ಮುಂಬೈ: ದಕ್ಷಿಣ ಆಫ್ರಿಕಾ ನೀಡಿರುವ 439 ರನ್ ಗಳ ಬೃಹತ್ ಮೊತ್ತವನ್ನು ಬೆನ್ನತ್ತಿರುವ ಟೀಂ ಇಂಡಿಯಾ ಸೋಲಿನ ಸುಳಿಗೆ ಸಿಲುಕಿದೆ.
ವಾಂಖಡೇ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಆತಿಥೇಯ ಭಾರತದೊಂದಿಗಿನ ಸರಣಿ ನಿರ್ಣಾಯಕ ಪಂದ್ಯದಲ್ಲಿ ಪ್ರಮುಖ 5 ವಿಕೆಟ್ ಗಳನ್ನು ಕಳೆದುಕೊಂಡಿರುವ ಭಾರತ ಹೀನಾಯ ಸೋಲಿನಿಂದ ತಪ್ಪಿಸಿಕೊಳ್ಳಲು ಗೌರವಯುತ ಮೊತ್ತವನ್ನು ದಾಖಲಿಸಬೇಕಿದೆ. ಭಾರತ ಪರ ರೋಹಿತ್ ಶರ್ಮಾ 16, ಶಿಖರ್ ಧವನ್ 60, ವಿರಾಟ್ ಕೊಹ್ಲಿ 7, ಅಂಜಿಕ್ಯಾ ರಹಾನೆ 87 ಹಾಗೂ ಸುರೇಶ್ ರೈನಾ 12 ರನ್ ಗಳಿಸಿ ಪೆವಿಲಿಯನ್ ಸೇರಿದ್ದಾರೆ.
ಟೀಂ ಇಂಡಿಯಾ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅಜೇಯ 3 ಹಾಗೂ ಅಕ್ಷರ ಪಟೇಲ್ ಶೂನ್ಯ ಗಳಿಸಿ ಕ್ರಿಸ್ ನಲ್ಲಿದ್ದಾರೆ.
ದಕ್ಷಿಣ ಆಫ್ರಿಕಾ ಪರ ರಬಾಡಾ 3, ಸ್ಟೈನ್ ಹಾಗೂ ಅಬ್ಬೋಟ್ 1 ವಿಕೆಟ್ ಪಡೆದಿದ್ದಾರೆ.
ಟೀಂ ಇಂಡಿಯಾ ವಿರುದ್ಧದ ಐದನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 438 ರನ್ ಗಳ ಬೃಹತ್ ಮೊತ್ತ ಕಲೆಹಾಕಿದೆ. ಇದರೊಂದಿಗೆ ಭಾರತ ಸರಣಿ ಗೆಲ್ಲಲು 439 ರನ್ ಗಳ ಬೃಹತ್ ಮೊತ್ತವನ್ನು ಗಳಿಸಬೇಕಿದೆ.
ಟಾಸ್ ಗೆದ್ದ ಪ್ರವಾಸಿ ದಕ್ಷಿಣ ಆಫ್ರಿಕಾ ಪರ ಆರಂಭಿಕ ಆಟಗಾರ ಕ್ಲಿಂಟನ್ ಡಿ ಕಾಕ್ 109 ರನ್ ಸಿಡಿಸಿ ಔಟಾದರು. ಆಮ್ಲಾ 13 ಎಸೆತಗಳಲ್ಲಿ 23 ರನ್ ಗಳಿಸಿದ್ದಾರೆ. ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಎಬಿಡಿ ವಿಲಿಯರ್ಸ್ ಕೇಲವ 61 ಎಸೆತಗಳಲ್ಲಿ 119 ರನ್ ಸಿಡಿಸಿದರು. ಡುಪ್ಲೇಸಿಸ್ ಸಹ ಭರ್ಜರಿ ಬ್ಯಾಟಿಂಗ್ ನೊಂದಿಗೆ 115 ಎಸೆತಗಳಲ್ಲಿ 133 ರನ್ ಸಿಡಿಸಿದರು. ಇದರೊಂದಿಗೆ ದಕ್ಷಿಣ ಆಫ್ರಿಕಾ ಬೃಹತ್ ಮೊತ್ತ ಕಲೆ ಹಾಕಲು ಸಾಧ್ಯವಾಯಿತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos