Online Desk
ವಿಶೇಷ

ಮೊಟ್ಟೆಗೆ 20 ಲಕ್ಷ, ಹಣ್ಣಿಗೆ 35 ಲಕ್ಷ ರೂ; ಇವು ವಿಶ್ವದ ಅತ್ಯಂತ ದುಬಾರಿ ಆಹಾರಗಳು!

ಜಗತ್ತಿನಲ್ಲಿ ಕೇವಲ ರುಚಿಗಾಗಿ ಮಾತ್ರವಲ್ಲದೆ, ಅಪರೂಪದ ಕಾರಣಗಳಿಂದಾಗಿ ಬಂಗಾರದಷ್ಟೇ ಬೆಲೆಬಾಳುವ ಕೆಲವು ಆಹಾರ ಪದಾರ್ಥಗಳಿವೆ. ಇವುಗಳನ್ನು ಖರೀದಿಸುವುದು ಶ್ರೀಮಂತರಿಗೂ ದೊಡ್ಡ ಸವಾಲಿನ ಕೆಲಸ. ಅಂತಹ ವಿಶ್ವದ ಅತ್ಯಂತ ದುಬಾರಿ ಆಹಾರಗಳ ಲಿಸ್ಟ್ ಇಲ್ಲಿದೆ.

ನಾವು ಹೋಟೆಲ್‌ಗೆ ಹೋಗಿ ಅನ್ನ, ಸಾಂಬಾರ್ ತಿಂದ್ರೆ 40 ರಿಂದ 50 ರೂಪಾಯಿ ಪೇ ಮಾಡುತ್ತೇವೆ! ಆದರೆ ಜಗತ್ತಿನಲ್ಲಿ ಕೆಲವು ಆಹಾರಗಳಿವೆ, ಅವುಗಳ ಬೆಲೆ ಕೇಳಿದರೆ ತಲೆ ತಿರುಗುತ್ತದೆ. ರುಚಿಗಾಗಿ ಮಾತ್ರವಲ್ಲ, ಅಪರೂಪತೆ ಮತ್ತು ತಯಾರಿಕೆಯ ಕಾರಣದಿಂದ ಈ ಆಹಾರಗಳು ಭಾರೀ ಬೆಲೆ ಬಾಳುತ್ತವೆ. ಅದ್ರಂತೆ, ಜಗತ್ತಿನ ಅತ್ಯಂತ ದುಬಾರಿ ಆಹಾರಗಳ ಪಟ್ಟಿ ಇಲ್ಲಿದೆ.

ಯುಬಾರಿ ಕಿಂಗ್ ಖರ್ಬೂಜ (Yubari King Melon)

ವಿಶ್ವದ ಅತ್ಯಂತ ದುಬಾರಿ ಹಣ್ಣು ಎಂದು ಪ್ರಸಿದ್ಧಿಯಾಗಿರುವ ಇದು, ಜಪಾನ್‌ನ ಹೊಕ್ಕೈಡೋ ದ್ವೀಪದಲ್ಲಿ ಅತ್ಯಂತ ಕಟ್ಟುನಿಟ್ಟಾದ ಹಸಿರುಮನೆಯ ವಾತಾವರಣದಲ್ಲಿ ಬೆಳೆಯಲಾಗುತ್ತದೆ. ಇದರ ಒಂದು ಜೋಡಿ ಹಣ್ಣುಗಳು ಹರಾಜಿನಲ್ಲಿ ಸುಮಾರು ₹15 ಲಕ್ಷದಿಂದ ₹35 ಲಕ್ಷದವರೆಗೆ ಮಾರಾಟವಾಗುತ್ತವೆ.

ಅಲ್ಮಾಸ್ ಕ್ಯಾವಿಯರ್ ಮೊಟ್ಟೆ (Almas Caviar Egg)

ಇದು ವಿಶ್ವದ ಅತ್ಯಂತ ದುಬಾರಿ ಆಹಾರ. ಇದು ಅತ್ಯಂತ ಅಪರೂಪದ 'ಆಲ್ಬಿನೋ ಸ್ಟರ್ಜನ್' ಎಂಬ ಮೀನಿನ ಮೊಟ್ಟೆ ಆಗಿದ್ದು, ಇದರ ಬೆಲೆ ಸುಮಾರು $25,000 ಅಂದಾಜು ₹20 ಲಕ್ಷ.

ಬಿಳಿ ಟ್ರಫಲ್ಸ್ (White Truffles)

ಉತ್ತರ ಇಟಲಿಯಲ್ಲಿ ಬೆಳೆಯುವ ಒಂದು ವಿಶೇಷ ರೀತಿಯ ಮಶ್ರೂಮ್ (ಅಣಬೆ) ಇದು. ಇದನ್ನು ತರಬೇತಿ ಪಡೆದ ನಾಯಿಗಳ ಸಹಾಯದಿಂದ ಹುಡುಕಲಾಗುತ್ತದೆ. ಇದರ ಬೆಲೆ ಕೆಜಿಗೆ ₹2.5 ಲಕ್ಷಕ್ಕಿಂತಲೂ ಹೆಚ್ಚು.

ಕೇಸರಿ (Saffron)

'ಕೆಂಪು ಚಿನ್ನ' ಎಂದೇ ಕರೆಯಲ್ಪಡುವ ಇದು ವಿಶ್ವದ ಅತ್ಯಂತ ದುಬಾರಿ ಮಸಾಲೆ ಪದಾರ್ಥ. 1 ಕೆಜಿ ಕೇಸರಿ ಪಡೆಯಲು ಸುಮಾರು 75,000 ಹೂವುಗಳನ್ನು ಕೈಯಿಂದ ಕೊಯ್ಲು ಮಾಡಬೇಕು. ಹಾಗಾಗಿಯೇ ಇದರ ಬೆಲೆ ಕೆಜಿಗೆ ₹3 ಲಕ್ಷದವರೆಗೂ ಇರುತ್ತದೆ.

