ಬೆಂಗಳೂರು: ದೇಶದ ಪ್ರತಿಷ್ಠಿತ ರೇಸ್ ಗಳಲ್ಲೊಂದಾದ ಕಿಂಗ್‍ಪಿಶರ್ ಡರ್ಬಿ-2015ರ ಆವೃತ್ತಿಯಲ್ಲಿ ಏಂಜೆ ಲ್ಡಸ್ಟ್ ಕುದುರೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಭಾನುವಾರ ಸಂಜೆ ನಡೆದ ರೇಸ್‍ನಲ್ಲಿ ತನಗೆ ಪ್ರತಿಸ್ಪರ್ಧೆ ನೀಡಿದ್ದ 13 ಕುದುರೆಗಳನ್ನು ಹಿಂದಿಕ್ಕಿದ ಏಂಜೆಲ್ ಡಸ್ಟ್ ಮೊದಲ ಸ್ಥಾನ ಅಲಂಕರಿಸುವುದರೊಂದಿಗೆ, ಪ್ರತಿಷ್ಠಿತ ಸಿಲ್ವರ್ ಹಾರ್ಸ್ ಪ್ರಶಸ್ತಿ ಹಾಗೂ ರೂ. 1.5 ಕೋಟಿ ನಗದು ಪುರಸ್ಕಾರಕ್ಕೆ ಭಾಜನವಾಯಿತು. ಈ ಮೂಲಕ, ತನ್ನ ತರಬೇತುದಾರ ಎಸ್.ಎಸ್. ಅಗ್ನಿಹೋತ್ರಿ ಹಾಗೂ ಜಾಕಿ ಪಿ. ಟ್ರೆವರ್ ಅವರಿಗೆ ಹಿರಿಮೆಯನ್ನು ತಂದುಕೊಟ್ಟಿತು.
ತೀವ್ರ ಹಣಾಹಣಿ: ರೇಸ್‍ನ ಅಂತಿಮ ಹಂತದಲ್ಲಿ ಏಂಜೆಲ್ ಡಸ್ಟ್ ಹಾಗೂ ಡೆಸರ್ಟ್ ಗಾಡ್ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿತ್ತು. ಗೆಲುವಿನ ಗೆರೆ ಸಮೀಪವಿದ್ದರೂ ಎರಡೂ ಕುದುರೆಗಳು ತೀರಾ ಪೈಪೊಟಿ ನೀಡಿದ್ದು ಪೋಷಕರಲ್ಲಿ ರೋಮಾಂಚನ ತಂದಿದ್ದವು. ಆದರೆ, ಈ ಪೈಪೋಟಿಯಲ್ಲಿ ಕೊನೆಗೂ ಮುನ್ನಡೆ ಸಾಧಿಸಿದ ಏಂಜೆಲ್ ಡಸ್ಟ್ ಗೆಲುವಿನ ಪತಾಕೆ ಹಾರಿಸಿತು.
ಪುರಸ್ಕಾರ: ರೇಸ್‍ನ ನಂತರ ನಡೆದ ಸರಳ ಸಮಾರಂಭದಲ್ಲಿ, ಬೆಂಗಳೂರು ಟರ್ಫ್ ಕ್ಲಬ್‍ನ ಅಧ್ಯಕ್ಷ ಹರಿಮೋಹನ್ ನಾಯ್ಡು ಹಾಗೂ ಯುನೈಟೆಡ್ ಬ್ರೂವರೀಸ್ ಸಂಸ್ಥೆಯ ಮಾರುಕಟ್ಟೆ ವಿಭಾಗದ ಸಹಾಯಕ ಉಪಾಧ್ಯಕ್ಷ ಸಮರ್‍ಸಿಂಗ್ ಅವರು, ಏಂಜೆಲ್ ಡಸ್ಟ್ ಮಾಲೀಕರಾದ ಯುನೈಟೆಡ್ ರೇಸಿಂಗ್ ಹಾಗೂ ಬ್ಲಡ್ ಸ್ಟಾಕ್‍ಗೆ ಪಾರಿತೋಷಕ ಹಾಗೂ ನಗದು ಬಹುಮಾನವನ್ನು ನೀಡಿ ಗೌರವಿಸಿದರು.
ಡೆಸರ್ಟ್ ಗಾಡ್‍ಗೆ ದ್ವಿತೀಯ ಸ್ಥಾನ ಲಭಿಸಿದರೇ ಔರಿಗಾಗೇ ತೃ ತೀಯ ಸ್ಥಾನ ಲಭ್ಯವಾಯಿತಲ್ಲದೆ, ಈ ಎರಡೂ ಕುದುರೆಗಳು ಕ್ರಮವಾಗಿ 49.6 ಲಕ್ಷ ಹಾಗೂ 24.8 ಸಕ್ಷ ಬಹುಮಾನಕ್ಕೆ ಪಾತ್ರವಾದವು.