ಕ್ರೀಡೆ

ದಿಗ್ಗಜ ಅಥ್ಲೀಟ್ ಮಿಲ್ಖಾ ಸಿಂಗ್ ಆರೋಗ್ಯ ಚೇತರಿಕೆ, ಕೋವಿಡ್ ಐಸಿಯುನಿಂದ ಡಿಸ್ಚಾರ್ಜ್

Raghavendra Adiga

ಚಂಡೀಘರ್: ಪ್ರಸಿದ್ಧ ಭಾರತೀಯ ಅಥ್ಲೀಟ್ ಮಿಲ್ಖಾ ಸಿಂಗ್ ಆರೋಗ್ಯ "ಸ್ಥಿರ"ವಾಗಿದ್ದು  ಕೋವಿಡ್ ಐಸಿಯುನಿಂದ ಪಿಜಿಐಎಂಆರ್ ಆಸ್ಪತ್ರೆಯ ಮತ್ತೊಂದು ವಿಭಾಗಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿದೆ.

91 ವರ್ಷದ ಮಿಲ್ಖಾ ಸಿಂಗ್ ಅವರು ಕಳೆದ ತಿಂಗಳು ಕೊರೋನಾ ವೈರಸ್‌ಗೆ ತುತ್ತಾಗಿದ್ದರು. 

"ಮಿಲ್ಖಾ ಸಿಂಗ್ ಆರೋಗ್ಯ ಸ್ಥಿರವಾಗಿದೆ ಮತ್ತು ಅವರು ಕೋವಿಡ್ ಐಸಿಯುನಿಂದ ಬಿಡುಗಡೆಯಾಗಿದ್ದಾರೆ. ಆದರೆ ವೈದ್ಯಕೀಯ ಐಸಿಯುನದ್ದಾರೆ." ಎಂದು ಮಿಲ್ಖಾ ಕುಟುಂಬದ ವಕ್ತಾರರು ತಿಳಿಸಿದ್ದಾರೆ.

"ನಿಮ್ಮ ಪ್ರಾರ್ಥನೆ ಮತ್ತು ಶುಭಾಶಯಗಳಿಗೆ ಧನ್ಯವಾದಗಳು" ಎಂದು ಅವರು ಹೇಳಿದ್ದಾರೆ. ಮಿಲ್ಖಾ ಸಿಂಗ್ "ಉತ್ತಮವಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ" ಎಂದು ಪಿಜಿಐಎಂಆರ್ ಮೂಲಗಳು ತಿಳಿಸಿವೆ.

"ಅವರು ಕೊರೋನಾ ಸೋಂಕಿನಿಂದ ಗುಣವಾಗಿದ್ದಾರೆ. " ಎಂದು ಮೂಲಗಳು ತಿಳಿಸಿವೆ. ಸಂಸ್ಥೆಯ ಹಿರಿಯ ವೈದ್ಯರನ್ನು ಒಳಗೊಂಡ ವೈದ್ಯಕೀಯ ತಂಡವು ಅವರ ದೈನಂದಿನ ಆರೋಗ್ಯ ಪ್ರಗತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಪತಿ ಸೋಂಕಿಗೆ ಪಾಸಿಟಿವ್ ವರದಿ ಪಡೆದ ನಂತರ  ವೈಲ್ಸ್‌ಗೆ ತುತ್ತಾಗಿದ್ದ ಮಿಲ್ಖಾ ಅವರ ಪತ್ನಿ ನಿರ್ಮಲ್ ಕೌರ್ (85), ಕೊರೋನಾ ಸಂಬಂಧಿತ ತೊಂದರೆಗಳಿಂದಾಗಿ ಮೊಹಾಲಿಯ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ನಿಧನ ಹೊಂದಿದರು. ಕೌರ್ ಮಾಜಿ ಮಹಿಳಾ ರಾಷ್ಟ್ರೀಯ ವಾಲಿಬಾಲ್ ತಂಡದ ನಾಯಕಿ ಆಗಿದ್ದಾರೆ.

ಮನೆಯ ಸಹಾಯಕನಿಂದ ದಂಪತಿಗೆ ಸೋಂಕು ತಗುಲಿದೆಯೆಂದು ಶಂಕಿಸಲಾಗಿದೆ. ಮೊಹಾಲಿಯ ಫೋರ್ಟಿಸ್ ಆಸ್ಪತ್ರೆಯಲ್ಲಿ ಒಂದು ವಾರದ ಚಿಕಿತ್ಸೆಯ ನಂತರ ಮಿಲ್ಖಾ ಸಿಂಗ್ ಅವರನ್ನು ಜೂನ್ 3 ರಂದು ಪಿಜಿಐಎಂಆರ್ ಗೆ ದಾಖಲಿಸಲಾಯಿತು.

ಅಥ್ಲೆಟಿಕ್ ದಂತಕಥೆ ಸಿಂಗ್ ನಾಲ್ಕು ಬಾರಿ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತರಾಗಿದ್ದು 1958 ಕಾಮನ್ವೆಲ್ತ್ ಕ್ರೀಡಾಕೂಟದ ಚಾಂಪಿಯನ್,  1960 ರ ರೋಮ್ ಒಲಿಂಪಿಕ್ಸ್‌ನ 400 ಮೀಟರ್ ಫೈನಲ್‌ನಲ್ಲಿ ಶ್ರೇಷ್ಠ ಪ್ರದರ್ಶನ ದಾಖಲೆಯದ್ದಾಗಿದೆ. ಅವರು 1956 ಮತ್ತು 1964 ರ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದರು ಮತ್ತು 1959 ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನವಾಗಿದ್ದರು.

SCROLL FOR NEXT