ರಣಜಿ ಚಾಂಪಿಯನ್ ಮುಂಬೈ ತಂಡ (ಚಿತ್ರಕೃಪೆ: ಕ್ರಿಕ್ ಇನ್ಫೋ) 
ಕ್ರೀಡೆ

41ನೇ ಬಾರಿಗೆ ಮುಂಬೈಗೆ ರಣಜಿ ಕಿರೀಟ

ರಣಜಿ ಕ್ರಿಕೆಟ್ ನ ಅನಭಿಷಕ್ತ ದೊರೆ ಎನಿಸಿಕೊಂಡಿರುವ ಮುಂಬೈ ಪ್ರಸಕ್ತ ಸಾಲಿನ ರಣಜಿ ಫೈನಲ್ ನಲ್ಲಿ ಸೌರಾಷ್ಟ್ರ ತಂಡವನ್ನು ಮಣಿಸಿ, 41ನೇ ಬಾರಿಗೆ ರಣಜಿ ಟ್ರೋಫಿಯನ್ನು ಎತ್ತಿ ಹಿಡಿದಿದೆ...

ಪುಣೆ: ರಣಜಿ ಕ್ರಿಕೆಟ್ ನ ಅನಭಿಷಕ್ತ ದೊರೆ ಎನಿಸಿಕೊಂಡಿರುವ ಮುಂಬೈ ಪ್ರಸಕ್ತ ಸಾಲಿನ ರಣಜಿ ಫೈನಲ್ ನಲ್ಲಿ ಸೌರಾಷ್ಟ್ರ ತಂಡವನ್ನು ಮಣಿಸಿ, 41ನೇ ಬಾರಿಗೆ ರಣಜಿ ಟ್ರೋಫಿಯನ್ನು ಎತ್ತಿ  ಹಿಡಿದಿದೆ.

ಪುಣೆ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ಸೌರಾಷ್ಟ್ರ ತಂಡದ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಮುಂಬೈ ತಂಡ ಇನ್ನಿಂಗ್ಸ್ ಮತ್ತು 21 ರನ್ ಗಳ ಅಂತರದಿಂದ  ಭರ್ಜರಿಯಾಗಿ ಜಯಿಸಿದೆ. ಆ ಮೂಲಕ 41ನೇ ಬಾರಿಗೆ ರಣಜಿ ಟ್ರೋಫಿಗೆ ಮುತ್ತಿಟ್ಟಿದೆ.

ಗುರುವಾರ 2ನೇದಾಟದಂತ್ಯಕ್ಕೆ 8 ವಿಕೆಟ್ ಕಳೆದುಕೊಂಡಿದ್ದ ಮುಂಬೈ ತಂಡ ಶುಕ್ರವಾರ 3ನೇ ದಿನದಾಟ ಮುಂದುವರೆಸಿತು. ಮುಂಬೈ ತಂಡದ ಅಂತಿಮ ಆಟಗಾರರು ನೀಡಿದ ರನ್ ಗಳ  ಕಾಣಿಕೆಯಿಂದಾಗಿ ಮುಂಬೈ ತಂಡ 371ರನ್​ಗೆ ಮೊದಲ ಇನಿಂಗ್ಸ್ ಮುಗಿಸಿ ಸೌರಾಷ್ಟ್ರ ವಿರುದ್ಧ 136 ರನ್​ಗಳ ಅಮೂಲ್ಯ ಮುನ್ನಡೆ ಸಾಧಿಸಿತು. ಇದಕ್ಕೆ ಪ್ರತಿಯಾಗಿ 2ನೇ ಇನಿಂಗ್ಸ್ ಆರಂಭಿಸಿದ  ಸೌರಾಷ್ಟ್ರ ತಂಡ ಮುಂಬೈ ವೇಗಿಗಳಾದ ಶಾರ್ದೂಲ್ ಠಾಕೂರ್, ಧವಳ್ ಕುಲಕರ್ಣಿ ಮತ್ತು ಬಲ್ವಿಂದರ್ ಸಂಧು ಅವರ ಮಾರಕ ದಾಳಿಗೆ ತತ್ತರಿಸಿ ಕೇವಲ 115ರನ್​ಗೆ ತನ್ನೆಲ್ಲಾ ವಿಕೆಟ್  ಕಳೆದುಕೊಳ್ಳುವ ಮೂಲಕ ಮುಂಬೈಗೆ ಇನ್ನಿಂಗ್ಸ್ ಮತ್ತು 21 ರನ್ ಗಳ ಅಂತರದಲ್ಲಿ ಶರಣಾಯಿತು.

