ಭಾರತದ ತಂಡ 
ಕ್ರೀಡೆ

ಸುಲ್ತಾನ್‌ ಅಜ್ಲಾನ್‌ ಶಾ ಕಪ್‌: ಐರ್ಲೆಂಡ್ ವಿರುದ್ಧ ಗೆದ್ದ ಭಾರತ, 5ನೇ ಸ್ಥಾನಕ್ಕೆ ತೃಪ್ತಿ

ಮಲೇಷಿಯಾದಲ್ಲಿ ನಡೆದ ಸುಲ್ತಾನ್‌ ಅಜ್ಲಾನ್‌ ಶಾ ಕಪ್‌ ಹಾಕಿ ಪಂದ್ಯಾವಳಿಯಲ್ಲಿ ಶನಿವಾರ ಐರ್ಲೆಂಡ್ ....

ಇಪೊಹ್: ಮಲೇಷಿಯಾದಲ್ಲಿ ನಡೆದ ಸುಲ್ತಾನ್‌ ಅಜ್ಲಾನ್‌ ಶಾ ಕಪ್‌ ಹಾಕಿ ಪಂದ್ಯಾವಳಿಯಲ್ಲಿ ಶನಿವಾರ ಐರ್ಲೆಂಡ್ ವಿರುದ್ಧ ಗೆಲುವು ಸಾಧಿಸಿದ ಭಾರತ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಇಂದು ಮತ್ತದೇ ಐರ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಭಾರತದ ಸರ್ದಾರ್ ಸಿಂಗ್ ಬಳಗ ಅಮೋಘ ಪ್ರದರ್ಶನ ನೀಡುವ ಮೂಲಕ  4-1ರ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿತು. ಇದರೊಂದಿಗೆ ಶುಕ್ರವಾರದಂದು ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಎದುರಾದ ಸೋಲಿಗೆ ಸೇಡು ತೀರಿಸಿಕೊಂಡಿತ್ತು. 
ಲೀಗ್ ಹಂತದಲ್ಲಿ ಐರ್ಲೆಂಡ್ ವಿರುದ್ಧ 3-2ರ ಅಂತರದ ಸೋಲಿಗೊಳಗಾಗಿದ್ದ ಭಾರತದ ಫೈನಲ್ ಕನಸು ಭಗ್ನವಾಗಿತ್ತು.
ಭಾರತದ ಪರ ವರುಣ್ ಕುಮಾರ್ (5ನೇ ನಿಮಿಷ ಹಾಗೂ 32ನೇ ನಿಮಿಷ), ಶಿಲಾನಂದ್ ಲಾಕ್ರಾ (27ನೇ ನಿಮಿಷ) ಹಾಗೂ ಗುರ್ಜಾಂಟ್ (37ನೇ ನಿಮಿಷ) ಗೆಲುವಿನ ಗೋಲುಗಳನ್ನು ದಾಖಲಿಸಿದರು. ಅತ್ತ ಐರ್ಲೆಂಡ್ 48ನೇ ನಿಮಿಷದಲ್ಲಿ ಗೋಲು ದಾಖಲಿಸಿದ ಜೂಲಿಯನ್ ಡೇಲ್ ಸೋಲಿನ ಅಂತರವನ್ನು ತಗ್ಗಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭೋಜಶಾಲಾ ಸರಸ್ವತಿ ದೇವಸ್ಥಾನಕ್ಕೆ ಸೇರಿದ್ದು; ಮಸೀದಿಗೆ ಪರ್ಯಾಯ ಭೂಮಿ: ಮಧ್ಯಪ್ರದೇಶ ಹೈಕೋರ್ಟ್ ಮಹತ್ವದ ತೀರ್ಪು

ಕೊಪ್ಪಳ: ತುಂಗಭದ್ರಾ ಸೇತುವೆ ಮೇಲಿಂದ ಕೆಳಗೆ ಬಿದ್ದ ಟ್ರ್ಯಾಕ್ಟರ್, ಒಂದೇ ಕುಟುಂಬದ ಆರು ಮಂದಿ ದುರ್ಮರಣ!

ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ವಿರುದ್ಧ FIR ದಾಖಲು; ಇಲ್ಲಿದೆ ಕಾರಣ

ಕರ್ನಾಟಕದಲ್ಲಿ ಜೂನ್ 20 ರಿಂದ SIR ಪ್ರಾರಂಭ: ಅಕ್ಟೋಬರ್ 7ಕ್ಕೆ ಅಂತಿಮ ಪಟ್ಟಿ ಪ್ರಕಟ! ಹೇಗೆ ಮಾಡಲಾಗುತ್ತದೆ?

ಮಧ್ಯ ಪ್ರಾಚ್ಯ ಸಂಘರ್ಷ: ಪಾಕಿಸ್ತಾನದ ಸಂಧಾನ ಪ್ರಕ್ರಿಯೆ ವಿಫಲವಾಗಿಲ್ಲ, ಆದರೆ..: ಇರಾನ್ ವಿದೇಶಾಂಗ ಸಚಿವ Araghchi

SCROLL FOR NEXT