ಡಬ್ಲ್ಯೂಡಬ್ಲ್ಯೂಇ ರೆಸ್ಲರ್ ಬ್ರೌನ್ ಸ್ಟ್ರೋಮನ್ ಸೋಮವಾರ ನಡೆದ ಸ್ಮಾಕ್ ಡೌನ್ ವೇಳೆ ರೋಮನ್ ರಿಗನ್ಸ್ ರನ್ನು ಮನಬಂದಂತೆ ಥಳಿಸಿದ ಘಟನೆ ನಡೆದಿದೆ.
ರೋಮನ್ ರಿಗನ್ಸ್ ರ ಸಂದರ್ಶನ ನಡೆಯುತ್ತಿದ್ದಾಗ ಅಲ್ಲಿಗೆ ಬಂದ ಬ್ರೌನ್ ಸ್ಟ್ರೋಮನ್ ರೋಮನ್ ರಿಗನ್ಸ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ರೆಸ್ಲಿಂಗ್ ಸ್ಟೇಜ್ ಮೇಲೆ ಫೈಟ್ ಮಾಡಿದ್ದಂತೆ ಬ್ರೌನ್ ರೋಮನ್ ರನ್ನು ಬಾಕ್ಸ್, ಊಟದ ಟೇಬಲ್ ಮತ್ತ ನೆಲದ ಮೇಲೆ ಎತ್ತಿ ಎಸೆದಿದ್ದಾರೆ. ಇದರಿಂದ ರೋಮನ್ ರಿಗನ್ಸ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಇನ್ನು ಅಲ್ಲಿಗೆ ಬಂದ ಅಂಪೈರ್ ಮತ್ತು ಸಿಬ್ಬಂದಿ ಬ್ರೌನ್ ತಡೆಯಲು ಮುಂದಾದರು ಆದರೆ ಅವರಿಂದಲು ಅದು ಸಾಧ್ಯವಾಗಿಲ್ಲ. ಕೊನೆಗೆ ಗಂಭೀರವಾಗಿ ಗಾಯಗೊಂಡಿದ್ದ ರೋಮನ್ ರನ್ನು ಸ್ಟ್ರೇಚರ್ ಮೇಲೆ ಮಲಗಿಸಿದ್ದಾಗ ಮತ್ತೆ ಅಲ್ಲಿಗೆ ಬಂದ ಬ್ರೌನ್ ಎಲ್ಲರನ್ನು ತಳ್ಳಿ ಸ್ಟ್ರೇಚರ್ ಅನ್ನು 5 ಅಡಿ ಕೆಳಕ್ಕೆ ತಳ್ಳಿದರು. ನಂತರ ಸಿಬ್ಬಂದಿಗಳು ರೋಮನ್ ರಿದ್ದ ಸ್ಟ್ರೇಚರ್ ಅನ್ನು ಆ್ಯಂಬುಲೆನ್ಸ್ ಹೋಳಗೆ ತಂದಿದ್ದಾರೆ. ಅಲ್ಲೂ ಬಿಡದ ಬ್ರೌನ್ ಆ್ಯಂಬುಲೆನ್ಸ್ ಅನ್ನೇ ಪಲ್ಟಿ ಮಾಡಿ ತಮ್ಮ ಕೋಪವನ್ನು ತೀರಿಸಿಕೊಂಡಿದ್ದಾರೆ.
ಬ್ರೌನ್ ಅಲ್ಲಿಂದ ತೆರಳಿದ ನಂತರ ರೋಮನ್ ರಿಗನ್ಸ್ ರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.