ನವದೆಹಲಿ: ಹಾಲು ಮಾರಾಟ ಮಾಡುತ್ತಿದ್ದವನ 10 ವರ್ಷದ ಮಗ ಶುಭಂ ಜಗ್ಲಾನ್ ಐಎಂಜಿ ಅಕಾಡೆಮಿ ವಿಶ್ವ ಜೂನಿಯರ್ ಗಾಲ್ಫ್ ಚಾಂಪಿಯನ್ ಶಿಪ್ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ.
ನಿನ್ನೆ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋದಲ್ಲಿ ನಡೆದ ಪಂದ್ಯದಲ್ಲಿ ಅವರು ಅದ್ಭುತ ಆಟವನ್ನು ಪ್ರದರ್ಶಿಸಿದರು. ಶುಭಂ ಪೋಷಕರು ಶ್ರೀಮಂತರಲ್ಲ, ತಂದೆ ಹಾಲು ಮಾರಾಟ ಮಾಡುವ ಸಾಮಾನ್ಯ ವ್ಯಕ್ತಿಯಾಗಿದ್ದಾರೆ.
ಕಳೆದ ವರ್ಷದ ಚಾಂಪಿಯನ್ ಶಿಪ್ ನಲ್ಲಿ ಶುಭಂ ರನ್ನರ್ ಅಪ್ ಆಗಿದ್ದರು. 115 ಯುವ ಗಾಲ್ಫರ್ ಗಳು ಕೂಟದಲ್ಲಿ ಭಾಗವಹಿಸಿದ್ದರು. 60 ಸ್ಪರ್ಧಿಗಳಿದ್ದ ಫೈನಲ್ ಸುತ್ತಿಗೆ ಶುಭಂ ಆಯ್ಕೆಯಾಗಿದ್ದು, ಸತತ ಪ್ರಯತ್ನ ಮತ್ತು ಛಲದಿಂದ ಅವರು ಕೂಟದಲ್ಲಿ ಪ್ರಶಸ್ತಿ ಗೆಲ್ಲುವಲ್ಲಿ ಸಫಲರಾದರು.