ಸಾನಿಯಾ ಮಿರ್ಜಾ 
ಕ್ರೀಡೆ

ವೃತ್ತಿಪರ ಟೆನಿಸ್ ಬದುಕಿಗೆ ವಿದಾಯ ಹೇಳಲಿರುವ ಸಾನಿಯಾ ಮಿರ್ಜಾ: ಫೆಬ್ರವರಿಯಲ್ಲಿ ದುಬೈ ಡಬ್ಲ್ಯುಟಿಎ 1000 ಕೊನೆಯ ಪಂದ್ಯ

ಭಾರತದ ಮಾಜಿ ಡಬಲ್ಸ್, ವಿಶ್ವದ ನಂಬರ್ ಒನ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರು ಮುಂದಿನ ತಿಂಗಳ ದುಬೈ ಟೆನಿಸ್ ಚಾಂಪಿಯನ್‌ಶಿಪ್‌ನ ನಂತರ ವೃತ್ತಿಜೀವನಕ್ಕೆ ಗುಡ್ ಬೈ ಹೇಳಲಿದ್ದಾರೆ.

ಭಾರತದ ಮಾಜಿ ಡಬಲ್ಸ್, ವಿಶ್ವದ ನಂಬರ್ ಒನ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರು ಮುಂದಿನ ತಿಂಗಳ ದುಬೈ ಟೆನಿಸ್ ಚಾಂಪಿಯನ್‌ಶಿಪ್‌ನ ನಂತರ ವೃತ್ತಿಜೀವನಕ್ಕೆ ಗುಡ್ ಬೈ ಹೇಳಲಿದ್ದಾರೆ. 36ನೇ ವರ್ಷಕ್ಕೆ ವೃತ್ತಿಜೀವನಕ್ಕೆ ವಿದಾಯ ಹೇಳುತ್ತಿದ್ದು, ಕಳೆದ ವರ್ಷವೇ ಅವರು ನಿವೃತ್ತಿಯಾಗಬೇಕಿತ್ತು. ಗಾಯಗಳ ಕಾರಣದಿಂದ ಅದು ವಿಳಂಬವಾಗಿತ್ತು.

ಸನಿಯಾ ಮಿರ್ಜಾ ಅವರು ಭಾರತದ ಶ್ರೇಷ್ಠ ಮಹಿಳಾ ಟೆನಿಸ್ ಆಟಗಾರ್ತಿ, ತಮ್ಮ ಇಷ್ಟು ವರ್ಷಗಳ ವೃತ್ತಿಬದುಕಿನಲ್ಲಿ ಆರು ಗ್ರ್ಯಾಂಡ್ ಸ್ಲ್ಯಾಮ್ ಡಬಲ್ಸ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಈ ತಿಂಗಳು ಆಸ್ಟ್ರೇಲಿಯನ್ ಓಪನ್‌ನಲ್ಲಿ ತಮ್ಮ ಕೊನೆಯ ದೊಡ್ಡ ಪಂದ್ಯವನ್ನಾಡಲಿದ್ದಾರೆ. ಅಲ್ಲಿ ಅವರು 2016 ರಲ್ಲಿ ಮಹಿಳಾ ಡಬಲ್ಸ್ ಕಿರೀಟವನ್ನು ಗೆದ್ದಿದ್ದರು. 

ಡಬ್ಲ್ಯುಟಿಎ ಫೈನಲ್‌ನ ನಂತರ ನಾನು ವೃತ್ತಿಪರವಾಗಿ ಟೆನಿಸ್ ಆಡುವುದನ್ನು ನಿಲ್ಲಿಸುತ್ತೇನೆ. ಯುಎಸ್ ಓಪನ್‌ಗೆ ಮೊದಲೇ ನನ್ನ ಮೊಣಕೈಯಲ್ಲಿ ಗಾಯಗಳಾಗಿದ್ದವು, ಇದರಿಂದಾಗಿ ಸ್ಪರ್ಧಾತ್ಮಕ ಪಂದ್ಯಗಳಿಂದ ಹೊರಗುಳಿಯಬೇಕಾಯಿತು ಎಂದು ಮಿರ್ಜಾ ಡಬ್ಲ್ಯುಟಿಎ ಟೂರ್‌ನ ವೆಬ್‌ಸೈಟ್‌ಗೆ ತಿಳಿಸಿದ್ದಾರೆ. 

