ಅಮಾನ್ ಸೆಹ್ರಾವತ್ online desk
ಕ್ರೀಡೆ

Olympics 2024: ಸೆಮೀಸ್ ನಲ್ಲಿ ಮುಗ್ಗರಿಸಿದ Aman Sehrawat; ಆದರೂ ಇದೆ ಕಂಚಿನ ಪದಕದ ಭರವಸೆ!

ಜಪಾನ್ ಕುಸ್ತಿ ಪಟು ರೆಯಿ ಹಿಗುಚಿ ಅಮಾನ್ ಸೆಹ್ರಾವತ್ ನ್ನು ಮಣಿಸಿ ಫೈನಲ್ ಪ್ರವೇಶಿಸಿದ್ದಾರೆ. 10-0 ಅಂತರದಿಂದ ಜಪಾನ್ ಕುಸ್ತಿ ಪಟು ಹಿಗುಚಿ ಗೆಲುವು ಸಾಧಿಸಿದ್ದಾರೆ.

ಪ್ಯಾರಿಸ್: ಪುರುಷರ ಕುಸ್ತಿ ವಿಭಾಗದಲ್ಲಿ ಸೆಮಿ ಫೈನಲ್ಸ್ ಪ್ರವೇಶಿಸಿ ಭರವಸೆ ಮೂಡಿಸಿದ್ದ ಅಮಾನ್ ಸೆಹ್ರಾವತ್ ಸೆಮೀಸ್ ನಲ್ಲಿ ಮುಗ್ಗರಿಸಿದ್ದಾರೆ.

ಜಪಾನ್ ಕುಸ್ತಿ ಪಟು ರೆಯಿ ಹಿಗುಚಿ ಅಮಾನ್ ಸೆಹ್ರಾವತ್ ನ್ನು ಮಣಿಸಿ ಫೈನಲ್ ಪ್ರವೇಶಿಸಿದ್ದಾರೆ. 10-0 ಅಂತರದಿಂದ ಜಪಾನ್ ಕುಸ್ತಿ ಪಟು ಹಿಗುಚಿ ಗೆಲುವು ಸಾಧಿಸಿದ್ದಾರೆ. ಸೆಮೀಸ್ ನಲ್ಲಿ ಸೋತರೂ ಕಂಚಿನ ಪದಕಕ್ಕಾಗಿ ಶುಕ್ರವಾರದಂದು ಅಮಾನ್ ಮತ್ತೊಂದು ಪಂದ್ಯ ಎದುರಿಸಲಿದ್ದಾರೆ.

ಮುಂದಿನ ಪಂದ್ಯದಲ್ಲಿ ಸೆಹ್ರಾವತ್ ಪೋರ್ಟೊ ರಿಕೊದ ಡೇರಿಯನ್ ಕ್ರೂಜ್ ಅವರನ್ನು ಎದುರಿಸಲಿದ್ದಾರೆ. ಕ್ರೂಜ್ ಈ ಹಿಂದಿನ ಪಂದ್ಯದಲ್ಲಿ ಹಿಗುಚಿ ವಿರುದ್ಧ ಸೋತಿದ್ದರು.

ಇಂದು ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 21 ವರ್ಷದ ಅಮನ್ ಅವರು ಮಾಜಿ ವಿಶ್ವ ಚಾಂಪಿಯನ್ ಅಲ್ಬೇನಿಯಾದ ಜೆಲಿಮ್‌ಖಾನ್ ಅಬಕರೊವ್ (Zelimkhan Abkarov) ವಿರುದ್ಧ 12-0 ಅಂತರದ ಭರ್ಜರಿ ಗೆಲುವು ಗಳಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

SCROLL FOR NEXT