ಟೀಂ ಇಂಡಿಯಾ ಉಪನಾಯಕ ವಿರಾಟ್ ಕೊಹ್ಲಿ 
ಕ್ರೀಡೆ

ಕೊಹ್ಲಿ ಕಿರಿಕ್ ವರದಿ ಸಲ್ಲಿಕೆ

ಭಾರತೀಯ ಪತ್ರಕರ್ತನ ಮೇಲೆ ಕೋಪಗೊಂಡು ವಾಗ್ವಾದ ನಡೆಸಿದ್ದ ಟೀಂ ಇಂಡಿಯಾ ಉಪನಾಯಕ ವಿರಾಟ್ ಕೊಹ್ಲಿ ವರ್ತನೆ ಕುರಿತು ಐಸಿಸಿ ಹಾಗೂ ಬಿಸಿಸಿಐಗೆ ವರದಿ ನೀಡಲಾಗಿದೆ...

ಪರ್ತ್: ಭಾರತೀಯ ಪತ್ರಕರ್ತನ ಮೇಲೆ ಕೋಪಗೊಂಡು ವಾಗ್ವಾದ ನಡೆಸಿದ್ದ ಟೀಂ ಇಂಡಿಯಾ ಉಪನಾಯಕ ವಿರಾಟ್ ಕೊಹ್ಲಿ ವರ್ತನೆ ಕುರಿತು ಐಸಿಸಿ ಹಾಗೂ ಬಿಸಿಸಿಐಗೆ ವರದಿ ನೀಡಲಾಗಿದೆ.

ನಮ್ಮ ಪ್ರಧಾನ ಸಂಪಾದಕರೊಂದಿಗೆ ಮಾತನಾಡಿದ ನಂತರ, ಈ ಪ್ರಕರಣದ ಕುರಿತು ಬಿಸಿಸಿಐ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ಅವರಿಗೆ ಪತ್ರ ಬರೆದಿದ್ದೇನೆ. ಇನ್ನು ವರದಿಗಾರ ಜಸ್ವಿಂದರ್ ಸಿಧು ಪ್ರಕರಣದ ಮಾಹಿತಿಯನ್ನು ಐಸಿಸಿಗೆ ನೀಡಿದ್ದಾರೆ ಎಂದು ಎಚ್‍ಟಿ ಕ್ರೀಡಾ ಸಂಪಾದಕರಾದ ಸುಖ್ವಂತ್ ಬಾಸ್ರಾ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರುವ ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್, ಈ ಪ್ರಕರಣದ ಕುರಿತು ಕೊಹ್ಲಿ ಸ್ಪಷ್ಟನೆ ನೀಡಿದ್ದಾರೆ.ವಿಶ್ವಕಪ್  ಟೂರ್ನಿಯಲ್ಲಿ ಭಾರತ ತಂಡ ಗಮನ ಕೇಂದ್ರೀಕರಿಸುವುದು ಪ್ರಮುಖ. ಅಪಾರ್ಥದಿಂದ ಈ ಪ್ರಕರಣ ಸಂಭವಿಸಿದೆ. ಹಾಗಾಗಿ ಈ ವಿಷಯವನ್ನು ಇಲ್ಲಿಗೆ ಬಿಡುವುದು ಉತ್ತಮಎಂದಿದ್ದಾರೆ. ಭವಿಷ್ಯದಲ್ಲಿ ಈ ರೀತಿಯಾದ ವರ್ತನೆಗಳು ಮರುಕಳಿಸುವುದಿಲ್ಲ. ಆಟಗಾರರೊಂದಿಗೆ ಮಾತನಾಡಿಲ್ಲ. ಆದರೆ, ತಂಡದ ಆಡಳಿತ ಮಂಡಳಿ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದ್ದಾರೆ.

ಪ್ರಕರಣದ ನಂತರ ಕೊಹ್ಲಿ ನನಗೆ ನೇರವಾಗಿ ಕ್ಷಮೆ ಕೋರಿಲ್ಲ. ಘಟನೆ ನಡೆದ ಸ್ವಲ್ಪ ಸಮಯದ ನಂತರ, `ಕೊಹ್ಲಿ ಕ್ಷಮೆಯಾಚಿಸಿದ್ದಾರೆ. ಮತ್ತೊಂದು ಪತ್ರಿಕೆಯ ವರದಿಯನ್ನು ತಪ್ಪಾಗಿ ಅರ್ಥೈಸಿಕೊಂಡು ನಿಮ್ಮ ವಿರುದ್ಧ ಕೊಹ್ಲಿ ಕೋಪಗೊಂಡಿದ್ದಾರೆ' ಎಂದು ನನ್ನ ಸ್ನೇಹಿತ ಬಂದು ತಿಳಿಸಿದರು. ಆದರೆ, ಕೊಹ್ಲಿ ನನಗೆ ನೇರವಾಗಿ ಕ್ಷಮೆ ಕೋರಿಲ್ಲ ಎಂದು ಪ್ರಕರಣದ ಕೇಂದ್ರ ಬಿಂದುವಾಗಿರುವ ಪತ್ರಕರ್ತ ಜಸ್ವಿಂದರ್ ಸಿಧು ಪ್ರತಿಕ್ರಿಯಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ 10ಕ್ಕೂ ಹೆಚ್ಚು ಮಹಿಳೆಯರು ಅಸ್ವಸ್ಥ; ಪುತ್ತೂರಿನಲ್ಲಿ ಆಗಿದ್ದೇನು?

'ಶೋಲೆ' ಖ್ಯಾತಿಯ ಬಾಲಿವುಡ್ ನಟ ಗೋವರ್ಧನ್ ಅಸ್ರಾನಿ ವಿಧಿವಶ

Israel ಸೈನಿಕರ ಹತ್ಯೆಯ ನಂತರ ಮುರಿದುಬಿದ್ದ ಕದನ ವಿರಾಮ: ಗಾಜಾದ ಮೇಲೆ ಇಸ್ರೇಲ್ ವಾಯುದಾಳಿಯಲ್ಲಿ 45 ಮಂದಿ ಸಾವು!

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಗೆಲುವಿನ ಸಂಭ್ರಮದ ಬಳಿಕ ಹೃದಯಾಘಾತವಾಗಿ ಮಾಜಿ ಅಧ್ಯಕ್ಷ ಸಾವು

10,000 ಅಡಿ ದಿಢೀರ್ ಕುಸಿದ 737 ಬೋಯಿಂಗ್ ವಿಮಾನ; ಮಾರ್ಗ ಮಧ್ಯೆ ವಿಂಡ್ ಶೀಲ್ಡ್ ಗೆ ಹಾನಿ; ಪೈಲೆಟ್, ಪ್ರಯಾಣಿಕರು ಬದುಕಿದ್ದೇ ಪವಾಡ!

SCROLL FOR NEXT