ನ್ಯೂಯಾರ್ಕ್: ವರ್ಷದ ಕಡೆಯ ಗ್ರಾಂಡ್‍ಸ್ಲಾಮ್ ಟೆನಿಸ್ ಟೂರ್ನಿಯ ವೇಳೆ ಕೊಠಡಿಯಲ್ಲಿ ಜಾರಿಬಿದ್ದು, ಗಾಯಗೊಂಡಿದ್ದ ಕೆನಡಾದ ಖ್ಯಾತ ಟೆನಿಸ್ ಆಟಗಾರ್ತಿ ಯುಜೇನಿ ಬೌಚರ್ಡ್, ಅಮೆರಿಕ ಟೆನಿಸ್ ಸಂಸ್ಥೆ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ.
ಸೆ.4ರಂದು ಬೌಚರ್ಡ್ ಲಾಕರ್ ರೂಮ್ ನಲ್ಲಿ ಜಾರಿ ಬಿದ್ದು ಗಾಯಗೊಂಡಿದ್ದರು. ಹಾಗಾಗಿ ಮಿಶ್ರ ಡಬಲ್ಸ್ ಪಂದ್ಯದಿಂದ ಹೊರ ನಡೆದಿದ್ದರು. ಆ ನಂತರ ಮಹಿಳೆಯರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲೂ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿರಲಿಲ್ಲ.
ನಂತರ ಚೀನಾ ಹಾಗೂ ಜಪಾನ್ ಓಪನ್‍ನಿಂದಲೂ ಹಿಂದೆ ಸರಿದಿದ್ದರು. ಈ ಘಟನೆಯಿಂದ ಬೌಚರ್ಡ್‍ಗೆ ಸಾಕಷ್ಟು ಆರ್ಥಿಕ ನಷ್ಟ ವಾಗಿತ್ತು. ಇದರ ವಿರುದ್ಧ ಕಾರಣ ಅಮೆರಿಕ ಟೆನಿಸ್ ಸಂಸ್ಥೆ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ.