ನವದೆಹಲಿ: ತಮ್ಮ ಆಟಗಾರರ ಕೆಚ್ಚೆದೆಯ ಹೋರಾಟದ ನೆರವಿನಿಂದ ಮುಂಬೈ ಗರುಡಾಸ್ ತಂಡ, ಸೋಮವಾರ ನಡೆದ ಪ್ರೊರೆಸ್ಲಿಂಗ್ ತಂಡದ ಪಂದ್ಯದಲ್ಲಿ ದಿಲ್ಲಿ ವೀರ್ಸ್ ತಂಡದ ವಿರುದ್ಧ ಸೋಮವಾರ ನಡೆದ ಮುಖಾಮುಖಿಯಲ್ಲಿ 5-2 ಅಂತರದಲ್ಲಿ ಜಯ ಸಾಧಿಸಿತು.
ಈ ಗೆಲವಿನೊಂದಿಗೆ ಅದು ಟೂರ್ನಿಯ ಉಪಾಂತ್ಯದ ಸುತ್ತನ್ನು ಪ್ರವೇಶಿಸಿದೆ. ಮುಖಾಮುಖಿಯ 3ನೇ ಸುತ್ತಿನ ಅಂತ್ಯಕ್ಕೆ 1-2 ಅಂಕಗಳ ಅಂತರದಲ್ಲಿ ಹಿನ್ನಡೆ ಹೊಂದಿದ್ದ ಮುಂಬೈ, ಆನಂತರದ ಎಲ್ಲಾ ಸುತ್ತುಗಳಲ್ಲೂ ಜಯ ಸಾಧಿಸಿತು. 4ನೇ ಹಾಗೂ 5ನೇ ಸುತ್ತಿನ ಗೆಲವು ಪಡೆದ ಒಡುನಾಯೋ, ಗಿರ್ಗಿಯೋ, ಅಡಿಲಿನ್ ಗ್ರೇ, ಅಮಿತ್ ಧಾನ್ಕರ್ ಮುಂಬೈ ತಂಡಕ್ಕೆ ಜಯ ತಂದರು.
ಮುಂಬೈ ಗೆಲವು: ಮೊದಲ ಸುತ್ತಿನಲ್ಲಿ (ಪುರುಷರ 97 ಕೆಜಿ) ಒಡಿಕಾಡ್ಜೆ ಎಲಿಜ್ಬಾರ್‍ಗೆ ದಿಲ್ಲಿ ತಂಡದ ಗುರ್ ಪಾಲ್ ಸಿಂಗ್ ವಿರುದ್ಧ (5-0) ಜಯ; 4ನೇ ಸುತ್ತಿನಲ್ಲಿ (ಮಹಿಳೆಯರ 53 ಕೆಜಿ) ಒಡುನಾಯೋ ಅವರಿಗೆ ಲಿಲಿಯಾ ವಿರುದ್ಧ 10-0ರ ತಾಂತ್ರಿಕ ಜಯ; 5ನೇ ಸುತ್ತಿನಲ್ಲಿ ಗಿಯೋರ್ಗಿಗೆ ಕೃಷನ್ ವಿರುದ್ಧ 10-0ರ ತಾಂತ್ರಿಕ ಜಯ; 6ನೇ ಸುತ್ತಿನಲ್ಲಿ (ಮಹಿಳೆಯರ 69 ಕೆಜಿ) ಅಡಿಲಿನ್ ಗ್ರೇ ಅವರಿಗೆ ನಿಕ್ಕಿ 10-0 ಅಂತರದ ಫಾಲ್ ಆಧಾರಿತ ಜಯ; 7ನೇ ಸುತ್ತಿನಲ್ಲಿ (ಪುರುಷರ 65 ಕೆಜಿ) ಅಮಿತ್ ಗೆ ನವ್ರುಝೊವ್ ವಿರುದ್ಧ ಗೆಲವು.
ದಿಲ್ಲಿ ಗೆಲವು: 2ನೇ ಸುತ್ತಿನಲ್ಲಿ (ಪುರುಷರ 48 ಕೆಜಿ) ವಿನೇಶ್ ಫೋಗಟ್‍ಗೆ ರಿತು ಫೋಗಟ್ ವಿರುದ್ಧ ಜಯ; 3ನೇ ಸುತ್ತಿನಲ್ಲಿ (ಪುರುಷರ 74 ಕೆಜಿ) ದಿನೇಶ್ ಕುಮಾರ್‍ಗೆ ಪ್ರದೀಪ್ ವಿರುದ್ಧ ಜಯ.