ಗೋಲು ಗಳಿಸಿದ ಸಂಭ್ರಮದಲ್ಲಿ ಬಾರ್ಸಿಲೋನಾ ತಂಡದ ಮೆಸ್ಸಿ 
ಕ್ರೀಡೆ

ಮೆಸ್ಸಿ ಮ್ಯಾಜಿಕ್: ಪ್ರಶಸ್ತಿಗೆ ಮುತ್ತಿಟ್ಟ ಬಾರ್ಸಿಲೋನಾ

ವಿಶ್ವಕಪ್ ಫುಟ್ ಬಾಲ್ ನಲ್ಲಿ ನಡೆದಿದ್ದ ಲಯೋನಲ್ ಮೆಸ್ಸಿ ಮ್ಯಾಜಿಕ್ ಇದೀಗ ಕೊಪಾ ಡೆಲ್ ರೇ ಸರಣಿಯಲ್ಲಿಯೂ ಮುಂದುವರೆದಿದ್ದು...

ಕಾಂಪ್ ನೌ (ಬಾರ್ಸಿಲೋನಾ): ವಿಶ್ವಕಪ್ ಫುಟ್ ಬಾಲ್ ನಲ್ಲಿ ನಡೆದಿದ್ದ ಲಯೋನಲ್ ಮೆಸ್ಸಿ ಮ್ಯಾಜಿಕ್ ಇದೀಗ ಕೊಪಾ ಡೆಲ್ ರೇ ಸರಣಿಯಲ್ಲಿಯೂ ಮುಂದುವರೆದಿದ್ದು, ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಬಾರ್ಸಿಲೋನಾ ತಂಡ 2-1ರ ಅಂತರದಲ್ಲಿ ಅಥ್ ಬಿಲ್ಬಾವೊ ವಿರುದ್ಧ ಜಯ ಸಾಧಿಸುವ ಮೂಲಕ ಪ್ರಶಸ್ತಿ ಪಡೆದುಕೊಂಡಿದೆ.

ಬಾರ್ಸಿಲೋನಾದ ಕಾಂಪ್ ನೌನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ವಿಶ್ವಕಪ್ ಫುಟ್ ಬಾಲ್ ಹೀರೋ ಮೆಸ್ಸಿ 2 ಅಮೋಘ ಗೋಲುಗಳನ್ನು ಗಳಿಸುವ ಮೂಲಕ ಬಾರ್ಸಿಲೋನಾ ತಂಡಕ್ಕೆ
ಜಯತಂದಿತ್ತರು. ಪಂದ್ಯದ 20ನೇ ನಿಮಿಷದಲ್ಲಿ ಎದುರಾಳಿ ತಂಡದ ಆಟಗಾರರನ್ನು ವಂಚಿಸಿ ಗೋಲು ಗಳಿಸುವಲ್ಲಿ ಮೆಸ್ಸಿ ಯಶಸ್ವಿಯಾದರು. ಕ್ರೀಡಾಂಗಣದ ಮಧ್ಯ ಭಾಗದಿಂದ ತಾವೊಬ್ಬರೇ ಚೆಂಡನ್ನು ಎದುರಾಳಿ ಆಟಗಾರರಿಗೆ ಸಿಗದಂತೆ ತುಂಬಾ ಚಾಕಚಕ್ಯತೆಯಿಂದ ಸಂಬಾಳಿಸುತ್ತಾ ಮೆಸ್ಸಿ ಗಳಿಸಿದ ಈ ಗೋಲು ಅಮೋಘವಾಗಿತ್ತು. ಬಾರ್ಸಿಲೋನಾ ಗೆಲುವಿಗೆ ಮೆಸ್ಸಿ ಗಳಿಸಿದ ಈ ಮ್ಯಾಜಿಕ್ ಗೋಲ್ ಮುನ್ನುಡಿಯಾಯಿತು.

