ಕ್ರೀಡೆ

ಪದ್ಮಶ್ರೀ ಗೌರವ ಸಿಗದ್ದಕ್ಕೆ ಖ್ಯಾತ ಕುಸ್ತಿಪಟು ವಿನೇಶ್ ಪೋಗಟ್ ಅಸಮಾಧಾನ

Manjula VN

ನವದೆಹಲಿ: ಈ ಬಾರಿ ಪದ್ಮ ಶ್ರೀ ಪುರಸ್ಕಾರಕ್ಕೆ ತಮ್ಮ ಹೆಸರನ್ನು ಕೇಂದ್ರ ಸರ್ಕಾರ ಆಯ್ಕೆ ಮಾಡದ್ದಕ್ಕೆ ಖ್ಯಾತ ಕುಸ್ತಿಪಟು ವಿನೇಶ್ ಪೋಗಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಟ್ವಿಟರ್ ನಲ್ಲಿ ತಮ್ಮ ಅಸಮಾಧಾನವನ್ನು ಹೊರಹಾಕಿರುವ ವಿನೇಶ್ ಅವರು, ಯಾರಿಗೆ ಪ್ರಶಸ್ತಿ ನೀಡಬೇಕೆಂದು ಯಾರು ನಿರ್ಧರಿಸುತ್ತಾರೆ? ತೀರ್ಪುಗಾರರಲ್ಲಿ ಪ್ರಸ್ತುತ, ಮಾಜಿ ಕ್ರೀಡಾಪಟುಗಳೆಂದು ಇದ್ದಾರೆಯೇ? ಆಯ್ಕೆ ಪ್ರಕ್ರಿಯೆ ಹೇಗೆ ಕೆಲಸ ಮಾಡುತ್ತದೆ? ಏನೇ ಆದರೂ ಕೊನಯಲ್ಲಿ ಎಲ್ಲವೂ ಅನ್ಯಾಯವೆಂದೇ ತೋರುತ್ತದೆ ಎಂದು ಹೇಳಿಕೊಂಡಿದ್ದಾರೆ. 

ಪ್ರತೀ ವರ್ಷ ನಮ್ಮ ಸರ್ಕಾರ ಹಲವು ಕ್ರೀಡಾಪಟುಗಳಿಗೆ ಪುರಸ್ಕಾರ ನೀಡುತ್ತದೆ. ಈ ಪುರಸ್ಕಾರಗಳು ಕ್ರೀಡಾಪಟುಗಳಿಗೆ ತಮ್ಮ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡಲು ಪ್ರೇರೇಪಣೆ ನೀಡುವಂಥಹದ್ದು, ಆದರೆ, ಕೆಲ ಸಂದರ್ಭದಲ್ಲಿ ಇಂತಹ ಪ್ರಶಸ್ತಿಗಳಿಗೆ ಆಯ್ಕೆ ಮಾಡುವಾಗ ಪ್ರಸಕ್ತ ಸಾಧನೆಗಳು ಮತ್ತು ಕ್ರೀಡಾಕ್ಷೇತ್ರದಲ್ಲಿನ ಇತ್ತೀಚಿನ ಸಾಧನೆಗಳನ್ನು ಪರಿಗಣಿಸದೇ ಇರುವುದನ್ನೂ ಕಾಣಬಹುದು. ಇದು ಅರ್ಹರನ್ನು ಪ್ರತಿಬಾರಿಯೂ ಪ್ರಶಸ್ತಿ ಪಟ್ಟಿಯಿಂದ ಹೊರಗೆ ಇಟ್ಟಂತೆ. ಇದ ಸಂಪ್ರದಾಯವಾಗಿ ನಡೆದುಬಂದಿದೆ. 2020ನೇ ಸಾಲಿನ ಪಟ್ಟಿಯೂ ಇದಕ್ಕೆ ಹೊರತಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. 

SCROLL FOR NEXT