ದೀರ್ಘಕಾಲದ ಗಾಯದಿಂದ ಬಳಲುತ್ತಿರುವ ಮಿರ್ಜಾ ಅವರು 2022 ರ ಕೊನೆಯಲ್ಲಿ ನಿವೃತ್ತರಾಗಲು ಯೋಜಿಸಿದ್ದರು ಆದರೆ ಆಗಸ್ಟ್‌ನಲ್ಲಿ ಮೊಣಕೈ ಗಾಯವು ಯುಎಸ್ ಓಪನ್‌ನಿಂದ ಅವರನ್ನು ಹೊರಗುಳಿಯುವಂತೆ ಮಾಡಿತ್ತು. 

ಸನಿಯಾ ಮಿರ್ಜಾ ಅವರು 2005 ರಲ್ಲಿ ತಮ್ಮ ತವರು ಹೈದರಾಬಾದ್ ಪಂದ್ಯಾವಳಿಯನ್ನು ಗೆದ್ದಾಗ WTA ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯರಾದರು. 2007 ರ ಹೊತ್ತಿಗೆ ಅಗ್ರ 30 ಶ್ರೇಯಾಂಕಿತ ಆಟಗಾರರಾದರ ಮತ್ತು ವಿಶ್ವದ 27 ನೇ ಶ್ರೇಯಾಂಕವನ್ನು ತಲುಪಿದರು.

ಮಣಿಕಟ್ಟಿನ ಗಾಯದಿಂದ ಸಾನಿಯಾ ಮಿರ್ಜಾ ಸ್ವಿಸ್ ಶ್ರೇಷ್ಠ ಆಟಗಾರ್ತಿ ಮಾರ್ಟಿನಾ ಹಿಂಗಿಸ್ ಅವರೊಂದಿಗೆ ಡಬಲ್ಸ್ ಆಡಲು ಆರಂಭಿಸಿದರು. ಸ್ವ-ಶೈಲಿಯ "ಸಾಂಟಿನಾ" ತಂಡವು ವಿಂಬಲ್ಡನ್, ಯುಎಸ್ ಮತ್ತು ಆಸ್ಟ್ರೇಲಿಯನ್ ಓಪನ್ ಸೇರಿದಂತೆ 14 ಪ್ರಶಸ್ತಿಗಳನ್ನು ಗೆದ್ದಿದೆ.

ಸಾನಿಯಾ ಮಿರ್ಜಾ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಫೆಬ್ರವರಿಯಲ್ಲಿ ಟೆನಿಸ್ ಗೆ ವಿದಾಯ ಹೇಳುವ ಮೊದಲು ಜನವರಿ 16 ರಂದು ಪ್ರಾರಂಭವಾಗುವ ಆಸ್ಟ್ರೇಲಿಯನ್ ಓಪನ್‌ನಲ್ಲಿ ಕಝಾಕಿಸ್ತಾನ್‌ನ ಅನ್ನಾ ಡ್ಯಾನಿಲಿನಾ ಅವರೊಂದಿಗೆ ಸ್ಪರ್ಧಿಸಲಿದ್ದಾರೆ, 36 ವರ್ಷದ ಸಾನಿಯಾ ಮಿರ್ಜಾ ಕಳೆದೊಂದು ದಶಕದಿಂದ ತಮ್ಮ ಪತಿ ಪಾಕಿಸ್ತಾನ ಮಾಜಿ ಕ್ರಿಕೆಟ್ ಆಟಗಾರ ಶೋಯೆಬ್ ಮಲಿಕ್ ಜೊತೆ ದುಬೈಯಲ್ಲಿ ನೆಲೆಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಸೌರಭ್ ಭಾರದ್ವಾಜ್ ಮನೆ ಮೇಲೆ ಇಡಿ ದಾಳಿ; ಮೋದಿ ನಕಲಿ ಪದವಿ ಕುರಿತ ಗಮನ ಬೇರೆಡೆ ಸೆಳೆಯಲು ಯತ್ನ ಎಂದ AAP

SCROLL FOR NEXT