ಮಾರ್ಗೊವಾ: ಭಾರತೀಯ ಫುಟ್ಬಾಲ್ ಸಂಸ್ಥೆ (ಎಐಎಫ್ ಎಫ್ ) ವತಿಯಿಂದ ನೀಡಲಾಗುವ ವಾರ್ಷಿಕ ಪ್ರಶಸ್ತಿಗಳ ಪಟ್ಟಿಯನ್ನು ಭಾನುವಾರ ಬಿಡುಗಡೆಗೊಳಿಸಲಾಗಿದ್ದು, ಮಿಡ್ ಫೀಲ್ಡರ್ ಯೂಗ್ಲೆಸನ್ ಲಿಂಗ್ಡೊ ಹಾಗೂ ಫಾರ್ವರ್ಡ್ ಆಟಗಾರ್ತಿ ಬಾಲಾ ದೇವಿ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ವಿಭಾಗದ ವರ್ಷದ ಶ್ರೇಷ್ಠ ಕ್ರೀಡಾಳು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಭಾನುವಾರ ಇಲ್ಲಿ ನಡೆದ ಎಐಎಫ್ ಎಫ್ ವಾರ್ಷಿಕ ಮಹಾಸಭೆಯಲ್ಲಿ ಈ ಇಬ್ಬರನ್ನೂ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ. ಇನ್ನು, ಪ್ರೀತಂ ಕೋತ್ವಾಲ್ ಅವರು `2015ನೇ ಸಾಲಿನ ಉದಯೋನ್ಮುಖ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಶಸ್ತಿಯೊಂದಿಗೆ, ಲಿಂಗ್ಡೊ ಅವರು ರು. 2 ಲಕ್ಷ ನಗದು ಬಹುಮಾನವನ್ನೂ ಪಡೆಯದ್ದಾರೆ. ಅತ್ತ, ಬಾಲಾ ದೇವಿ ಸಹ ಪ್ರಶಸ್ತಿಯ ಜತೆ ರು. 1 ಲಕ್ಷ ನಗದು ಪುರಸ್ಕಾರಕ್ಕೆ ಭಾಜನರಾಗಲಿದ್ದಾರೆ.
ಹೊಸ ಪ್ರಶಸ್ತಿ: ಇದೇ ಮೊಟ್ಟಮೊದಲ ಬಾರಿಗೆ ಐಎಎಫ್ ಎಫ್ ವತಿಯಿಂದ ವರ್ಷದ ಉದಯೋನ್ಮುಖ ಆಟಗಾರ್ತಿ ಎಂಬ ಪ್ರಶಸ್ತಿಯನ್ನು ಹೆಸರಿಸಲಾಗಿದ್ದು, ಈ ಪ್ರಶಸ್ತಿಗೆ ಪ್ಯಾರೀ ಕ್ಸಾನಾ ಅವರನ್ನು ಆಯ್ಕೆ ಮಾಡಲಾಗಿದೆ. ಇನ್ನು, ಬೇರುಮಟ್ಟದಲ್ಲಿ ಫುಟ್ಬಾಲ್ ಕ್ರೀಡೆಯ ಅಭಿವೃದ್ಧಿಗೆ ಶ್ರಮಿಸಿದ ಸಂಸ್ಥೆಗಳಿಗೆ ನೀಡಲಾಗುವ ಬೆಸ್ಟ್ ಗ್ರಾಸ್ರೂ ಟ್ಸ್ ಪ್ರೋಗ್ರಾಂ' ಪ್ರಶಸ್ತಿ ಪಡೆದಿದೆ. ಸಿ.ಆರ್. ಶ್ರೀಕೃಷ್ಣಾ ಅವರಿಗೆ ಶ್ರೇಷ್ಠ ರೆಫರಿ ಪ್ರಶಸ್ತಿ, ಸಪ್ನಂ ಕ್ನೆಡ್ಡಿಯವರಿ ಗೆ ಶ್ರೇಷ್ಠ ಸಹಾಯಕ ರೆಫರಿ ಪ್ರಶಸ್ತಿ ಪಡೆದಿದ್ದಾರೆ.