ವೈದ್ಯರು (ಸಂಗ್ರಹ ಚಿತ್ರ) online desk
ವಿಶೇಷ

ಬಡವರ ಪಾಲಿನ ಸಂಜೀವಿನಿ 'ABF': ಸಹಾಯವಾಣಿ ಮೂಲಕ 900 BPL ಕುಟುಂಬಗಳಿಗೆ ನೆರವು; 2 ಕೋಟಿ ರೂ ವೈದ್ಯಕೀಯ ವೆಚ್ಚ ಉಳಿತಾಯ!

ಸಂಸ್ಥೆಯು 900 ಮಂದಿ ಬಿಪಿಎಲ್ ಕುಟುಂಬಗಳ ರೋಗಿಗಳಿಗೆ ಸಹಾಯ ಮಾಡಿದ್ದು, ಸೂಕ್ತ ಮಾರ್ಗದರ್ಶನ, ಕೈಗೆಟುಕುವ ಚಿಕಿತ್ಸಾ ಆಯ್ಕೆಗಳನ್ನು ನೀಡುವ ಮೂಲಕ ಬಡವರ 2 ಕೋಟಿ ರೂ.ಗೂ ಹೆಚ್ಚಿನ ವೈದ್ಯಕೀಯ ವೆಚ್ಚವನ್ನು ಉಳಿತಾಯ ಮಾಡಿದೆ.

ಬೆಂಗಳೂರು: ವೈದ್ಯರೆಂದರೆ ಕೆಲವರಿಗೆ ಭಯ, ಕೆಲವರಿಗೆ ಆತಂಕ, ಕೆಲವರಿಗೆ ಗೌರವ, ಕೆಲವರಿಗೆ ಸಿಟ್ಟು, ಮತ್ತೆ ಕೆಲವರಿಗೆ ದೇವರು, ಇನ್ನೂ ಕೆಲವರಿಗೆ... ಯಮ! ವೈದ್ಯೋ ನಾರಾಯಣ ಹರಿ ಎಂದು ಸಂಸ್ಕೃತ ಶ್ಲೋಕಗಳು ವೈದ್ಯರನ್ನು ಬಣ್ಣಿಸುತ್ತವೆ. ಅಂದರೆ ವೈದ್ಯರು ದೇವರಿಗೆ ಸಮಾನ ಎನ್ನುವ ಅರ್ಥ ಬರುತ್ತದೆ. ಇಂತಹದ್ದೇ ಸಾಲಿಗೆ ವೈದ್ಯರು, ಎಂಜಿನಿಯರ್‌ಗಳು ಸೇರಿದಂತೆ 30 ಮಂದಿ ವೃತ್ತಿಪರರು ಸೇರಿ ಆರಂಭಿಸಿರುವ ಆಕ್ಟಿವ್ ಬೆಂಗಳೂರು ಫೌಂಡೇಶನ್ (ಎಬಿಎಫ್) ಸಂಸ್ಥೆ ಕೂಡ ಸೇರಿದೆ.

ಕೋವಿಡ್-19 ಸಮಯದಲ್ಲಿ ಸಂಸ್ಥೆ ರಚನೆಗೊಂಡಿದ್ದು, ಸಂಸ್ಥೆ ಆರಂಭಿಸಿದ್ದ 'ಎಬಿಎಫ್ ಹೆಲ್ತ್ ಇನಿಶಿಯೇಟಿವ್' ಯೋಜನೆ ಇಂದು ಸಾಕಷ್ಟು ಮಂದಿ ಬಡವರ ಪಾಲಿಗೆ ಸಂಜೀವಿನಿಯಾಗಿದೆ.

ಸಂಸ್ಥೆಯು 900 ಮಂದಿ ಬಿಪಿಎಲ್ ಕುಟುಂಬಗಳ ರೋಗಿಗಳಿಗೆ ಸಹಾಯ ಮಾಡಿದ್ದು, ಸೂಕ್ತ ಮಾರ್ಗದರ್ಶನ, ಕೈಗೆಟುಕುವ ಚಿಕಿತ್ಸಾ ಆಯ್ಕೆಗಳನ್ನು ನೀಡುವ ಮೂಲಕ ಬಡವರ 2 ಕೋಟಿ ರೂ.ಗೂ ಹೆಚ್ಚಿನ ವೈದ್ಯಕೀಯ ವೆಚ್ಚವನ್ನು ಉಳಿತಾಯ ಮಾಡಿದೆ.

ಕೋವಿಡ್-19 ಬಡವರನ್ನು ಹೆಚ್ಚಿ ಬಾಧಿಸಿತ್ತು. ಈ ವೇಳೆ ಆರೋಗ್ಯ ಸಮಸ್ಯೆ ಎದುರಾದಾಗಾ ಬಡವರಿಗೆ ದಿಕ್ಕುತೋಚದಂತಾಗಿತ್ತು. ಅನೇಕ ಬಡ ಕುಟುಂಬಗಳು ಎಲ್ಲಿಗೆ ಹೋಗಬೇಕು, ಚಿಕಿತ್ಸೆಯನ್ನು ಹೇಗೆ ಪಡೆಯಬೇಕು. ಸರ್ಕಾರಿ ಆರೋಗ್ಯ ಯೋಜನೆಗಳನ್ನು ಬಳಸಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಯಲು ಯತ್ನಿಸುತ್ತಿದ್ದರು. ಈ ವೇಳೆ ರಚನೆಯಾಗಿದ್ದೇ ಆಕ್ಟಿವ್ ಬೆಂಗಳೂರು ಫೌಂಡೇಶನ್.

