ಲಿಯೊನೆಲ್‌ ಮೆಸ್ಸಿ 
ಕ್ರೀಡೆ

2022ರ ಫುಟ್ಬಾಲ್ ವಿಶ್ವಕಪ್ ಟೂರ್ನಿ ಬಳಿಕ ನಿವೃತ್ತಿ: ಸುಳಿವು ಕೊಟ್ಟ ಲಿಯೋನಲ್ ಮೆಸ್ಸಿ!

ಅರ್ಜೆಂಟೀನಾದ ಫುಟ್ಬಾಲ್ ಸೂಪರ್ ಸ್ಟಾರ್ ಲಿಯೋನಲ್ ಮೆಸ್ಸಿ ತಮ್ಮ ಅಭಿಮಾನಿಗಳಿಗೆ ದಿಢೀರ್ ಶಾಕ್ ನೀಡಿದ್ದು, ಶೀಘ್ರದಲ್ಲೇ ಅಂತಾರಾಷ್ಟ್ರೀಯ ಫುಟ್ಬಾಲ್ ನಿಂದ ನಿವೃತ್ತಿಯಾಗುವ ಸುಳಿವು ನೀಡಿದ್ದಾರೆ.

ನವದೆಹಲಿ: ಅರ್ಜೆಂಟೀನಾದ ಫುಟ್ಬಾಲ್ ಸೂಪರ್ ಸ್ಟಾರ್ ಲಿಯೋನಲ್ ಮೆಸ್ಸಿ ತಮ್ಮ ಅಭಿಮಾನಿಗಳಿಗೆ ದಿಢೀರ್ ಶಾಕ್ ನೀಡಿದ್ದು, ಶೀಘ್ರದಲ್ಲೇ ಅಂತಾರಾಷ್ಟ್ರೀಯ ಫುಟ್ಬಾಲ್ ನಿಂದ ನಿವೃತ್ತಿಯಾಗುವ ಸುಳಿವು ನೀಡಿದ್ದಾರೆ.

ಹೌದು.. ವಿಶ್ವದ ಫುಟ್ಬಾಲ್ ರಂಗ ಕಂಡ ದೈತ್ಯ ಕ್ರೀಡಾಪಟುಗಳಲ್ಲೊಬ್ಬರಾದ ಅರ್ಜೆಂಟೀನಾ ತಂಡದ ಲಿಯೊನೆಲ್ ಮೆಸ್ಸಿ, ಇದೇ ವರ್ಷಾಂತ್ಯಕ್ಕೆ ತಮ್ಮ ಅಂತಾರಾಷ್ಟ್ರೀಯ ಫುಟ್ಬಾಲ್ ವೃತ್ತಿಜೀವನದಿಂದ ನಿವೃತ್ತಿಯಾಗುವುದಾಗಿ ಹೇಳಿದ್ದಾರೆ. 

ಖಾಸಗಿ ಕ್ರೀಡಾ ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು, ಈ ವರ್ಷಾಂತ್ಯಕ್ಕೆ ಫಿಫಾ ಫುಟ್ಬಾಲ್ ವಿಶ್ವಕಪ್ ನಡೆಯಲಿದೆ. ಅದೇ ಪಂದ್ಯಾವಳಿ ನನ್ನ ವೃತ್ತಿಜೀವನದ ಕಡೆಯ ಪಂದ್ಯಾವಳಿಯಾಗಲಿದೆ. ಪಂದ್ಯಾವಳಿ ಮುಗಿದ ಕೂಡಲೇ ನಾನು ನಮ್ಮ ಫುಟ್ಬಾಲ್ ವೃತ್ತಿಜೀವನಕ್ಕೆ ವಿದಾಯ ಘೋಷಿಸಲಿದ್ದೇನೆ ಎಂದು ಹೇಳಿದ್ದಾರೆ.

