ಶೋಯಬ್ ಮಲಿಕ್-ಸಾನಿಯಾ ಮಿರ್ಜಾ
ಮುಂಬೈ: ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ಗರ್ಭಿಣಿಯಾಗಿರುವ ವಿಷಯ ತಿಳಿದಾಗಿನಿಂದ ಹಲವು ಪುರುಷರು ಟ್ವೀಟರ್ ನಲ್ಲಿ ಗರ್ಭಿಣಿಯರು ಹೇಗಿರಬೇಕು ಅಂತ ಉಚಿತ ಸಲಹೆ ನೀಡುತ್ತಿದ್ದು ಇದಕ್ಕೆ ಸಾನಿಯಾ ಖಡಕ್ ತಿರುಗೇಟು ನೀಡಿದ್ದಾರೆ.
ಕೆಲ ಪುರುಷರು ಸಾನಿಯಾಗೆ ಗರ್ಭಾವಸ್ಥೆಯಲ್ಲಿ ಆಗುವ ತೊಂದರೆಗಳ ಬಗ್ಗೆ ಹೆಚ್ಚಾಗಿ ಹೇಳಿದ್ದಾರೆ. ಇದರಿಂದ ಕೋಪಗೊಂಡ ಸಾನಿಯಾ ಅವರಿಗೆಲ್ಲ ಖಡಕ್ ಟ್ವೀಟ್ ಮಾಡಿ ತಿರುಗೇಟು ನೀಡಿದ್ದಾರೆ.
ನನಗೆ ಉಚಿತ ಸಲಹೆ ನೀಡಿದ ಪುರುಷರಿಗೆ ಒಂದು ಮಾತನ್ನು ಹೇಳಲು ಬಯಸುತ್ತೇನೆ. ಇವರೆಲ್ಲ ಗರ್ಭಾವಸ್ಥೆಯೆಂದರೆ 9 ತಿಂಗಳು ಕಾಲ ಸುಮ್ಮನೆ ಹೊದ್ದು ಮಲಗಿರುವುದು, ಮನೆಯಲ್ಲೇ ಕುಳಿತಿರುವುದು ಹಾಗೇ ಅದೊಂದು ಸಂಕೋಚ ತರುವ ಸಮಯ ಎಂದು ಭಾವಿಸಿರುವಂತಿದೆ ಎಂದು ಒಂದು ಟ್ವೀಟ್ ಮಾಡಿದ್ದಾರೆ.
ಇನ್ನೊಂದು ಟ್ವೀಟ್ ನಲ್ಲಿ ಸಾನಿಯಾ, ಗರ್ಭಿಣಿಯರೆಂದರೆ ರೋಗಗ್ರಸ್ಥರಲ್ಲ. ಅವರು ಅಸ್ಪೃಶ್ಯರೂ ಅಲ್ಲ. ಅವರೂ ಸಹ ಸಹಜವಾಗಿಯೇ ಇರುತ್ತಾರೆ. ನೀವೆಲ್ಲರೂ ಕೂಡ ನಿಮ್ಮ ತಾಯಿಯ ಗರ್ಭದಿಂದಲೇ ಬಂದಿದ್ದೀರಿ ಎಂದು ಪೋಸ್ಟ್ ಮಾಡಿದ್ದಾರೆ.