ಸಂಸ್ಥೆಯು 24x7 ವೈದ್ಯಕೀಯ ಸಹಾಯವಾಣಿ ಆರಂಭಿಸಿದ್ದು, ಈ ಮೂಲಕ ಬಿಪಿಎಲ್ ಕುಟುಂಬಗಳಿಗೆ ಸಹಾಯ ನೆರವಿನ ಹಸ್ತ ಚಾಚಿದೆ.

ಸಹಾಯವಾಣಿಯು ಕರೆ ಮಾಡುವವರಿಗೆ ಜಿಲ್ಲಾ ಶಸ್ತ್ರಚಿಕಿತ್ಸಕರು, ಸರ್ಕಾರಿ ಆಸ್ಪತ್ರೆಗಳಿಗೆ ಸಂಪರ್ಕಿಸುವಂತೆ ಮಾಡಲಾಗುತ್ತದೆ. ನಂತರ ಅವರಿಗೆ ಅವರ ಸಮಸ್ಯೆಗೆ ವೈದ್ಯಕೀಯ ಚಿಕಿತ್ಸೆ, ಪ್ರಯೋಜನಗಳನ್ನು ಹೇಗೆ ಪಡೆಯುವುದು ಎಂಬುದನ್ನು ಅರ್ಥಮಾಡಿಸಲಾಗುತ್ತದೆ.

ಈ ಸಹಾಯವಾಣಿಯು ನೇರ ವೈದ್ಯಕೀಯ ಸಲಹೆ, ಆರ್ಥಿಕ ನೆರವು ಅಥವಾ ಚಿಕಿತ್ಸೆಯನ್ನು ನೀಡುವುದಿಲ್ಲ, ಬದಲಿಗೆ ಅಸ್ತಿತ್ವದಲ್ಲಿರುವ ಸರ್ಕಾರಿ ಸೇವೆಗಳನ್ನು ಪಡೆಯಲು ಸಹಾಯ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಸಂಸ್ಥೆಯಲ್ಲಿ ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಿರುವ ತೌಸೀಫ್ ಅಹ್ಮದ್ ಅವರು ಹೇಳಿದ್ದಾರೆ.

ಸ್ವಯಂಸೇವಕರು ರೋಗಿಗಳು ತಮ್ಮ ಬಿಪಿಎಲ್ ಆರೋಗ್ಯ ಕಾರ್ಡ್ ಅನ್ನು ಹೇಗೆ ಬಳಸುವುದು, ಸರ್ಕಾರಿ ಆಸ್ಪತ್ರೆಗಳ ಸಂಪರ್ಕಿಸುವುದು, ಆರೋಗ್ಯ ಮಿತ್ರರೊಂದಿಗೆ ಮಾತನಾಡಿಸುವುದು ಮತ್ತು ಆಕ್ಸಿಜನ್ ಸಪೋರ್ಟ್. ರೋಗನಿರ್ಣಯ ಅಥವಾ ವೈದ್ಯಕೀಯ ಅಗತ್ಯಗಳನ್ನು ಸಂಘಟಿಸುವಲ್ಲಿ ಸಹಾಯ ಮಾಡುತ್ತಾರೆ. ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ (AB-ArK) ದಂತಹ ಯೋಜನೆಗಳ ಅಡಿಯಲ್ಲಿ ಹಣವನ್ನು ಹೇಗೆ ಪಡೆಯುವುದು ಎಂಬುದನ್ನೂ ಅವರು ವಿವರಿಸುತ್ತಾರೆ.

ಕೋವಿಡ್ ಸಮಯದಲ್ಲಿ, ಅನೇಕರು ಸ್ವಯಂಸೇವಕರು ಆಹಾರ ಮತ್ತು ಪಡಿತರ ವಿತರಣೆಯಲ್ಲಿ ತೊಡಗಿಸಿಕೊಂಡಾಗ ಈ ಕಲ್ಪನೆ ಹೊರಹೊಮ್ಮಿತು. ಕಾಲಾನಂತರದಲ್ಲಿ, ಚಿಕಿತ್ಸೆ ಪಡೆಯಲು ಅನೇಕರು ಸರ್ಕಾರಿ ಯೋಜನೆಗಳ ಬಗ್ಗೆ ತಿಳಿಯದೆ ಹೆಣಗಾಡುತ್ತಿರುವುದು ಕಂಡು ಬಂದಿತ್ತು. ಹೀಗಾಗಿ ABF ಆರೋಗ್ಯ ಸಹಾಯವಾಣಿಯನ್ನು ಸ್ಥಾಪಿಸಲಾಯಿತು.

