ಕ್ರೀಡೆ

ಡ್ರಾಗೆ ಬಿಎಫ್ ಸಿ ತೃಪ್ತಿ

ಪ್ರಸಕ್ತ ಐ-ಲೀಗ್ ಋತುವಿನಲ್ಲಿ ಹಾಲಿ ಚಾಂಪಿಯನ್ ಬೆಂಗಳೂರು ಎಫಿಸಿ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಯುವ ಸ್ಟ್ರೈಕರ್ ಯುಗೆನ್ಸನ್ ಲಿಂಗ್ಡೊ ತಂಡಕ್ಕೆ

ಗೋವಾ: ಪ್ರಸಕ್ತ ಐ-ಲೀಗ್ ಋತುವಿನಲ್ಲಿ ಹಾಲಿ ಚಾಂಪಿಯನ್ ಬೆಂಗಳೂರು ಎಫ್ ಸಿ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಯುವ ಸ್ಟ್ರೈಕರ್ ಯುಗೆನ್ಸನ್ ಲಿಂಗ್ಡೊ ತಂಡಕ್ಕೆ ಮತ್ತೊಮ್ಮೆ ಆಸರೆಯಾಗಿದ್ದಾರೆ.

ಮಂಗಳವಾರ ಕೂಪರೇಜ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ಎಫಿಸಿ ಆತಿಥೇಯ ಮುಂಬೈ ಎಫಿಸಿ ವಿರುದ್ಧ 1--1 ಗೋಲಿನಿಂದ ಡ್ರಾ ಫಲಿತಾಂಶ ಪಡೆದಿದೆ. ಪಂದ್ಯದ ಮೊದಲ ಅವ„ಯಲ್ಲಿ ಸಂಪೂರ್ಣ ನಿಯಂತ್ರಣ ಸಾ„ಸಿದ ಹಾಲಿ ಚಾಂಪಿಯನ್ನರು ಎದುರಾಳಿಗಳ ಮೇಲೆ ಒತ್ತಡ ಹಾಕುವಲ್ಲಿ ಯಶಸ್ವಿಯಾದರು.

ಪಂದ್ಯದ 17ನೇ ನಿಮಿಷದಲ್ಲಿ ಸಿಕ್ಕ ಗೋಲು ದಾಖಲಿಸುವ ಅವಕಾಶವನ್ನು ಬಿಎಫ್ ಸಿ ಕೈಚೆಲ್ಲಿತ್ತು. ತಂಡದ ಪ್ರಮುಖ ಸ್ಟ್ರೈಕರ್ ಸೀನ್ ರೂನಿ, ಕೀಗನ್ ಅವರು ನೀಡಿದ ಪಾಸ್ ಅನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರೂ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸುವಲ್ಲಿ ಯಶಸ್ವಿಯಾಗಲಿಲ್ಲ. ಪಂದ್ಯದ 31ನೇ ನಿಮಿಷದಲ್ಲಿ ಮಿಂಚಿನ ಪ್ರದರ್ಶನ ನೀಡಿದ ಯುಗೆನ್ಸನ್ ಲಿಂಗ್ಡೊ, ಗೋಲು ದಾಖಲಿಸುವ ಮೂಲಕ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಈ ಮೂಲಕ ಬಿಎಫಿಸಿ ಪಂದ್ಯದ ಮೊದಲ ಅವಧಿಯಲ್ಲಿ 1-0 ಗೋಲುಗಳ ಅಂತರದಲ್ಲಿ ಮುನ್ನಡೆ ಸಾಧಿಸಿತು.

ಎರಡನೇ ಅವ„ಯಲ್ಲಿ ಹೋರಾಟ ನಡೆಸಿದ ಮುಂಬೈ ಎಫಿಸಿ ಗೋಲುಗಳ ಅಂತರವನ್ನು ಸಮಗೊಳಿಸುವಲ್ಲಿ ಯಶಸ್ವಿಯಾದರು. ಪಂದ್ಯದ 49ನೇ ನಿಮಿಷದಲ್ಲಿ ಗೋಲು ದಾಖಲಿಸಿದ ಜೊಸಿಮರ್ ಮುಂಬೈ ತಂಡಕ್ಕೆ ಆಸರೆಯಾದರು. ಪಂದ್ಯದ ಅಂತಿಮ ಪಯಣದವರೆಗೂ ತೀವ್ರ ಪೈಪೋಟಿ ನಡೆಸಿದ ಬಿಎಫ್ ಸಿ ತಂಡ ಸಿಕ್ಕ ಗೋಲು ದಾಖಲಿಸುವ ಅವಕಾಶವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಿಲ್ಲ.

ಹೋಳಿ ಆಡೋಕು ಮುನ್ನ ಕೂದಲ ಹಾರೈಕೆ

61ನೇ ನಿಮಿಷದಲ್ಲಿ ಯುಗೆನ್ಸನ್ ಹಾಗೂ 65ನೇ ನಿಮಿಷದಲ್ಲಿ ಬೈಕೊ ಗೋಲು ದಾಖಲಿಸುವಲ್ಲಿ ವಿಫಲವಾದರು. ಈ ಡ್ರಾ ಫಲಿತಾಂಶದೊಂದಿಗೆ 1 ಅಂಕ ಪಡೆದ ಹಾಲಿ ಚಾಂಪಿಯನ್ನರು, ಒಟ್ಟಾರೆ ಟೂರ್ನಿಯಲ್ಲಿ 14 ಅಂಕ ಸಂಪಾದಿಸುವ ಮೂಲಕ ಮೂರನೇ ಸ್ಥಾನದಲ್ಲಿ ಮುಂದುವರಿದಿದೆ. ಇನ್ನು ಮುಂಬೈ ಎಫ್ ಸಿ ತಂಡ 11 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದೆ. ಸಲ್ಗಾಂವಕರ್‍ಗೆ ಶರಣಾದ ಶಿಲಾಂಗ್ ಪಂದ್ಯದ ಮೊದಲಾರ್ಧದಲ್ಲಿ ನಿಯಂತ್ರಣ ಸಾ„ಸುವಲ್ಲಿ ಯಶಸ್ವಿಯಾದ ಸಲ್ಗಾಂವಕರ್ ಎಫ್ ಸಿಐ ಲೀಗ್ ಟೂರ್ನಿಯಲ್ಲಿ ಶಿಲಾಂಗ್ ಲಾಜೊಂಗ್ ವಿರುದಟಛಿ ಗೆಲವು ದಾಖಲಿಸಿದೆ.

ಮಂಗಳವಾರ ಇಲ್ಲಿನ ಜವಾಹರ್‍ಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸಲ್ಗಾಂವಕರ್ ತಂಡ 2-1 ಗೋಲುಗಳ ಅಂತರದಲ್ಲಿ ಶಿಲಾಂಗ್ ಲಾಜೊಂಗ್ ವಿರುದ್ಧ ಗೆಲವು ದಾಖಲಿಸಿದೆ. ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಸಲ್ಗಾಂವಕರ್ 18ನೇ ನಿಮಿಷದಲ್ಲಿ ಡಫಿ ಹಾಗೂ 42ನೇ ನಿಮಿಷದಲ್ಲಿ ಜಿಡ್ಜಾ ಅವರ ಗೋಲಿನಿಂದ ಮುನ್ನಡೆ ಸಾಧಿಸಿತು. ಇನ್ನು ಶಿಲಾಂಗ್ ತಂಡದ ಪರ 25ನೇ ನಿಮಿಷದಲ್ಲಿ ಗ್ಲೆನ್ ಗೋಲು ದಾಖಲಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT