ಕೋಲ್ಕತಾ: ಕರ್ನಾಟಕದ ಹೆಸರಾಂತ ಓಟಗಾರ್ತಿಎಂ.ಆರ್. ಪೂವಮ್ಮ ತಮ್ಮ ಅತ್ಯುತ್ತ ಮ ಪ್ರದರ್ಶನ ಮುಂದುವರೆಸುವ ಮೂಲಕ 55 ನೇ ರಾಷ್ಟ್ರೀಯ ಓಪನ್ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನ 400 ಮೀ. ಓಟದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಶುಕ್ರವಾರ ನಡೆದ ಮಹಿಳೆಯರ 400 ಮೀ. ಓಟದಲ್ಲಿ ಪೂವಮ್ಮ ತಮ್ಮ ಅನುಭವ ಹಾಗೂ ಕೌಶಲವನ್ನು ಬಳಸಿಕೊಂಡು ಅಗ್ರಸ್ಥಾನ ಪಡೆದರು. 53.55 ಸೆ.ಗಳಲ್ಲಿ ಗುರಿ ಮುಟ್ಟಿದ ಪೂವಮ್ಮ, ಸತತ ಐದನೇ ಬಾರಿಗೆ ಪ್ರಶಸ್ತಿ ಪಡೆಯುವಲ್ಲಿ ಯಶಸ್ವಿಯಾ ದರು. ಈ ಮೂಲಕ ಕೆ.ಎಂ ಬೀನಮೊಲ್ ಅವರು 1999ರಿಂದ 2002ರವರೆಗೆ ಸತತ ನಾಲ್ಕು ಬಾರಿ ಚಾಂಪಿಯನ್ ಆದ ಸಾಧನೆಯನ್ನು ಅವರು ಹಿಂದಿಕ್ಕಿದರು. ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯಲು 52.00 ಸೆ.ಗಳ ಮಾನದಂಡವನ್ನು ಪೂರೈಸಲು ಸಾಧ್ಯವಾಗದಿದ್ದರೂ, ಪೂವಮ್ಮ ಅಗ್ರಸ್ಥಾನ ಪಡೆಯುವಲ್ಲಿ ಯಶಸ್ವಿ ಯಾಗಿ ದ್ದಾರೆ. ಇನ್ನು ದೆಬಶ್ರೀ ಮಜುಂದಾರ್ 54.54 ಸೆ.ಗಳಲ್ಲಿ ಕ್ರಮಿಸಿ ಎರಡನೇ ಸ್ಥಾನ ಪಡೆಯಲಷ್ಟೇ ಶಕ್ತರಾದರು.
ದ್ಯುತೀ ಶುಭಾರಂಭ: ಇನ್ನು ವಿವಾದದಿಂದ ಹೊರಬಂದು ಮತ್ತೆಟ್ರ್ಯಾಕ್‍ಗಿಳಿದಿರುವ ಓಟಗಾರ್ತಿ ದ್ಯುತಿ ಚಾಂದ್ 100 ಮೀ. ವಿಭಾಗ ದಲ್ಲಿ ಸುಲಭವಾಗಿ ಸ್ವರ್ಣ ಪದಕಪಡೆದರು. ಗುರುವಾರ ಸಾಯ್ ಕೇಂದ್ರದಲ್ಲಿ ನಡೆದ ಸ್ಪರ್ಧೆಯಲ್ಲಿ ನಡೆದ ಸ್ಪರ್ಧೆಯಲ್ಲಿ ದ್ಯುತೀ 11.68 ಸೆ.ಗಳಲ್ಲಿ ಗುರಿ ಮುಟ್ಟುವ ಮೂಲಕ ಅಗ್ರಸ್ಥಾನ ಪಡೆದರೆ, ಸ್ರಬಾನಿ ನಂದಾ 11.70 ಸೆ.ಗಳಲ್ಲಿ ಗುರಿ ಸೇರಿ ದ್ವಿತೀಯ ಸ್ಥಾನ ಪಡೆದರು.
ಲಲಿತಾ ಬಬರ್ ಕೂಟ ದಾಖಲೆ: ಇತ್ತ ಮಹಿಳೆಯರ 3000 ಮೀ. ಸ್ಟೀಪಲ್‍ಚೇಸ್ ವಿಭಾಗದಲ್ಲಿ ಭಾರತದ ಲಲಿತಾ ಬಬರ್ 9:39.83 ಸೆ. ಗಳಲ್ಲಿ ಪೂರ್ಣಗೊಳಿಸಿ ಅಗ್ರ ಸ್ಥಾನ ಪಡೆಯುವ ಮೂಲಕ ಕೂಟ ದಾಖಲೆ ನಿರ್ಮಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಈ ಮೂಲಕ ರೈಲ್ವೇಸ್ ಸುಧಾ ಸಿಂಗ್ (10:08.50) ಅವರ ಈ ಹಿಂದಿನ ಸಾಧನೆಯನ್ನು ಅಳಿಸಿಹಾಕಿದರು. ಈ ಸ್ಪರ್ಧೆಯಲ್ಲಿ ಸುಧಾ ಸಿಂಗ್ 9:47.31 ಸೆ.ಗಳಲ್ಲಿ ಪೂರ್ಣಗೊಳಿಸಿ ದ್ವಿತೀಯ ಸ್ಥಾನ ಪಡೆದರು