಾರಿಗೆ ನಡೆಸಿದ ಪ್ರಯತ್ನ ಯಶಸ್ವಿಯಾಗಿತ್ತು. ಮೂಲಭೂತ ಸೌಕರ್ಯಗಳು ಅಭಿವೃದ್ಧಿಗೊಂಡ ಬಳಿಕ ಶಾಲೆಯಲ್ಲಿ ಬೆರಳೆಣಿಕೆಯಷ್ಟಿದ್ದ ವಿದ್ಯಾರ್ಥಿಗಳ ಸಂಖ್ಯೆ 250ಕ್ಕೆ ಹೆಚ್ಚಾಗಿದೆ. ನಮ್ಮಲ್ಲಿ ಎಲ್‌ಕೆಜಿಯಿಂದ 7 ನೇ ತರಗತಿಯವರೆಗೆ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುತ್ತಿರುವ 250 ವಿದ್ಯಾರ್ಥಿಗಳು ಇದ್ದಾರೆ ಎಂದು ಕಳೆದ 25 ವರ್ಷಗಳಿದ ಶಾಲೆಯಲ್ಲಿ ಬೋಧಿಸುತ್ತಿರುವ ಶಿಕ್ಷಕಿ ಹೀನಾ ಅವರು ಹೇಳಿದ್ದಾರೆ.

ರಜಿಯಾ ಸುಲ್ತಾನ ಮತ್ತು ಹಿನಾ ತಬಸ್ಸುಮ್

ವ್ಯವಸ್ಥೆಯನ್ನು ದೂಷಿಸಿ ಹಿಂದೆ ಸರಿಯಲು ಸಾಧ್ಯವಿಲ್ಲ. ನಾವು ನಮ್ಮ ವಿದ್ಯಾರ್ಥಿಗಳ ಪರವಾಗಿ ಹೆಜ್ಜೆ ಇಡಬೇಕು. ಕೇವಲ ಬೋಧಿಸುವುದಷ್ಟೇ ಅಲ್ಲ, ಮಕ್ಕಳ ಕಾಳಜಿ ಕೂಡ ವಹಿಸಬೇಕು. ನಮ್ಮ ಮನಸ್ಥಿತಿಯನ್ನು ನಮ್ಮ ಕುಟುಂಬ ಅರ್ಥ ಮಾಡಿಕೊಂಡಿತು. ನಮಗೆ ಸಂಪೂರ್ಣ ಬೆಂಬಲ ನೀಡಿತು ಎಂದು ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ವಿವೇಕ ಯೋಜನೆಯಡಿಯಲ್ಲಿ 53 ಲಕ್ಷ ರೂ. ವೆಚ್ಚದಲ್ಲಿ ನಾಲ್ಕು ಕೋಣೆಗಳ ಹೊಸ ಕಟ್ಟಡವನ್ನು ನಿರ್ಮಿಸಲಾಗಿದೆ. ಕಟ್ಟಡವನ್ನು ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಅವರು ಉದ್ಘಾಟಿಸಿದರು. ಆದರೆ, ಕಟ್ಟಡದಲ್ಲಿ ಹಲವು ಸಮಸ್ಯೆಗಳಿವೆ. ಕಟ್ಟಡದಲ್ಲಿ ಧ್ವಜಸ್ತಂಭ ವೇದಿಕೆ ಇಲ್ಲ, ದೈಹಿಕ ಶಿಕ್ಷಣ ಶಿಕ್ಷಕರಿಲ್ಲ, ಪ್ರಾರ್ಥನಾ ಮಂದಿರ ಅಥವಾ ಅಡುಗೆಮನೆ ಇಲ್ಲ. ಮಳೆಗಾಲದಲ್ಲಿ ವಿದ್ಯಾರ್ಥಿಗಳು ಮಧ್ಯಾಹ್ನದ ಊಟವನ್ನು ಬಯಲಿನಲ್ಲಿ ತಿನ್ನುತ್ತಾರೆ. ಇದು ನೋವು ತರುತ್ತದೆ ಎಂದು ಮುಖ್ಯೋಪಾಧ್ಯಾಯಿನಿ ಸವಿತಾ ಹೇಳಿದ್ದಾರೆ.