ಕೋಪಿ ಲುವಾಕ್ (Kopi Luwak)

ಇಂಡೋನೇಷ್ಯಾದಲ್ಲಿ ಸಿಗುವ ಈ ಕಾಫಿಯು ಅತ್ಯಂತ ದುಬಾರಿ. ಸಿವೆಟ್ ಎಂಬ ಬೆಕ್ಕು ತಿಂದ ಕಾಫಿ ಬೀಜಗಳನ್ನು, ಅದರ ಹಿಕ್ಕೆಗಳಿಂದ ಸಂಗ್ರಹಿಸಿ ಇದನ್ನು ತಯಾರಿಸಲಾಗುತ್ತದೆ. ಅದರಂತೆ, 1 ಕೆ.ಜಿ.ಗೆ 1 ಲಕ್ಷ ರೂಪಾಯಿಗೂ ಹೆಚ್ಚು ಎನ್ನಲಾಗಿದೆ.

ಗೋಲ್ಡನ್ ಒಪ್ಯುಲೆನ್ಸ್ ಸುಂಡೆ (Golden Opulence Sundae)

ನ್ಯೂಯಾರ್ಕ್ ನಗರದಲ್ಲಿ ಸಿಗುವ ವಿಶ್ವದ ಅತ್ಯಂತ ದುಬಾರಿ ಐಸ್‌ಕ್ರೀಮ್ ಆಗಿದೆ. ಇದರ ಬೆಲೆ $1000 ಅಂದ್ರೆ ಸುಮಾರು ₹84,000 ಎನ್ನಲಾಗಿದ್ದು, ಇದನ್ನು 23 ಕ್ಯಾರೆಟ್ ಖಾದ್ಯ ಚಿನ್ನದ ಎಲೆಗಳೊಂದಿಗೆ ವಿಶ್ವದ ಅತ್ಯಂತ ಅಪರೂಪದ ಚಾಕೊಲೇಟ್‌ಗಳು, ಪ್ಯಾರಿಸ್‌ನಿಂದ ತಂದ ಕ್ಯಾಂಡಿ ಹಣ್ಣುಗಳನ್ನು ಸೇರಿಸಿ ಮಾಡಲಾಗುತ್ತದೆ.

ವ್ಯಾಗ್ಯು (Kobe Wagyu Beef)

ಜಪಾನ್ ದೇಶದ ಈ ಮಾಂಸವು ತನ್ನ ವಿಶೇಷವಾದ ರುಚಿಗೆ ಹೆಸರುವಾಸಿಯಾಗಿದೆ. ಹಸುವಿಗೆ ವಿಶೇಷ ಆಹಾರ ನೀಡಿ, ಸಂಗೀತವನ್ನು ಕೇಳಿಸಿ ಇದನ್ನು ಬೆಳೆಸಲಾಗುತ್ತದೆ. ಇದರ 1 ಕೆಜಿ ಮಾಂಸದ ಬೆಲೆ ₹20,000 ದಿಂದ ಆರಂಭವಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal floods: ಮೃತರ ಸಂಖ್ಯೆ 675ಕ್ಕೆ ಏರಿಕೆ; ರಾಸುವಾ ಜಲವಿದ್ಯುತ್ ಯೋಜನೆ ಸ್ಥಳದಿಂದ ನಾಲ್ವರು ಭಾರತೀಯರ ರಕ್ಷಣೆ!

ಆಪತ್ಬಾಂಧವರಾದ ಹೊಯ್ಸಳ ಪೊಲೀಸರು: ಮಾಗಡಿ ರಸ್ತೆಯಲ್ಲಿ ಹೃದಯಾಘಾತದಿಂದ ಬಳಲುತ್ತಿದ್ದ ವ್ಯಕ್ತಿಯ ಜೀವ ರಕ್ಷಣೆ, Video!

'ಪ್ರತಿ ಬಾರಿ ಬಿದ್ದಾಗಲೂ, ಇದು ನನ್ನ ಜೀವನದ ಕೊನೆಯ ಕ್ಷಣ ಅನಿಸುತಿತ್ತು: ನೇಪಾಳದ ದಿಢೀರ್ ಪ್ರವಾಹದಿಂದ ಬದುಕುಳಿದ ವ್ಯಕ್ತಿಯೊಬ್ಬರ ಭಯಾನಕ ಅನುಭವ!

ಕಾರವಾರ ಮೆಡಿಕಲ್ ಕಾಲೇಜು, ಶಿವರಾಮ ಕಾರಂತ ಬಡಾವಣೆಯ ಪ್ರಮುಖ ರಸ್ತೆಗೆ ರಾಮಕೃಷ್ಣ ಹೆಗಡೆ ಹೆಸರು: ಸಿಎಂ ಘೋಷಣೆ

ಸ್ಮಾರ್ಟ್ ಫೋನ್ ವಿಚಾರವಾಗಿ ಘರ್ಷಣೆ: ತಂದೆಗೆ ಭಯಪಟ್ಟು ಗುಜರಾತ್ ನಿಂದ ಕರ್ನಾಟಕಕ್ಕೆ ನಾಲ್ವರು ಸಹೋದರಿಯರು ಪರಾರಿ!