ಕ್ರೀಡೆ

ಟೆನ್ನಿಸ್: ರೋಜರ್ ಫೆಡರರ್ ಮತ್ತೆ ವಿಶ್ವ ನಂ.1; ಅತ್ಯಂತ ಹಿರಿಯ ಆಟಗಾರ

Nagaraja AB

ರೊಟ್ಟರ್ ಡ್ಯಾಮ್ :  ಇಲ್ಲಿ ನಡೆದ ಎಬಿನ್ ಅಮ್ರೋ ವಿಶ್ವ ಟೆನ್ನಿಸ್ ಟೂರ್ನಮೆಂಟ್ ನ ಪುರುಷರ ಸಿಂಗಲ್ಸ್ ನ ಕ್ವಾರ್ಟರ್ ಫೈನಲ್ ನಲ್ಲಿ ನೆದರ್ ಲ್ಯಾಂಡ್ ನ ರಾಬಿನ್ ಹಾಸೆ ವಿರುದ್ಧ ಗೆಲುವು ಸಾಧಿಸಿದ ರೋಜರ್ ಫೆಡರರ್  20 ನೇ ಬಾರಿಗೆ ಗ್ರಾಂಡ್ ಸ್ಲಾಮ್ ಗೆದ್ದ ಕೀರ್ತಿಗೆ ಪಾತ್ರರಾದರು.

36 ವರ್ಷದ ರೋಜರ್ ಫೆಡರರ್ ನೆದರ್ ಲ್ಯಾಂಡ್ ನ ರಾಬಿನ್ ಹಾಸೆ ವಿರುದ್ಧ 4-6, 6-1. 6-1 ನೇರ ಸೆಟ್ ಗಳಿಂದ ಜಯಗಳಿಸುವ ಮೂಲಕ  ರಾಫೆಲ್ ನಡಾಲ್ ಅವರನ್ನು ಹಿಂದಿಕ್ಕಿ ಮತ್ತೆ ವಿಶ್ವ ನಂ.1 ಆಟಗಾರ ಎನ್ನಿಸಿಕೊಂಡರು.

ಅಭಿಮಾನಿಗಳ ಹರ್ಷೋಧ್ಗಾರಗಳ ಮಧ್ಯೆ ಉತ್ತಮ ಆಟ ಪ್ರದರ್ಶಿಸಿದ ರೋಜರ್ ಫೆಡರರ್ 79 ನಿಮಿಷಗಳ ಆಟದಲ್ಲಿ 6 ಅಂಕಗಳಿಂದ ಜಯಗಳಿಸಿದರು. ಹಾಸಿ ನಿರಾಶೆಯೊಂದಿಗೆ ತಮ್ಮ ಹೋರಾಟ ಅಂತ್ಯಗೊಳಿಸಿದರು.

2004ರಲ್ಲಿ ಮೊದಲ ಬಾರಿಗೆ ವಿಶ್ವ ನಂ1 ಸ್ಥಾನಕ್ಕೇರಿದ ರೋಜರ್ ಫೆಡರರ್ 2012ರಿಂದ  ಆ ಸ್ಥಾನದಿಂದ ಹಿಂದೆ ಸರಿದಿದ್ದರು. ಕಠಿಣ ಶ್ರಮದಿಂದ ಗೆಲುವು ಸಾಧಿಸಬಹುದಾಗಿದ್ದು, ತನ್ನ ಕನಸು ನಿಜವಾಗಿದೆ ಎಂದು ರೋಜರ್ ಫೆಡರರ್ ಹೇಳಿದ್ದಾರೆ.

ಕಳೆದ ವರ್ಷವ ಮೊಣಕಾಲು ಶಸ್ತ್ರಚಿಕಿತ್ಸೆಕ್ಕೊಳಗಾಗಿದ್ದ ರೋಜರ್ ಫೆಡರರ್ ಮತ್ತೆ ವಿಶ್ವನಂ1 ಸ್ಥಾನಕ್ಕೇರಲು ಹಲವು ದಿನಗಳಿಂದ ಶ್ರಮಿಸುತ್ತಿದ್ದರು. ಕಳೆದ ವರ್ಷ ಹಲವು ಪ್ರಶಸ್ತಿ ಗೆದ್ದಿದ್ದರೂ ವಿಶ್ವ ನಂ1 ಸ್ಥಾನಕ್ಕೇರಲು ಸಾಧ್ಯವಾಗಿರಲಿಲ್ಲ. ಆದರೆ, ಇದೀಗ ಅದು ಸಾಧ್ಯವಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.



SCROLL FOR NEXT