ಅಲ್ಲದೆ ಮೊದಲ ಬಾರಿಗೆ ರಣಜಿ ಫೈನಲ್ ತಲುಪಿ ಟ್ರೋಫಿ ಎತ್ತಿಹಿಡಿಯುವ ಸೌರಾಷ್ಟ್ರ ಕನಸು ಈ ಸೋಲಿನೊಂದಿಗೆ ನುಚ್ಚು ನೂರಾಯಿತು. ಮುಂಬೈ ಪರ ಮೊದಲ ಇನ್ನಿಂಗ್ಸ್ ಆಕರ್ಷಕ ಶತಕ  ಸಿಡಿಸಿದ ಶ್ರೇಯಸ್ ಅಯ್ಯರ್ ಅವರು ಪಂದ್ರಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಸಂಕ್ಷಿಪ್ತ ಸ್ಕೋರ್
ಸೌರಾಷ್ಟ್ರ ಮೊದಲ ಇನ್ನಿಂಗ್ಸ್: 235/10

ಎವಿ ವಾಸವಡ 77 ರನ್
ಪಿಎನ್ ಮಂಕಡ್ 66 ರನ್
ಉನಾದ್ಕತ್ 31 ರನ್

ಮುಂಬೈ ಬೌಲಿಂಗ್: ಧವಳ್ ಕುಲಕರ್ಣಿ 42ಕ್ಕೆ 5 ವಿಕೆಟ್, ಎಸ್ ಎನ್ ಠಾಕೂರ್ 89ಕ್ಕೆ 3 ವಿಕೆಟ್ ಮತ್ತು ಎಂ ನಾಯರ್ ಮತ್ತು ಬಿಎಸ್ ಸಂಧು ತಲಾ 1 ವಿಕೆಟ್

ಮುಂಬೈ ಮೊದಲ ಇನ್ನಿಂಗ್ಸ್: 371/10
ಎಸ್ ಎಸ್ ಅಯ್ಯರ್ 117 ರನ್
ಎಸ್ ಡಿ ಲಾಡ್ 88 ರನ್
ಎಸ್ ಎ ಯಾದವ್  44 ರನ್
ಬಿಎಸ್ ಸಂಧು 34 ರನ್

ಸೌರಾಷ್ಟ್ರ ಬೌಲಿಂಗ್: ಉನಾದ್ಕತ್ 118ಕ್ಕೆ 4 ವಿಕೆಟ್, ಹೆಚ್ ಆರ್ ರಾಥೋಡ್ 73ಕ್ಕೆ 3 ವಿಕೆಟ್, ಸಿಎಸ್ ಜಾನಿ 48ಕ್ಕೆ 2 ವಿಕೆಟ್ ಮತ್ತು ಡಿಎಸ್ ಪುನಿಯಾ 107ಕ್ಕೆ 1 ವಿಕೆಟ್

ಸೌರಾಷ್ಟ್ರ ಎರಡನೇ ಇನ್ನಿಂಗ್ಸ್: 115/10
ಸಿಎ ಪೂಜಾರ 27 ರನ್
ಜೆಎನ್ ಶಾ 17 ರನ್
ಉನಾದ್ಕತ್ 16 ರನ್

ಫಲಿತಾಂಶ: ಮುಂಬೈಗೆ ಇನ್ನಿಂಗ್ಸ್ ಮತ್ತು 21 ರನ್ ಗಳ ಜಯ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

IPL 2026: ಬರೊಬ್ಬರಿ 40 ಮಿಲಿಯನ್ ಫಾಲೋವರ್ಸ್ ಇದ್ದ Insta ಖಾತೆ ಡಿಲೀಟ್ ಮಾಡಿದ Hardik Pandya

SCROLL FOR NEXT