ಕ್ರೀಡೆ

ಪ್ರಶಸ್ತಿ ಸುತ್ತಿಗೆ ಬ್ರಿಟನ್ ಲಗ್ಗೆ

Mainashree

ಲಂಡನ್: ವಿಶ್ವದ ಮೂರನೇ ರ್ಯಾಂಕಿಂಗ್‍ನ ಆ್ಯಂಡಿ ಮರ್ರೆ ಗ್ರೇಟ್ ಬ್ರಿಟನ್ ತಂಡವನ್ನು 37 ವರ್ಷಗಳ ಬಳಿಕ ಮೊಟ್ಟ ಮೊದಲ ಬಾರಿಗೆ ಡೇವಿಸ್ ಕಪ್ ಟೂರ್ನಿಯ ಫೈನಲ್ ಸುತ್ತಿಗೆ ಕರೆದೊಯ್ದಿದ್ದಾರೆ.

ಭಾನುವಾರ ಗ್ಲಾಸ್ಗೊ ಎಮಿರೆಟ್ಸ್ ಅರೆನಾದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಗುಂಪಿನ ಸೆಮಿಫೈನಲ್ ಸೆಣಸಾಟದಲ್ಲಿ 3-1ರ ಗೆಲುವಿನೊಂದಿಗೆ ಪ್ರಶಸ್ತಿ ಸುತ್ತಿಗೆ ಇಂಗ್ಲೆಂಡ್ ಪ್ರವೇಶಿಸಿದೆ. ಬ್ರಿಟನ್ ಮುಂದಿನ ಹಂತದಲ್ಲಿ ಬೆಲ್ಜಿಯಂ ತಂಡವನ್ನು ಎದುರಿಸಲಿದೆ. ಬೆಲ್ಜಿಯಂ ತಂಡ ತಮ್ಮ ಉಪಾಂತ್ಯದ ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧ 3-2ರಿಂದ ಗೆದ್ದು 111 ವರ್ಷಗಳ ನಂತರ ಪ್ರಶಸ್ತಿ ಸುತ್ತಿಗೆ ಕಾಲಿಟ್ಟಿದೆ.

ಭಾನುವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ರಿವರ್ಸ್ ಸಿಂಗಲ್ ಪಂದ್ಯದಲ್ಲಿ ಆ್ಯಂಡಿ ಮರ್ರೆ ತಮ್ಮ ಪ್ರತಿಸ್ಪರ್ಧಿಯನ್ನು 7--5, 6--3, 6--2 ಸೆಟ್‍ಗಳ ಅಂತರದಲ್ಲಿ ಜಯ ಸಾಧಿಸಿದ್ದು ಇಂಗ್ಲೆಂಡ್‍ನ ಈ ಐತಿಹಾಸಿಕ ಸಾಧನೆಗೆ ನೆರವಾಯಿತು. ಆ ಮೂಲಕ ಮರ್ರೆ 27 ಡೇವಿಸ್ ಕಪ್ ಸಿಂಗಲ್ಸ್ ಪಂದ್ಯಗಳಲ್ಲಿ 25ನೇ ಗೆಲುವು ದಾಖಲಿಸಿದರು.

SCROLL FOR NEXT