'ಈ ಬಾರಿಯ ಫುಟ್ಬಾಲ್ ವಿಶ್ವಕಪ್, ನನ್ನ ಕಡೆಯ ವಿಶ್ವಕಪ್ ಪಂದ್ಯಾವಳಿ. ಹಾಗಾಗಿ, ಈ ಬಾರಿಯ ಪಂದ್ಯಾವಳಿಯಲ್ಲಿ ಹೆಚ್ಚಿನ ಮಟ್ಟದ ಪ್ರದರ್ಶನ ನೀಡಲು ನಾನು ಉತ್ಸುಕನಾಗಿದ್ದೇನೆ. ಸದ್ಯದ ಮಟ್ಟಿಗೆ ಉತ್ತಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಹೊಂದಿದ್ದು ಅದೇ ಆಧಾರದಲ್ಲಿ ನನ್ನ ಪ್ರದರ್ಶನವನ್ನೂ ಉತ್ತಮಗೊಳಿಸುವ ಇರಾದೆಯಿದೆ'' ಎಂದು ಹೇಳಿದ್ದಾರೆ. 

ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ಅವರು ವಿದಾಯ ಹೇಳಿದರೂ ಸ್ಥಳೀಯ ಮಟ್ಟದ ಫುಟ್ಬಾಲ್ ಸಂಸ್ಥೆಗಳಲ್ಲಿ ಮುಂದುವರಿಯಲಿರುವುದು ಪಕ್ಕಾ ಆಗಿದೆ. ಇತ್ತೀಚೆಗಷ್ಟೇ, ಬಾರ್ಸಿಲೋನಾ ಕ್ಲಬ್‌ನೊಂದಿಗೆ ತಮ್ಮ 21 ವರ್ಷಗಳ ಸಂಬಂಧ ಮುರಿದುಕೊಂಡಿದ್ದ ಮೆಸ್ಸಿ, ಪ್ಯಾರಿಸ್‌ ಸೇಂಟ್‌-ಜರ್ಮೈನ್‌ ಕ್ಲಬ್‌ ಪರ ಆಡಲು ಎರಡು ವರ್ಷಗಳ ಗುತ್ತಿಗೆಗೆ ಸಹಿ ಮಾಡಿದ್ದರು. 34ರ ಪ್ರಾಯದ ಅರ್ಜೆಂಟೀನಾ ನಾಯಕ ಲಿಯೋನೆಲ್‌ ಮೆಸ್ಸಿ, 30ನೇ ನಂಬರ್‌ ಜೆರ್ಸಿಯನ್ನು ಧರಿಸಲಿದ್ದಾರೆ.

ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಫುಟ್ಬಾಲ್ ವಿಶ್ವಕಪ್ ಈ ಬಾರಿ ಕತಾರ್ ನಲ್ಲಿ ನ. 20ರಿಂದ ಡಿ. 18ರವರೆಗೆ ನಡೆಯಲಿದೆ. ಡಿ. 25ರಂದು ಕ್ರಿಸ್ಮಸ್ ಹಬ್ಬ ಇದ್ದು, ಕ್ರಿಸ್ಮಸ್ ಗೂ ಮುನ್ನವೇ ತಮ್ಮ ನಿವೃತ್ತಿಯ ನಿರ್ಧಾರವನ್ನು ಮೆಸ್ಸಿ ಅಧಿಕೃತವಾಗಿ ಪ್ರಕಟಿಸಿ, ಕ್ರಿಸ್ ಮಸ್ ಹೊತ್ತಿಗೆ ನಿರಾಳವಾಗುವ ಸಾಧ್ಯತೆಗಳಿವೆ ಎಂದು ಫುಟ್ಬಾಲ್ ತಜ್ಞರು ಲೆಕ್ಕಾಚಾರ ಹಾಕಿದ್ದಾರೆ.

ಇತ್ತೀಚೆಗಷ್ಟೇ, ಟೆನಿಸ್ ರಂಗದ ದಂತಕತೆ ರೋಜರ್ ಫೆಡರರ್ ಅವರು ತಮ್ಮ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದರು. ಈಗ ಮೆಸ್ಸಿ ಕೂಡ ಅದೇ ಹಾದಿಯಲ್ಲಿದ್ದಾರೆ. ಅಲ್ಲಿಗೆ, 2022ರಲ್ಲಿ ಟೆನಿಸ್ ಹಾಗೂ ಫುಟ್ಬಾಲ್ ರಂಗದ ಎರಡು ದೈತ್ಯ ಪ್ರತಿಭೆಗಳು ನೇಪಥ್ಯಕ್ಕೆ ಸರಿದಂತಾಗುತ್ತದೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT