ಮುಂಬೈ: ಮುಂಬೈ ಸ್ಫೋಟ ಪ್ರಕರಣದಲ್ಲಿ ಸೆರೆವಾಸ ಅನುಭವಿಸುತ್ತಿರುವ ಬಾಲಿವುಡ್ ನಟ ಸಂಜಯ್ ದತ್ ಇದೀಗ ನಿವೃತ್ತ ಕ್ರಿಕೆಟಿಗರ ಮಾಸ್ಟರ್ಸ್ ಚಾಂಪಿಯನ್ಸ್ ಲೀಗ್ (ಎಂಸಿಎಲ್)ನಲ್ಲಿ ಫ್ರಾಂಚೈಸಿ ಒಂದನ್ನು ಖರೀದಿಸಿದ್ದಾರೆ.
ಮುಂದಿನ ವರ್ಷ ಸೆರೆವಾಸ ಶಿಕ್ಷೆ ಪೂರೈಸಲಿರುವ ಸಂಜು ಅವರ ಪತ್ನಿ ಮಾನ್ಯತಾ ಈ ಹೊಸ ಫ್ರಾಂಚೈಸಿಯನ್ನು ಕೊಳ್ಳಲು ಕಾರ್ಯೋನ್ಮುಖ ರಾಗಿದ್ದು, ಒಟ್ಟಾರೆ ಮುನ್ನಾಭಾಯ್ ಅವರ ಸ್ಪೋಟ್ರ್ಸ್ ಜೋಶ್ ಹೆಚ್ಚಿಸಲು ಮುಂದಾಗಿದ್ದಾರೆ.