ರಿಯೋ ಡಿ ಜನೈರೋ: ರಿಯೋ ಒಲಿಂಪಿಕ್ಸ್ ನಲ್ಲಿ ಜಪಾನ್ ನ ಅಥ್ಲೀಟ್ ಹಿರೋಕಿ ಒಗಿಟಾಗೆ ಮರ್ಮಾಂಗದಿಂದಾಗಿ ಪುರುಷರ ಪೋಲ್ ವಾಲ್ಟ್ ಸ್ಪರ್ಧೆಯ ಫೈನಲ್ ಅವಕಾಶ ತಪ್ಪುವಂತಾಗಿದೆ.
ಎ ಗುಂಪಿನಿಂದ ಸ್ಪರ್ಧಿಸಿದ್ದ ಹಿರೋಕಿ 5.30 ಮೀಟರ್ ಎತ್ತರ ಹಾರಲು ಪ್ರಯತ್ನಿಸಿದ್ದರು. ಒಗಿಟಾ ಪೋಲ್ ವಾಲ್ಟ್ ಬಾರ್ ದಾಟಿ ನೆಲಕ್ಕೆ ಬಿಳುವಾಗ ಅವರ ಮೊಣಕಾಲು ಬಾರ್ ಗೆ ತಾಕಿದೆ. ಆಗಲೇ ಕೆಳಕ್ಕೆ ಬೀಳುವಂತಿದ್ದ ಬಾರ್ ಬಳಿಕ ಒಗಿಟಾ ಮರ್ಮಾಂಗ ತಾಕಿದ ಬಳಿಕ ನೆಲಕ್ಕುರುಳಿದ್ದು ಫೈನಲ್ ಪ್ರವೇಶಿಸಲು ವಿಫಲರಾಗಿದ್ದಾರೆ.
ಇದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗಿದೆ.