ರವೀಂದ್ರ ಜಡೇಜಾ ಮತ್ತು ರೀವಾ ಸೊಲಂಕಿ (ಸಂಗ್ರಹ ಚಿತ್ರ) 
ಕ್ರೀಡೆ

ಸರ್ ಜಡೇಜಾ ಸೆಕೆಂಡ್ ಇನ್ನಿಂಗ್ಸ್; ನಾಳೆ ವಿವಾಹ ನಿಶ್ಚಿತಾರ್ಥ

ಟೀಂ ಇಂಡಿಯಾದಲ್ಲಿ ಜಡ್ಡು ಎಂದೇ ಖ್ಯಾತರಾಗಿರುವ ರವೀಂದ್ರ ಜಡೇಜಾ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದು, ನಾಳೆ ಅವರ ಸ್ವಗೃಹದಲ್ಲಿ ನಿಶ್ಚಿತಾರ್ಥ ನಡೆಯಲಿದೆ ಎಂದು ತಿಳಿದುಬಂದಿದೆ...

ನವದೆಹಲಿ: ಟೀಂ ಇಂಡಿಯಾದಲ್ಲಿ ಜಡ್ಡು ಎಂದೇ ಖ್ಯಾತರಾಗಿರುವ ರವೀಂದ್ರ ಜಡೇಜಾ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದು, ನಾಳೆ ಅವರ ಸ್ವಗೃಹದಲ್ಲಿ ನಿಶ್ಚಿತಾರ್ಥ ನಡೆಯಲಿದೆ ಎಂದು  ತಿಳಿದುಬಂದಿದೆ.

ಜಡೇಜಾ ಅವರ ಬಹುಕಾಲದ ಗೆಳತಿ ರಿವಾ ಸೊಲಂಕಿ ಅವರನ್ನು ವರಿಸುತ್ತಿದ್ದು, ನಾಳೆ ರಾಜ್ ಕೋಟ್ ನಲ್ಲಿರುವ ಅವರ ಮನೆಯಲ್ಲಿ ವಿವಾಹ ನಿಸ್ಚಿತಾರ್ಥ ಕಾರ್ಯಕ್ರಮ ನಡೆಯಲಿದೆ.  ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿರುವ ರಿವಾ ಸೋಲಂಕಿ, ಪ್ರಸ್ತುತ ಯುಪಿಎಸ್ ಸಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ರಿವಾ ಅವರ ತಾಯಿ ಕೇಂದ್ರ ರೈಲ್ವೇ  ಇಲಾಖೆಯ ಉದ್ಯೋಗಿಯಾಗಿದ್ದು, ರಿವಾ ಅವರ ತಂದೆ ಉಧ್ಯಮಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ ಕೋಟ್ ನಲ್ಲಿರುವ ರವೀಂದ್ರ ಜಡೇಜಾ ಕುಟುಂಬದ ಒಡೆತನವಿರುವ ರೆಸ್ಟೋರೆಂಟ್ ನಲ್ಲಿ ವಿವಾಹ ನಿಶ್ಚಿತಾರ್ಥ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಕಳೆದ  ಸೋಮವಾರವಷ್ಟೇ ಭಾರತದ ಆಟಗಾರ ವರುಣ್ ಆ್ಯರೋನ್ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ತಮ್ಮ ಬಾಲ್ಯಗೆಳತಿ ರಾಗಿಣಿ ಅವರನ್ನು ಆ್ಯರೋನ್ ಜೆಮ್ ಶೆಡ್ ಪುರದಲ್ಲಿ  ವಿವಾಹವಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿ ಕ್ಷಮೆ ಬೇಕಿಲ್ಲ: ರಾಹುಲ್ ಗಾಂಧಿ

ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ!

ಅಯೋಧ್ಯೆಯ ರಾಜರ್ಷಿ ದಶರಥ್ ವೈದ್ಯಕೀಯ ಕಾಲೇಜ್ ನಲ್ಲಿ ಬಾಂಬ್ ತಯಾರಿಕೆ ಕಾಗದ ಪತ್ತೆ; ವಿದ್ಯಾರ್ಥಿ ಬಂಧನ

Commonwealth Games 2026: ಬಾಕ್ಸಿಂಗ್ ನಲ್ಲಿ ಚಿನ್ನ ಗೆದ್ದ ಸಾಕ್ಷಿ, ಪ್ರಿಯಾ

ಪ್ರಧಾನಿ ಮೋದಿಯನ್ನು ನಿಂದಿಸಿದ 15 ವರ್ಷದ ಹುಡುಗಿ ಹಿಂದೆ 'ಆ ಎರಡು ಗುಂಪುಗಳಿವೆ': ಕಂಗನಾ ಹೊಸ ಬಾಂಬ್!