ಕ್ರೀಡೆ

ಜಪಾನ್ ಓಪನ್: ಒಲಂಪಿಕ್ ಪದಕ ವಿಜೇತ ಮಲೇಷಿಯಾ ಜೋಡಿ ಮಣಿಸಿ ಮನು-ಸುಮೆತ್ ಕ್ವಾರ್ಟರ್ ಪ್ರವೇಶ

Raghavendra Adiga
ಟೋಕಿಯೋ: ಪ್ರತಿಷ್ಠಿತ ಜಪಾನ್ ಓಪನ್ ಬ್ಯಾಡ್ಮಿಂಟನ್ ಶಿಪ್ ಪಂದ್ಯಾವಳಿಯಲ್ಲಿ ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ಮನು ಅತ್ರಿ ಮತ್ತು ಬಿ. ಸುಮೀತ್ ರೆಡ್ಡಿ ಮಲೇಷಿಯಾ ಒಲಂಪಿಕ್ ಪದಕ ವಿಜೇತ ಜೊಡಿಗೋಹ್ ವಿ ಶೆಮ್ ಹಾಗು ತಾನ್ ವೀ ಕಿಯಾಂಗ್ ಅವರುಗಳನ್ನು ಮಣಿಸಿ ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದ್ದಾರೆ.
ಈ ಹಿಂದೆ 2015 ರಲ್ಲಿ ಸಯ್ಯದ್ ಮೋದಿ ಗ್ರಾಂಡ್ ಪ್ರಿಕ್ಸ್ ಗೋಲ್ಡ್ ಸರಣಿಯಲ್ಲಿ ಮಲೇಷಿಯಾ ಜೋಡಿಯನ್ನು ಪರಾಭವಗೊಳಿಸಿದ್ದ ಮನು-ಸುಮೀತ್ ಜೋಡಿಯುಯ್ ಈ ಬಾರಿ ವಿಶ್ವ ನಂ.10ನೇ ಶ್ರೇಯಾಂಕದ ಮಲೇಷಿಯಾ ಜೋಡಿಯನ್ನು 15-21 23-21 21-19  ಅಂತರದಲ್ಲಿ ಪರಾಭವಗೊಳಿಸಿದ್ದರು. 
ಒಟ್ಟು 54 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಭಾರತೀಯ ಜೋಡಿ ಜಯಗಳಿಸಿ ಹೊಸ ಭರವಸೆ ಮೂಡಿಸಿದೆ.
ಕ್ವಾರ್ಟರ್ ಸುತ್ತಿಗೆ ಪ್ರವೇಶಿಸಿರುವ ಭಾರತೀಯ ಪುರುಷ ಜೋಡಿ ಚೀನಾದ ಹೀ ಜಿತಿಂಗ್ ಹಾಗೂ ತಾನ್ ಕ್ವಿಯಾಂಗ್ ಅವರುಗಳನ್ನು ಎದುರಿಸಲಿದೆ.
ಇದೇ ವೇಳೆ ಭಾರತದ ಎಸ್. ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಜೋಡಿ, ಅಶ್ವಿನಿ ಪೊನ್ನಪ್ಪ ಹಾಗೂ ಎನ್. ಸಿಕ್ಕಿ ರೆಡ್ಡಿ ಜೋಡಿ ತಮ್ಮ ಪಂದ್ಯಗಳನ್ನು ಕಳೆದುಕೊಂಡ ನಂತರ ಪಂದ್ಯಾವಳಿಯಿಂದ ಹೊರನಡೆದಿದ್ದಾರೆ.
ಇನ್ನೊಂದೆಡೆ ನಿನ್ನೆ ನಡೆದಿದ್ದ ಸಿಂಗಲ್ಸ್ ವಿಭಾಗದ ಪಂದ್ಯಗಳಲ್ಲಿ ಭಾರತದ ಏಲ್ ಶಟ್ಲ್ ಪಟುಗಳಾದ ಪಿವಿ ಸಿಂಧೂ, ಕಿಡಂಬಿ ಶ್ರೀಕಾಂತ್ ಮತ್ತು ಎಚ್‌ಎಸ್ ಪ್ರಣೋಯ್ ಎರಡನೇ ಸುತ್ತು ಪ್ರವೇಶಿಸಿದ್ದರು.
SCROLL FOR NEXT