ಮೊದಲ ಆಘಾತ ಎದುರಿಸಿದ ಅಥ್ ಬಿಲ್ಬಾವೊ ಪಂದ್ಯದ ಮಧ್ಯದಲ್ಲಿ ಕೊಂಚ ಪ್ರತಿರೋಧ ಒಡ್ಡಿತಾದರೂ ಮತ್ತೆ ತಂಡಕ್ಕೆ ಆಘಾತ ಎದುರಾಯಿತು. ಈ ಬಾರಿ ಬಾರ್ಸಿಲೋನಾ ತಂಡದ ನೇಮರ್ ಅಥ್ ಬಿಲ್ಬಾವೊ ಮತ್ತೊಂದು ಆಘಾತ ನೀಡಿದರು. ಪಂದ್ಯದ 36ನೇ ನಿಮಿಷದಲ್ಲಿ ಎದುರಾಳಿ ತಂಡ ಗೋಲ್ ಕೀಪರ್ ರನ್ನು ವಂಚಿಸುವಲ್ಲಿ ಯಶಸ್ವಿಯಾದರು. ಪ್ರಸಕ್ತ ಸಾಲಿನ ಫುಟ್ ಬಾಲ್ ಸರಣಿಯಲ್ಲಿ ನೇಮರ್ ಗಳಿಸಿದ 387ನೇ ಗೋಲ್ ಇದು. ಪಂದ್ಯ ಅಂತಿಮ ಹಂತಕ್ಕೆ ತಲುಪುತ್ತಿದ್ದಂತೆಯೇ ಬಾರ್ಸಿಲೋನಾ ತಂಡದ ಗೆಲುವು ಖಚಿತವಾಯಿತಾದರೂ, ಎದುರಾಳಿ ತಂಡದ ಆಟಗಾರರು ಮಾತ್ರ ತಮ್ಮ ಹೋರಾಟವನ್ನು ಕೈ ಬಿಡಲಿಲ್ಲ. ಪಂದ್ಯದ ಅಂತಿಮ ಹಂತದಲ್ಲಿ ಅಂದರೆ 74ನೇ ನಿಮಿಷದಲ್ಲಿ ಬಾರ್ಸಿಲೋನಾ ತಂಡದ ಮೆಸ್ಸಿ ತಮ್ಮ 2ನೇ ಗೋಲು ಗಳಿಸುವ ಮೂಲಕ ಬಾರ್ಸಿಲೋನಾ ತಂಡದ ಗೆಲುವು ಖಚಿತ ಪಡಿಸಿದರು. ಅಷ್ಟು ಹೊತ್ತಿಗಾಲೇ ಪಂದ್ಯದ ಫಲಿತಾಂಶ1-3 ಆಗಿತ್ತು.

ಅಂತಿಮವಾಗಿ 79ನೇ ನಿಮಿಷದಲ್ಲಿ  ಅಥ್ ಬಿಲ್ಬಾವೊ ತಂಡದ ಆಟಗಾರ ವಿಲಿಯಮ್ಸ್ ಗೋಲು ಗಳಿಸಿದರಾದರೂ, ಬಾರ್ಸಿಲೋನಾದ ಗೆಲುವು ಕಸಿದುಕೊಳ್ಳಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ರ್ಸಿಲೋನಾ ತಂಡ ಫೈನಲ್ ಪಂದ್ಯದಲ್ಲಿ 3-1ರಿಂದ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

"ಮೆಸ್ಸಿ ಮ್ಯಾಜಿಕ್ ಗೋಲು" ವಿಡಿಯೋಗಾಗಿ ಇಲ್ಲಿ ಕ್ಲಿಕ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌, ಪವಿತ್ರಾ ಗೌಡಗೆ ಬಿಗ್ ಶಾಕ್: ಪ್ರದೋಷ್‌ ಮಾಫಿ ಸಾಕ್ಷಿಗೆ ಕೋರ್ಟ್‌ ಅಸ್ತು

17 ದಿನಗಳಿಂದ ಸಂಸತ್ತಿನ ಎರಡೂ ಸದನಗಳು ಸ್ತದ್ಧ; ನಮ್ಮ ಬೇಡಿಕೆಗಳಿಗೆ ಹೆದರಿ PM ಮೋದಿ, ಅಮಿತ್ ಶಾ ಸದನಕ್ಕೆ ಬರುತ್ತಿಲ್ಲ: ಖರ್ಗೆ

ಪ್ರತಿಪಕ್ಷಗಳು ಸಂಪುಟದಿಂದ ವಜಾಕ್ಕೆ ಆಗ್ರಹಿಸುತ್ತಿರುವ ಮಧ್ಯೆ ಸಚಿವ ಬಿ. ನಾಗೇಂದ್ರಗೆ ಹೈಕೋರ್ಟ್ ಬಿಗ್ ರಿಲೀಫ್!

ರಾಜ್‌ಗಢದಲ್ಲಿ ಭಾರೀ ಮಳೆ: 11 ಪ್ರಯಾಣಿಕರ ಸಮೇತ ಚರಂಡಿಯಲ್ಲಿ ಕೊಚ್ಚಿ ಹೋದ ವ್ಯಾನ್; 9 ಮಂದಿ ಸಾವು!

ದೇಶದ ಅತ್ಯಂತ ದುಬಾರಿ ಪೆಂಟ್‌ಹೌಸ್! ಈ ಐಷಾರಾಮಿ ಮನೆ 271 ಕೋಟಿಗೆ ಮಾರಾಟ!