ಕ್ರೀಡೆ

ಡೋಪಿಂಗ್ ಟೆಸ್ಟ್ ನಲ್ಲಿ ರೆಸ್ಲರ್ ನರಸಿಂಗ್ ಯಾದವ್ ವಿಫಲ; ರಿಯೋ ಒಲಿಪಿಂಕ್ಸ್ ನಿಂದ ಹೊರಗೆ?

Srinivasamurthy VN

ನವದೆಹಲಿ: ಡೋಪಿಂಗ್ ಟೆಸ್ಟ್ ಭಾರತೀಯ ರೆಸ್ಲರ್ ನರಸಿಂಗ್ ಯಾದವ್ ವಿಫಲವಾದ ಹಿನ್ನಲೆಯಲ್ಲಿ ಮುಂಬರುವ ರಿಯೋ ಒಲಿಂಪಿಕ್ಸ್ ನಲ್ಲಿ ಆಡುವ ಅವಕಾಶದಿಂದ ವಂಚಿತರಾಗಲಿದ್ದಾರೆ  ಎಂದು ಹೇಳಲಾಗುತ್ತಿದೆ.

ಶನಿವಾರ ರಾಷ್ಟ್ರೀಯ ಮಾದಕ ವಸ್ತು ತಡೆ ಘಟಕ ನಾಡಾ ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ರೆಸ್ಲರ್ ನರಸಿಂಗ್ ಯಾದವ್ ನಿಷೇಧಿತ ಮಾದಕವಸ್ತು ಸೇವಿಸಿರುವ ಕುರಿತು ವರದಿ ಬಂದಿದ್ದು,  ಇದರ ಆಧಾರದ ಮೇಲೆ ಅವರನ್ನು ರಿಯೋ ಒಲಿಂಪಿಕ್ಸ್ ಕ್ರೀಡಾಕೂಟದಿಂದ ನಿಷೇಧ ಹೇರುವ ಸಾಧ್ಯತೆಗಳಿ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ನರಸಿಂಗ್ ಯಾದವ್ ಅವರ ನಿಷೇಧಿತ  ಸ್ಟಿರಾಯ್ಡ್ ತೆಗೆದುಕೊಂಡಿರುವ ಕುರಿತು ವೈದ್ಯರು ಸ್ಪಷ್ಟಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಹಿನ್ನಲೆಯಲ್ಲಿ ಅವರನ್ನು ರಿಯೋ ಒಲಿಂಪಿಕ್ಸ್ ಗೆ ಆಯ್ಕೆ ಮಾಡಬಾರದು ಎಂಬ ವರದಿ ಕೂಡ ಕ್ರೀಡಾ ಸಚಿವಾಲಯಕ್ಕೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ. ಕಳೆದ ಜುಲೈ 5ರಂದು ರೆಸ್ಲರ್  ನರಸಿಂಗ್ ಯಾದವ್ ಅವರಿಂದ ರಕ್ತದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ಅದರ ವರದಿ ಬಂದಿದೆ. ಇದೀಗ ಅವರು ನಿಷೇಧಿತ ವಸ್ತು ತೆಗೆದುಕೊಂಡಿರುವ  ಹಿನ್ನಲೆಯಲ್ಲಿ ಕ್ರೀಡಾ ಸಚಿವಾಲದ ಶಿಸ್ತು ಸಮಿತಿ ಮುಂದೆ ಹಾಜರಾಗಿ ಈ ಬಗ್ಗೆ ಸ್ಪಷ್ಟನೆ ನೀಡಬೇಕಿದೆ. ಅಲ್ಲದೆ ಮಾದಕ ವಸ್ತು ತಡೆ ಘಟಕ ನಡೆಸುವ ತನಿಖೆ ಎದುರಿಸಬೇಕಿದೆ.

74 ಕೆಜಿ ವಿಭಾಗದ ಭಾರತದ ಫ್ರೀಸ್ಟೈಲ್ ರೆಸ್ಲರ್ ಆಗಿರುವ ನರಸಿಂಗ್ ಯಾದವ್ ಈ ಹಿಂದೆ ಬಹುತೇಕ ರಿಯೋ ಒಲಿಂಪಿಕ್ಸ್ ಗೆ ಆಯ್ಕೆಯಾಗಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಇದೀಗ  ಡೋಪಿಂಗ್ ಟೆಸ್ಟ್ ನಲ್ಲಿ ಅವರು ಸಿಕ್ಕಿಬಿದ್ದಿರುವ ಹಿನ್ನಲೆಯಲ್ಲಿ ಅವರ ವೃತ್ತಿ ಬದುಕೇ ಡೋಲಾಯಮಾನ ಸ್ಥಿತಿಯಲ್ಲಿರುವಂತಾಗಿದೆ.

SCROLL FOR NEXT