ಸ್ಥಳೀಯ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (SDMC) ಶಿಕ್ಷಕರ ಪ್ರಯತ್ನಗಳಿಗೆ ಬೆಂಬಲ ನೀಡಿದೆ. MPLAD ಯೋಜನೆಯಡಿಯಲ್ಲಿ ಹೆಣ್ಣುಮಕ್ಕಳಿಗೆ ಶೌಚಾಲಯ ನಿರ್ಮಿಸಲು 25 ಲಕ್ಷ ರೂ.ಗಳನ್ನು ಮಂಜೂರು ಮಾಡಲಾಗಿದೆ, ಆದರೆ. ನಿರ್ಮಾಣ ಇನ್ನೂ ಪ್ರಾರಂಭವಾಗಿಲ್ಲ ಎಂದು ತಿಳಿಸಿದ್ದಾರೆ.

ಸ್ಥಳೀಯ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ ಅಧ್ಯಕ್ಷ ಲೋಕೇಶ್ ಮತ್ತು ಸದಸ್ಯ ಅಣ್ಣಪ್ಪ ಅವರು ಮಾತನಾಡಿ, ಶಿಕ್ಷಕಿಯರಾದ ಹಿನಾ ಮತ್ತು ರಜಿಯಾ ಅವರ ಉಪಕ್ರಮವನ್ನು ಶ್ಲಾಘಿಸಿದ್ದಾರೆ. ಈ ಶಿಕ್ಷಕರು ಇತರರಿಗೆ ಮಾದರಿಯಾಗಿದ್ದಾರೆ. ಶಾಲೆ ಅಭಿವೃದ್ಧಿಗೆ ಇನ್ನೂ ಸಾಕಷ್ಟು ಮಾಡಬೇಕಾಗಿದೆ. ಶಾಲೆಯ ಗಡಿಯಲ್ಲಿ ನೆಟ್ಟ ಸಸಿಗಳನ್ನು ಕಿಡಿಗೇಡಿಗಳು ಕದ್ದೊಯ್ದಿದ್ದಾರೆ. ಶಾಲೆಯನ್ನು ರಕ್ಷಿಸಲು ಕಾಂಪೌಂಡ್ ಗೋಡೆ ನಿರ್ಮಾಣದ ಅಗತ್ಯವಿದೆ ಎಂದು ಹೇಳಿದ್ದಾರೆ.

ಸರ್ವ ಧರ್ಮ ಸಂಘದ ಅಧ್ಯಕ್ಷ ಕೆ. ಭರತ್ ಅವರು ಶಿಕ್ಷಕರ ನಿಸ್ವಾರ್ಥ ಕಾರ್ಯವನ್ನು ಶ್ಲಾಘಿಸಿದ್ದಾರೆ. ಶಿಕ್ಷಕರ ಸಮರ್ಪಣಾ ಭಾವದಿಂದ ಪ್ರಭಾವಿತನಾಗಿ ಶಾಲೆಗೆ ಭೇಟಿ ನೀಡಿ ಅವರನ್ನು ಸನ್ಮಾನಿಸಿದೆ. ಹೀನಾ ಮತ್ತು ರಜಿಯಾ ಮಾಡಿರುವ ಕಾರ್ಯ ಶ್ಲಾಘನೀಯವಾದದ್ದು. ಸರ್ಕಾರಿ ಶಾಲೆಗಳಲ್ಲಿ ಹೆಚ್ಚಿನ ಶಿಕ್ಷಕರು ಈ ರೀತಿಯ ಮನಸ್ಥಿತಿ ತೋರಿಸಿದರೆ, ಸರ್ಕಾರಿ ಸಂಸ್ಥೆಗಳು ಖಾಸಗಿ ಸಂಸ್ಥೆಗಳನ್ನು ಮೀರಿಸಬಹುದು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT