ಬೆಳ್ಳಿ ಪದಕ ಗೆದ್ದ ದೀಪಕ್ ಲಾಥರ್
ಗೋಲ್ಡ್ ಕೋಸ್ಟ್: ಕಾಮನ್ ವೆಲ್ತ್ ಕ್ರೀಡಾಕೂಟದ 2ನೇ ದಿನ ಮತ್ತೆ ವೇಟ್ ಲಿಫ್ಟಿಂಗ್ ನಲ್ಲಿ ಭಾರತಕ್ಕೆ ಮತ್ತೊಂದು ಪದಕ ದೊರೆತಿದ್ದು, ಪುರುಷರ 69 ಕೆಜಿ ವಿಭಾಗದಲ್ಲಿ ದೀಪಕ್ ಲಾಥರ್ 3ನೇ ಸ್ಥಾನ ಗಳಿಸುವ ಮೂಲಕ ಕಂಚಿನ ಪದಕಕ್ಕೆ ಭಾಜನರಾಗಿದ್ದಾರೆ.
ಕೇವಲ 19 ವರ್ಷದ ದೀಪಕ್ ಲಾಥರ್ ಇದು ಪ್ರಪ್ರಥಮ ಅಂದರೆ ಪದಾರ್ಪಣೆ ಕಾಮನ್ ವೆಲ್ತ್ ಕ್ರೀಡಾಕೂಟ ವಾಗಿದ್ದು, ತಮ್ಮ ಮೊದಲ ಪ್ರಯತ್ನದಲ್ಲೇ ದೀಪಕ್ ಕಂಚಿನ ಪದಕ ಗಿಟ್ಟಿಸಿಕೊಂಡಿದ್ದಾರೆ. ಅಂತಿಮ ಪಂದ್ಯದಲ್ಲಿ ದೀಪಕ್ ಒಟ್ಟು 295 ಕೆಜಿ ತೂಕ ಎತ್ತುವ ಮೂಲಕ ಮೂರನೇ ಸ್ಥಾನ ಗಿಟ್ಟಿಸಿದ್ದಾರೆ. ಆ ಮೂಲಕ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಪದಕ ಗಳಿಸಿದ ಭಾರತ ಅತ್ಯಂತ ಕಿರಿಯ ವಯಸ್ಸಿನ ಕ್ರೀಡಾಪಟು ಎಂಬ ಖ್ಯಾತಿಗೂ ದೀಪಕ್ ಲಾಥರ್ ಪಾತ್ರರಾಗಿದ್ದಾರೆ.
ಹಲವು ದಾಖಲೆಗಳ ವೀರ ಈ ದೀಪಕ್ ಲಾಥರ್
ಕಾಮನ್ ವೆಲ್ತ್ ಕ್ರೀಡಾಕೂಟಕ್ಕೂ ಮುನ್ನ ದೀಪಕ್ ಲಾಥರ್ ಹಲವು ದೇಶೀಯ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದರು. 2000ರಲ್ಲಿ ನಡೆದ ರಾಷ್ಟ್ರೀಯ ಸ್ಪರ್ಧೆಯಲ್ಲಿ ತಮ್ಮ15ನೇ ವಯಸ್ಸಿನಲ್ಲೇ ಅತೀ ಹೆಚ್ಚು ಭಾರ ಎತ್ತಿದ ಕೀರ್ತಿಗೂ ದೀಪಕ್ ಲಾಥರ್ ಪಾತ್ರರಾಗಿದ್ದರು.