ಮುಂಬೈ: ಭಾರತೀಯ ಟೆಸ್ಟ್ ಟೀಂ ನಾಯಕ ವಿರಾಟ್ ಕೊಹ್ಲಿಯ ಟೀಂನಲ್ಲಿ ಆಡಲು ಸಚಿನ್ ತೆಂಡೂಲ್ಕರ್ ಆಗ್ರಹ ವ್ಯಕ್ತ ಪಡಿಸಿದ್ದಾರೆ. ಅಚ್ಚರಿ ಪಡಬೇಡಿ. ಸಚಿನ್ ಕೊಹ್ಲಿ ಜತೆ ಕ್ರಿಕೆಟ್ ಆಡಬೇಕೆಂದು ಇಚ್ಛೆ ವ್ಯಕ್ತ ಪಡಿಸಿಲ್ಲ. ಬದಲಾಗಿ ಅಂತಾರಾಷ್ಟ್ರೀಯ ಪ್ರೀಮಿಯರ್ ಟೆನಿಸ್ ಲೀಗ್‌ನಲ್ಲಿ ಯುಎಇ ರಾಯಲ್ಸ್ ತಂಡದ ಸಹ ಮಾಲೀಕತ್ವ ಹೊಂದಿರುವ ಕೊಹ್ಲಿಯ ಟೆನಿಸ್ ಟೀಂನಲ್ಲಿ ಆಡಬೇಕೆಂದು ಸಚಿನ್ ಆಗ್ರಹ ವ್ಯಕ್ತ ಪಡಿಸಿದ್ದಾರೆ.