ಕೋಲ್ಕತಾ: ನಾಯಕ ಮಂಜೀತ್ ಚಿಲ್ಲರ್ ಅವರ ಆಕರ್ಷಕ ಪ್ರದರ್ಶನದಿಂದ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಪಾಟ್ನಾ ಪೈರೆಟ್ಸ್ ವಿರುದ್ಧ ಅರ್ಹ ಗೆಲುವು ಸಂಪಾದಿಸಿತು.
ಬುಧವಾರ ಇಲ್ಲಿನ ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ 31-26 ಅಂಕಗಳ ಅಂತರದಲ್ಲಿ ಜಯಿಸಿತು. ಈ ಮೂಲಕ ಟೂರ್ನಿಯಲ್ಲಿ ಎರಡನೇ ಜಯ ಗಳಿಸಿತು.
ಬೆಂಗಾಲ್ ಗೆ ರೋಚಕ ಜಯ:
ಮೊದಲ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ತಂಡ ಅಂತಿಮ ಕ್ಷಣದಲ್ಲಿ ಮಿಂಚಿನ ಆಟವಾಡಿ ಪ್ರವಾಸಿ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ ಎರಡು ಪಾಯಿಂಟ್ಸ್‍ಗಳ ರೋಚಕ ಗೆಲುವು ಪಡೆಯಿತು.
ಆರಂಭಿಕ ಹಂತದಲ್ಲಿ ಹಿನ್ನಡೆ ಅನುಭವಿಸಿದ್ದ ಬೆಂಗಾಲ್ ವಾರಿಯರ್ಸ್ ತಂಡವು ಕೊನೇ
ಕ್ಷಣದಲ್ಲಿ ತೋರಿದ ಚಮತ್ಕಾರಿ ಆಟದೆದುರು ಹಾಲಿ ಚಾಂಪಿಯನ್ಸ್ ಜೈಪುರ ಪಿಂಕ್ ಪ್ಯಾಂಥರ್ಸ್ 28-26ರಿಂದ ಸೋಲನುಭವಿಸಿತು. ಈ ಗೆಲುವಿನೊಂದಿಗೆ ವಾರಿಯರ್ಸ್ ಟೂರ್ನಿಯಲ್ಲಿ ಮೊದಲ ಗೆಲುವನ್ನು ದಾಖಲಿಸಿತು.