ಅನುಷ್ಕಾ ಶರ್ಮಾ -ಹೃತಿಕ್ ರೋಷನ್ 
ಕ್ರೀಡೆ

ಐಪಿಎಲ್ ಉದ್ಘಾಟನೆಗೆ ಹೃತಿಕ್ , ಅನುಷ್ಕಾ ಮೆರಗು

ಈ ಬಾರಿಯ ಐಪಿಎಲ್ ಟೂರ್ನಿಯ ಉದ್ಘಾಟನಾ ಸಮಾರಂಭ ಮತ್ತಷ್ಟು ಮೆರುಗು ಪಡೆದುಕೊಂಡಿದೆ. ಉದ್ಘಾಟನೆ ನಿಮಿತ್ತವಾಗಿ ನಡೆಯುವ...

ನವದೆಹಲಿ: ಈ ಬಾರಿಯ ಐಪಿಎಲ್ ಟೂರ್ನಿಯ ಉದ್ಘಾಟನಾ ಸಮಾರಂಭ ಮತ್ತಷ್ಟು ಮೆರುಗು ಪಡೆದುಕೊಂಡಿದೆ. ಉದ್ಘಾಟನೆ ನಿಮಿತ್ತವಾಗಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಾಲಿವುಡ್ ನಟರಾದ ಹೃತಿಕ್ ರೋಷನ್, ಶಾಹಿದ್ ಕಪೂರ್, ಅನುಷ್ಕಾ ಶರ್ಮಾ  ಪ್ರತ್ಯೇಕ ನೃತ್ಯ ಪ್ರದರ್ಶನ ನೀಡಲಿದ್ದಾರೆ
ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಶನಿವಾರ ಸುದ್ದಿಗಾರರಿಗೆ ವಿವರಿಸಿದರು.
ಎರಡೂವರೆ ಗಂಟೆಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮ ಕೋಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ಏ. 7ರಂದು ಸಂಜೆ 7 ಗಂಟೆಗೆ ಆರಂಭಗೊಳ್ಳಲಿದೆ. ಹಿಂದಿ ಚಿತ್ರರಂಗದ ಫರ್ಹಾನ್ ಅಖ್ತರ್, ಸಂಗೀತ ನಿರ್ದೇಶಕ ಪ್ರೀತಮ್  ಪ್ರತ್ಯೇಕ ಮನರಂಜನಾ ಕಾರ್ಯಕ್ರಮ ನೀಡುವುದು ಪಕ್ಕಾ ಆಗಿದೆ ಎಂದ ಠಾಕೂರ್, ಇಡೀ ಸಮಾರಂಭದ ನಿರೂಪಣೆಯನ್ನು ನಟ ಸೈಫ್  ಅಲಿ ಖಾನ್ ನಡೆಸಿಕೊಡಲಿದ್ದಾರೆ ಎಂದರು.
ಕಳೆದ ಬಾರಿಯ ಆವೃತ್ತಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಕೋಲ್ಕತಾ ನೈಟ್‍ರೈಡರ್ಸ್ ತಂಡದ ನಾಯಕ ಗೌತಮ್  ಗಂಭೀರ್,  ಟ್ರೋಫಿಯನ್ನು ಪುನಃ ವೇದಿಕೆ ಮೇಲೆ
ತಂದು ಪ್ರತಿಷ್ಠಾಪಿಸುವ ಮೂಲಕ 8ನೇ ಆವೃತ್ತಿಯ ಐಪಿಎಲ್ ಚಾಲನೆಗೊಳ್ಳುತ್ತಿರುವ ಬಗ್ಗೆ ಸಾಂಕೇತಿಕ ಸೂಚನೆ ನೀಡಲಿದ್ದಾರೆ.
ಸಮಾರಂಭದಲ್ಲಿ ವೇದಿಕೆ ಮೇಲೆ ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ಎಂಟು ತಂಡಗಳ ನಾಯಕರು ಸಾಲಾಗಿ ನಿಂತು ಪ್ರಮಾಣ ವಚನ
ಸ್ವೀಕರಿಸಲಿದ್ದಾರೆ ಎಂದು ಅವರು ತಿಳಿಸಿದರು.

ಮರುದಿನ ಇದೇ ಮೈದಾನದಲ್ಲಿ ಹಾಲಿ ಚಾಂಪಿಯನ್ ಕೆಕೆಆರ್
_ ಉದ್ಘಾಟನಾ ಸಮಾರಂಭದಲ್ಲಿ ಹೃತಿಕ್,
ಅನುಷ್ಕಾ, ಶಾಹಿದ್ ನೃತ್ಯ
_ ಏ. 7ರಂದು ಸಂಜೆ 7 ಗಂಟೆಗೆ ಕೋಲ್ಕತಾದ
ಈಡನ್ ಗಾರ್ಡನ್‍ನಲ್ಲಿ ಆರಂಭವಾಗಲಿರುವ
ಕಾರ್ಯಕ್ರಮ
_ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್
ರೈಡರ್ಸ್ ತಂಡದ ನಾಯಕ ಗಂಭೀರ್ ಅವರಿಂದ ಟ್ರೋಫಿ  ಪುನರ್ ಪ್ರತಿಷ್ಠಾಪನೆ
_ ಟೂರ್ನಿಯಲ್ಲಿ ಪಾಲ್ಗೊಳ್ಳುವ ಎಂಟು ತಂಡ ಗಳ ನಾಯಕರಿಂದ ಪ್ರಮಾಣ ವಚನ ಸ್ವೀಕಾರ ಮತ್ತು ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗುವು
ದರೊಂದಿಗೆ ಪಂದ್ಯಗಳಿಗೆ ಚಾಲನೆ ಸಿಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ರದ್ದತಿಗೆ ಈಶ್ವರ್ ಖಂಡ್ರೆ ಪಟ್ಟು; UPSC ಮಾದರಿ ತನ್ನಿ ಎಂದು ಸಿಎಂಗೆ ಗ್ರಾಮೀಣಾಭಿವೃದ್ಧಿ ಸಚಿವ ಮನವಿ

'ಹಾಸ್ಯಾಸ್ಪದ, ನಾಚಿಕೆಗೇಡು': ಬ್ರಿಕ್ಸ್ ಭೋಜನಕೂಟದ ಮೆನು ಕುರಿತ ಕಾಂಗ್ರೆಸ್ ಆರೋಪಕ್ಕೆ ಬಿಜೆಪಿ ಆಕ್ರೋಶ

ಜೈಲಿನಲ್ಲಿ ಮಾಜಿ ಪ್ರಧಾನಿ: 52ನೇ ವಯಸ್ಸಿನಲ್ಲಿ ಎರಡನೇ ಮದುವೆಯಾದ ಇಮ್ರಾನ್ ಖಾನ್ ಮಾಜಿ ಪತ್ನಿ!

BBK 13: ಬಿಗ್‌ಬಾಸ್ ಮನೆಯಿಂದ ದಿಢೀರ್ ಹೊರಬಂದ ಓಂ ಪ್ರಕಾಶ್ ರಾವ್, ಆಸ್ಪತ್ರೆಗೆ ದಾಖಲು..!

ಪಾಕ್‌ನ ಹೊಸ ನವರಂಗಿ ಆಟ: FATF ಸಭೆಯ ಮುನ್ನ ಉಗ್ರ ಮಸೂದ್ ಅಜರ್ ಮೇಲಿನ ಬಹುಮಾನದ ಮೊತ್ತ 70 ಲಕ್ಷಕ್ಕೆ ಏರಿಕೆ!