ಸಂಪೂರ್ಣವಾಗಿ ಸ್ವಯಂಸೇವಕರಿಂದ ನಡೆಸಲ್ಪಡುತ್ತಿರುವ ಹಾಗೂ ಲಾಭರಹಿತ ಸಂಸ್ಥೆ ಇದಾಗಿದೆ. ಸಹಾಯವಾಣಿಯರು ರೋಗಿಗಳನ್ನು ಫಾಲೋ-ಅಪ್‌ಗಳನ್ನೂ ಮಾಡುತ್ತದೆ. ಹೆಚ್ಚಿನ ಸ್ವಯಂಸೇವಕರು ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ, ಆದರೆ, ನಗರದ ಹೊರಗಿನಿಂದ ನಮಗೆ ಬೆಂಬಲಗಳು ಸಿಕ್ಕಿವೆ ಎಂದು ಅಹ್ಮದ್ ಅವರು ತಿಳಿಸಿದ್ದಾರೆ.

ಸಹಾಯವಾಣಿ ಇಲ್ಲಿಯವರೆಗೆ 918 ಜನರಿಗೆ ನೆರವು ನೀಡಿದ್ದು, ಚಿಕಿತ್ಸಾ ವೆಚ್ಚದಲ್ಲಿ ಅಂದಾಜು 2.15 ಕೋಟಿ ರೂ. ಉಳಿತಾಯ ಮಾಡಿದೆ. ಈ ಪೈಕಿ 494 ಪ್ರಕರಣಗಳನ್ನು ಸರ್ಕಾರಿ ಆಸ್ಪತ್ರೆಗಳಿಗೆ, 79 ದತ್ತಿ ಸಂಸ್ಥೆಗಳಿಗೆ ಮತ್ತು 15 ಪ್ರಕರಣಗಳನ್ನು ಸಾರ್ವಜನಿಕ ಆಯ್ಕೆಗಳು ಲಭ್ಯವಿಲ್ಲದ ಅಥವಾ ತುರ್ತು ಆರೈಕೆಯ ಅಗತ್ಯವಿರುವ ಸಂದರ್ಭಗಳಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಉಲ್ಲೇಖಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಆಂಕೊಲಾಜಿ (134 ಪ್ರಕರಣಗಳು), ನೆಫ್ರಾಲಜಿ (92), ಮೂಳೆಚಿಕಿತ್ಸೆ (92), ಮಕ್ಕಳ ಚಿಕಿತ್ಸೆ (88) ಮತ್ತು ಹೃದ್ರೋಗ (86) ಸಮಸ್ಯೆಗಳಿಗೆ ಹೆಚ್ಚಿನ ಜನರು ಸಹಾಯವಾಣಿಯ ನೆರವು ಪಡೆದಿದ್ದಾರೆ. ಮಕ್ಕಳ (0-1 ವರ್ಷ) ವೈದ್ಯಕೀಯ ಚಿಕಿತ್ಸೆಗಾಗಿ 267 ಮಂದಿ ಸಹಾಯವಾಣಿಯ ನೆರವು ಪಡೆದಿದ್ದಾರೆ. ನೆರವು, ಮಾರ್ಗದರ್ಶನ ಬಯಸುವವವರು ಸಹಾಯವಾಣಿ ಸಂಖ್ಯೆ - 93640 24365ಯನ್ನು ಸಂಪರ್ಕಿಸಬಹುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸುಂಕ ಅನಿಶ್ಚಿತತೆ ಮಧ್ಯೆ ವಿತ್ತೀಯ ನೀತಿ ಪ್ರಕಟ: ರೆಪೊ ದರ ಯಥಾಸ್ಥಿತಿ ಕಾಯ್ದುಕೊಂಡ RBI

Madhya Pradesh: 15 ದಿನದಲ್ಲಿ 6 ಮಕ್ಕಳ ಕಿಡ್ನಿ ಫೇಲ್, ಸಾವು..! 2 Cough Syrup ನಿಷೇಧ! ICMR ತಂಡ ದೌಡು

Video: 'ಕರ್ನಾಟಕದಲ್ಲಿ ಹಿಂದಿ ಮಾತಾಡು..' ಬುರ್ಖಾಧಾರಿ ಮಹಿಳೆ ಉದ್ಧಟತನ, ಸರಿಯಾಗಿ ಜಾಡಿಸಿದ 'ಕನ್ನಡತಿ'

Asia Cup 2025 ಸೋಲಿನ ಬೆನ್ನಲ್ಲೇ ಬರೆ, ಬಾಲ ಬಿಚ್ಚಿದ್ದ ಆಟಗಾರರ ಪುಡಿಗಾಸಿಗೂ PCB ಕೊಕ್ಕೆ!, NOC 'Suspension'

ಮಧ್ಯ ಫಿಲಿಪೈನ್ಸ್ ಪ್ರದೇಶದಲ್ಲಿ ಪ್ರಬಲ ಭೂಕಂಪ: ಮೃತರ ಸಂಖ್ಯೆ 69ಕ್ಕೆ ಏರಿಕೆ

SCROLL FOR NEXT