ನವದೆಹಲಿ: ಗಾಯದ ಸಮಸ್ಯೆಯಿಂದ ಒಲಿಂಪಿಕ್ಸ್ ನಿಂದ ಹೊರಬಿದ್ದ ಸೈನಾ ನೆಹ್ವಾಲ್ ರನ್ನು ಟ್ವಿಟರ್ ನಲ್ಲಿ ಕೆಣಕಿದ ಅಭಿಮಾನಿ ಸೈನಾ ಅವರ ಗಂಭೀರ ಪ್ರತಿಕ್ರಿಯೆ ಬಳಿಕ ಕ್ಷಮೆ ಯಾಚಿಸಿರುವ ಘಟನೆ ಇದೀಗ ವೈರಲ್ ಆಗಿದೆ.
ಒಲಿಂಪಿಕ್ಸ್ ಬ್ಯಾಡ್ಮಿಂಟನ್ ನಲ್ಲಿ ಭಾರತದ ಪಿವಿ ಸಿಂಧೂ ಫೈನಲ್ ಪ್ರವೇಶಿಸುತ್ತಿದ್ದಂತೆಯೇ ಸೈನಾ ನೆಹ್ವಾಲ್ ಗೆ ಟ್ವೀಟ್ ಮಾಡಿರುವ ವ್ಯಕ್ತಿ, "ನಿಮ್ಮ ಬ್ಯಾಗ್ ಪ್ಯಾಕ್ ಮಾಡಿಕೊಳ್ಳಿ. ವಿಶ್ವದ ಪ್ರಮುಖ ಆಟಗಾರರನ್ನು ಮಣಿಸಬಲ್ಲ ಸಾಮರ್ಥ್ಯವುಳ್ಳ ಪ್ರತಿಭೆ ಭಾರತಕ್ಕೆ ಸಿಕ್ಕಿದೆ" ಎಂದು ವ್ಯಂಗ್ಯ ಮಾಡಿ ಟ್ವೀಟ್ ಮಾಡಿದ್ದ. ಇದಕ್ಕೆ ಗಂಭೀರವಾಗಿ ಪ್ರತಿಕ್ರಿಯಿಸಿದ್ದ ಸೈನಾ "ಖಂಡಿತ ಥ್ಯಾಂಕ್ಯೂ....ಸಿಂಧೂ ತುಂಬಾ ಚೆನ್ನಾಗಿ ಆಡಿದಳು. ಬ್ಯಾಡ್ಮಿಂಟನ್ ನಲ್ಲಿ ಭಾರತ ಉತ್ತಮವಾಗಿ ಆಡಿದೆ" ಎಂದು ಉತ್ತರ ನೀಡಿದರು.
ಸೈನಾ ನೀಡಿದ ಗಂಭೀರ ಉತ್ತರದಿಂದ ಮುಜುಗರಕ್ಕೊಳಗಾದ ಆ ವ್ಯಕ್ತಿ ಬಳಿಕ ಮತ್ತೆ ಟ್ವೀಟ್ ಮಾಡಿ, ನಿಮ್ಮನ್ನು ನೋಯಿಸುವ ಉದ್ದೇಶದಿಂದ ನಾನು ಆ ಟ್ವೀಟ್ ಮಾಡಲಿಲ್ಲ. ನಿಮಗೆ ನೋವಾಗಿದ್ದರೆ ನನ್ನನ್ನು ಕ್ಷಮಿಸಿ..ಆದರೆ ನಾನು ನಿಮ್ಮ ದೊಡ್ಡ ಅಭಿಮಾನಿ..ಇಂದಿಗೂ ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾನೆ. ಇದಕ್ಕೆ ಮರು ಉತ್ತರ ನೀಡಿರುವ ಸೈನಾ ಆತನಿಗೆ ಶುಭ ಕೋರಿದ್ದಾರೆ.
ವಿಶ್ವ ರ್ಯಾಂಕಿಂಗ್ ನಲ್ಲಿ ಐದನೇ ಸ್ಥಾನದಲ್ಲಿರುವ ಸೈನಾ ನೆಹ್ವಾಲ್ ಗ್ರೂಪ್ ಲೀಗ್ ಹಂತದ ಎರಡನೇ ಪಂದ್ಯದಲ್ಲಿ ಮೊಣಕಾಲು ಗಾಯದಿಂದಾಗಿ 18-21, 19-21 ಸೋಲುಕಂಡು ಟೂರ್ನಿಯಿಂದ ಹೊರಬಿದ್ದಿದ್ದರು. ಇಂದು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಸೈನಾ ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ.
ಸೈನಾ ಮತ್ತು ಅಭಿಮಾನಿಯ ಟ್ವೀಟ್ ಸರಣಿ ಹೀಗಿದೆ...
Sure thank u