ಫಿಫಾ ಮಾಜಿ ಅಧ್ಯಕ್ಷ ಬ್ಲಾಟರ್ 
ಕ್ರೀಡೆ

ಫಿಫಾ ಅಧ್ಯಕ್ಷ ಬ್ಲಾಟರ್ ರಾಜಿನಾಮೆ

ಕುತೂಹಲಕಾರಿ ವಿದ್ಯಮಾನವೊಂದರಲ್ಲಿ ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಫುಟ್ಬಾಲ್ ಸಂಸ್ಥೆಯ (ಪಿಫಾ) ಅಧ್ಯಕ್ಷರಾಗಿದ್ದ ಸೆಪ್ ಬ್ಲಾಟರ್ ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ...

ವಾಷಿಂಗ್ ಟನ್: ಕುತೂಹಲಕಾರಿ ವಿದ್ಯಮಾನವೊಂದರಲ್ಲಿ ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಫುಟ್ಬಾಲ್ ಸಂಸ್ಥೆಯ (ಪಿಫಾ) ಅಧ್ಯಕ್ಷರಾಗಿದ್ದ ಸೆಪ್ ಬ್ಲಾಟರ್ ತಮ್ಮ ಸ್ಥಾನಕ್ಕೆ ರಾಜಿನಾಮೆ
ಸಲ್ಲಿಸಿದ್ದಾರೆ.

ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ತಮ್ಮ ರಾಜಿನಾಮೆ ನಿರ್ಧಾರವನ್ನು ಪ್ರಕಟಿಸಿದರೆಂದು ಗಾರ್ಡಿಯನ್ ವೆಬ್‍ಸೈಟ್ ವರದಿ ಮಾಡಿದೆ. ಮೇ 29ರಂದು ನಡೆದಿದ್ದ ಅಧ್ಯಕ್ಷೀಯ ಚುನಾವಣೆಯಲ್ಲಿ ಬ್ಲಾಟರ್, ಪಿಫಾ ಅಧ್ಯಕ್ಷರಾಗಿ ಸತತ ಐದನೇ ಬಾರಿಗೆ ಆಯ್ಕೆಯಾಗಿದ್ದರು. ಆದರೆ, ಅಧಿಕಾರ ಗದ್ದುಗೆ ಹಿಡಿದ ಕೇವಲ ನಾಲ್ಕೇ ದಿನಗಳಲ್ಲಿ ಅವರು ತಮ್ಮ ಸ್ಥಾನ ತೊರೆದಿರುವುದು ಜಾಗತಿಕ ಫುಟ್ಬಾಲ್ ಕ್ಷೇತ್ರದಲ್ಲಿ ಭಾರಿ ಸಂಚಲನ ಉಂಟು ಮಾಡಿದೆ.

ಶೀಘ್ರದಲ್ಲೇ ನೂತನ ಅಧ್ಯಕ್ಷರ ಆಯ್ಕೆ
ಪಿಫಾಗೆ ನೂತನ ಅಧ್ಯಕ್ಷಷರ ಆಯ್ಕೆಗಾಗಿ ಶೀಘ್ರದಲ್ಲೇ ಮತ್ತೊಂದು ಪೀಫಾ ವಾರ್ಷಿಕ ಸಭೆ ಕರೆಯುವುದಾಗಿ ಬ್ಲಾಟರ್ ಮಂಗಳ ವಾರದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಅಲ್ಲದೆ, ಮುಂದಿನ ಅಧ್ಯಕ್ಷೀಯ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲವೆಂದೂ ಅವರು ಸ್ಪಷ್ಟಪಡಿಸಿದ್ದಾರೆ.

