ಬ್ರಿಸ್ಬೇನ್: ಆಸ್ಟ್ರೇಲಿಯದ ಬ್ರಿಸ್ಬೇನ್ನಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯ ನಡುವಿನ 2ನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯ 4 ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿದೆ.
ಭಾರತ ಮೊದಲ ದಿನದಾಟದ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 311 ರನ್ ಗಳಿಸಿತ್ತು. ಇಂದು ಎರಡನೇ ದಿನದಾಟ ಆರಂಭಿಸಿದ ಭಾರತ ಕೇವಲ 97 ರನ್ಗಳಿಗೆ ಆರು ವಿಕೆಟ್ ಕಳೆದುಕೊಂಡು 408ಕ್ಕೆ ಆಲೌಟ್ ಆಯಿತು.
2ನೇ ದಿನದಾಟ ಆರಂಭಿಸಿದ ಅಜಿಂಕ್ಯಾ ರಹಾನೆ 81 ರನ್ ಗಳಿಸಿ ಔಟಾದರೆ, ರೋಹಿತ್ ಶರ್ಮಾ 32 ರನ್ಗೆ ನಿರ್ಗಮಿಸಿದರು. ಬಳಿಕ ಬಂದ ನಾಯಕ ಮಹೇಂದ್ರ ಸಿಂಗ್ ಧೋನಿ ಕೇವಲ 33 ರನ್ ಗಳಿಸಿ ಹ್ಯಾಜಲ್ವುಡ್ ಬೌಲಿಂಗ್ಗೆ ಔಟಾದರು. ಸ್ಪೀನರ್ ರವಿಚಂದ್ರನ್ ಅಶ್ವಿನ್ 35 ರನ್ ಗಳಿಸಿದರೆ ನಂತರ ಬಂದ ಉಮೇಶ್ ಯಾದವ್ ವರುಣ್ ಆರೋರ ಇಶಾಂತ್ ಶರ್ಮಾ ಎರಡಂಕ್ಕಿ ದಾಟಲಿಲ್ಲ.
ಮೊದಲ ಇನ್ನಿಂಗ್ಸ್ ಪ್ರಾರಂಭಿಸಿದ ಆಸ್ಟ್ರೇಲಿಯ ಎರಡನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 221 ಗಳಿಸಿದೆ. ಆರಂಭಿಕರಾದ ಕ್ರಿಸ್ ರೋಜೆರ್ಸ್ 55 ಹಾಗೂ ಡೇವಿಡ್ ವಾರ್ನರ್ 29 ರನ್ ಗಳಿಸಿ ಉಮೇಶ್ ಬೌಲಿಂಗ್ಗೆ ಔಟಾದರು.
ಬಳಿಕ ಶೇನ್ ವಾಟ್ಸನ್ 25 ರನ್ ಗಳಿಸಿ ಸ್ಪೀನ್ ಮಾಂತ್ರಿಕ ಅಶ್ವಿನ್ ಬೌಲಿಂಗ್ಗೆ ಔಟಾದರು. 32 ರನ್ ಗಳಿಸಿದ್ದ ಮಾರ್ಶ್ ಉಮೇಶ್ ಬೌಲಿಂಗ್ಗೆ ಅಶ್ವಿನ್ ಕ್ಯಾಚ್ ನೀಡಿ ನಿರ್ಗಮಿಸಿದರು. ಸದ್ಯ ಬ್ಯಾಟ್ ಬೀಸುತ್ತಿರುವ ಸ್ಟೀವೆನ್ ಸ್ಮಿತ್ ಅಜೇಯ 65 ಹಾಗೂ ಮಿಚೇಲ್ ಮಾರ್ಶ್ 7 ರನ್ ಗಳಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ.
ಭಾರತ ಪರ ವೇಗಿ ಉಮೇಶ್ ಯಾದವ್ 3 ವಿಕೆಟ್ ಪಡೆದರೆ ಅಶ್ವಿನ್ 1 ವಿಕೆಟ್ ಪಡೆದಿದ್ದಾರೆ.
ಭಾರತ ಮೊದಲ ಇನ್ನಿಂಗ್ಸ್ 408ಕ್ಕೆ ಆಲೌಟ್
ಆಸ್ಟ್ರೇಲಿಯ ಮೊದಲ ಇನ್ನಿಂಗ್ಸ್ 4 ವಿಕೆಟ್ಗೆ 221