ರಾಜಿನಾಮೆಗೆ ಕಾರಣ
ಪಿಫಾ ಅಧ್ಯಕ್ಷರಾಗಿ ಆಯ್ಕೆಯಾದ ಮೇಲೂ ಭ್ರಷ್ಟಾಚಾರ ಭೂತ ಬ್ಲಾಟರ್ ಅವರನ್ನು ಬಿಟ್ಟಿರಲಿಲ್ಲ. ಜಾಗತಿಕ  ಮಟ್ಟದಲ್ಲಿ ಹಲವಾರು ದೇಶಗಳ ಫುಟ್ ಬಾಲ್ ಸಂಸ್ಥೆಗಳಲ್ಲಿನ ಕೋಟಿ ಗಟ್ಟಲೆ ಹಣ ಫುಟ್ ಬಾಲ್ ಸಂಸ್ಥೆಗಳಲ್ಲಿನ ಕೋಟಿಗಟ್ಟಲೆ ಹಣಕಾಸು ಅವ್ಯವಹಾರ ಹಗರಣಗಳಿಗೆ ಅವರ ಕುಮ್ಮಕ್ಕಿತ್ತು ಎಂಬ  ಆರೋಪಗಳು ಕೇಳಿಬಂದಿದ್ದವು. ಅಲ್ಲದೆ, ಬ್ಲಾಟರ್ ಅವರ ಆಪ್ತರಾದ ಕೆಲವು ಪಿಫಾ ಅಧಿಕಾರಿಗಳ ಕೊರಳಿಗೆ ಹಗರಣಗಳ ಹಾರ ಸುತ್ತಿಕೊಂಡಿತ್ತು. ಇದೂ ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು. ಎಲ್ಲಕ್ಕಿಂತ ಮಿಗಿಲಾಗಿ, ಇದೆಲ್ಲದರ ಜೊತೆಗೆ, ಅಮೆರಿಕ ಹಾಗೂ ಯೂರೋಪ್ ನ ಫುಟ್ ಬಾಲ್ ಸಂಸ್ಥೆಗಳ ಪ್ರಬಲ ವಿರೋಧದ ನಡುವೆಯೂ ಬ್ಲಾಟರ್, ಪಿಫಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರಿಂದ ಜಾಗತಿಕ ಮಟ್ಟದಲ್ಲಿ ಫಿಫಾ ಎರಡು ಹೋಳುಗಳಾಗುವ ಸಾಧ್ಯತೆಯೂ ಹೆಚ್ಚಿತ್ತು.

ಫುಟ್ಬಾಲ್ ಕ್ರೀಡೆಯನ್ನು ದೇವರಂತೆ ಆರಾಧಿಸುವ ಅಮೆರಿಕಾ ಹಾಗೂ ಯೂರೋಪ್ ರಾಷ್ಟ್ರಗಳನ್ನು ಎದುರು ಹಾಕಿಕೊಂಡು ಫಿಫಾ ನಡೆಸುವುದು ಸುಲಭವಾಗಿರಲಿಲ್ಲ. ಈ ಎಲ್ಲಾ ಬೆಳವಣಿಗೆಗಳಿಂದ ಅವರ ರಾಜಿನಾಮೆಗೆ ಒತ್ತಡ ಹೆಚ್ಚಾಯಿತು. ಹೀಗಾಗಿ, ಅವರು ರಾಜಿನಾಮೆ ಸಲ್ಲಿಸಿದ್ದಾರೆನ್ನಲಾಗಿದೆ.

ಫಉಟ್ಬಾಲ್ ಕ್ರೀಡೆಯ ಬೆಳವಣಿಗೆಯ ದೃಷ್ಟಿಯಿಂದ ಬ್ಲಾಟರ್ ರಾಜಿನಾಮೆ ಸಮಯೋಚಿತವಾದದ್ದು.
-ಎ.ಆರ್. ಖಲೀಲ್, ಕರ್ನಾಟಕ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷ

ಪಿಫಾ ಹಾಗೂ ಫುಟ್ಬಾಲ್ ಕ್ರೀಡೆಯ ಅಭಿವೃದ್ಧಿಗಾಗಿ ರಾಜಿನಾಮೆ ನಿರ್ಧಾರ ಕೈಗೊಂಡಿದ್ದೇನೆ. ಇನ್ನು ಮುಂದೆ, ಸಂಸ್ಥೆಯ ಸುಧಾರಣೆಯತ್ತ ಗಮನ ಹರಿಸುತ್ತೇನೆ.
-ಸೆಪ್ ಬ್ಲಾಟರ್, ಫಿಫಾ ಮಾಜಿ ಅಧ್ಯಕ್ಷ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT