ಪ್ಯಾರಿಸ್: ಕ್ರಾಂತಿಯ ತೊಟ್ಟಿಲು ಎಂದು ಖ್ಯಾತಿಯನ್ನು ಹೊಂದಿರುವ ಪ್ಯಾರಿಸ್ ನಗರ ನಿನ್ನೆ 33ನೇ ಒಲಿಂಪಿಕ್ಸ್ 2024 ಉದ್ಘಾಟನಾ ಸಮಾರಂಭಕ್ಕೆ ಸಾಕ್ಷಿಯಾಯಿತು,
ಮೂರನೇ ಬಾರಿ ಆತಿಥ್ಯ: ಒಲಿಂಪಿಕ್ಸ್ ಗೇಮ್ ಉದ್ಘಾಟನಾ ಸಮಾರಂಭವು ಇಲ್ಲಿ 'ಪರೇಡ್ ಆಫ್ ದಿ ನೇಷನ್ಸ್' ನೊಂದಿಗೆ ಪ್ರಾರಂಭವಾಯಿತು, ಇದರಲ್ಲಿ 205 ದೇಶಗಳ ಕ್ರೀಡಾಪಟುಗಳು ಸಾಂಪ್ರದಾಯಿಕ ಸೀನ್ ನದಿಯಲ್ಲಿ ದೋಣಿಗಳಲ್ಲಿ ಪ್ರಯಾಣಿಸಿದರು, ಸಾಮಾನ್ಯವಾಗಿ ಸ್ಟೇಡಿಯಂ ಒಳಗೆ ನಡೆಯುವ ಕ್ರೀಡಾಪಟುಗಳ ಮೆರವಣಿಗೆಯು ಈ ಸಲ ಬೋಟ್ಗಳಲ್ಲಿ ಆಯೋಜಿಸಿ ಪ್ರೇಕ್ಷರನ್ನು ಭವ್ಯತೆ ಮತ್ತು ಸಾಂಕೇತಿಕವಾಗಿ ಆಕರ್ಷಿಸಿತು. ಸ್ವಲ್ಪ ಮಳೆ ಬಂದು ಆತಂಕ ಮೂಡಿಸಿದರೂ ಕೂಡ ಉತ್ಸಾಹಕ್ಕೇನೂ ಕೊರತೆ ಕಾಣಲಿಲ್ಲ. 1900 ಮತ್ತು 1924 ರ ನಂತರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸುತ್ತಿರುವುದು ಇದು ಮೂರನೇ ಬಾರಿ.
ಫ್ರೆಂಚ್ ಫುಟ್ಬಾಲ್ ದಂತಕಥೆ ಜಿನೆಡಿನ್ ಜಿಡಾನೆ ಅವರು ಒಲಿಂಪಿಕ್ ಜ್ವಾಲೆಯೊಂದಿಗೆ ಪ್ಯಾರಿಸ್ ಬೀದಿಗಳಲ್ಲಿ ಸ್ಪ್ರಿಂಟ್ ಮಾಡುತ್ತಾ ಸಾಗುವಾಗ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಮುಖ್ಯಸ್ಥ ಥಾಮಸ್ ಬಾಚ್ ಕಣ್ತುಂಬಿಕೊಂಡರು.
ಆರು ಕಿಲೋಮೀಟರ್ ಪರೇಡ್ ಆಸ್ಟರ್ಲಿಟ್ಜ್ ಸೇತುವೆಯಿಂದ ಪ್ರಾರಂಭವಾಯಿತು. 85 ದೋಣಿಗಳಲ್ಲಿ 205 ರಾಷ್ಟ್ರಗಳ 6,800 ಕ್ಕೂ ಹೆಚ್ಚು ಕ್ರೀಡಾಪಟುಗಳು ಮತ್ತು ಒಂದು ನಿರಾಶ್ರಿತರ ಒಲಿಂಪಿಕ್ ತಂಡವನ್ನು ಹೊತ್ತೊಯ್ದವು,
ಭಾರತದಿಂದ ಎರಡು ಬಾರಿ ಒಲಂಪಿಕ್ ಪದಕ ವಿಜೇತೆ ಪಿವಿ ಸಿಂಧು ಮತ್ತು ಟೇಬಲ್ ಟೆನ್ನಿಸ್ ದಂತಕತೆ ಎ ಶರತ್ ಕಮಲ್ ಭಾರತದ ಧ್ವಜವನ್ನು ಹೊತ್ತು ತಂಡದ ಕ್ರೀಡಾಪಟುಗಳನ್ನು ಮುನ್ನಡೆಸಿದರು.
ಭಾರತದ ಆಟಗಾರರೆಷ್ಟು?: ಈ ಬಾರಿಯ ಒಲಿಂಪಿಕ್ಸ್ ನಲ್ಲಿ ಭಾರತವನ್ನು 47 ಮಹಿಳೆಯರು ಸೇರಿದಂತೆ 117 ಕ್ರೀಡಾಪಟುಗಳು ಪ್ರತಿನಿಧಿಸುತ್ತಿದ್ದಾರೆ. 140 ಸಹಾಯಕ ಸಿಬ್ಬಂದಿ ಭಾಗವಹಿಸಿದ್ದಾರೆ. 3,00,000 ಕ್ಕೂ ಹೆಚ್ಚು ಜನರು ಸೀನ್ ದಂಡೆಯಲ್ಲಿ ನಿಂತು ಕಾರ್ಯಕ್ರಮವನ್ನು ವೀಕ್ಷಿಸಿದರು. ಈ ಸಮಾರಂಭವು ಒಲಿಂಪಿಕ್ಸ್ ಗೇಮ್ಸ್ ಇತಿಹಾಸದಲ್ಲಿ ಅತಿ ದೊಡ್ಡದಾಗಿದೆ ಎಂದು ಸಂಘಟಕರು ಹೇಳಿದ್ದಾರೆ.
ಫ್ರಾನ್ಸ್ ರಾಜಧಾನಿ ಪ್ಯಾರಿಸ್ನಲ್ಲಿ ಈ ಬಾರಿ ನಡೆಯುತ್ತಿರುವ ಒಲಿಂಪಿಕ್ಸ್ ನಲ್ಲಿ 206 ದೇಶಗಳ 10 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ.
ಇಂದು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ವೇಳಾಪಟ್ಟಿಯ ಒಂದು ನೋಟ:
ಬ್ಯಾಡ್ಮಿಂಟನ್
ಪುರುಷರ ಸಿಂಗಲ್ಸ್ ಗುಂಪು ಪಂದ್ಯ: ಲಕ್ಷ್ಯ ಸೇನ್ ವಿರುದ್ಧ ಕೆವಿನ್ ಕಾರ್ಡನ್ (ಗ್ವಾಟೆಮಾಲಾ) (ರಾತ್ರಿ 7:10)
ಪುರುಷರ ಡಬಲ್ಸ್ ಗುಂಪು ಪಂದ್ಯ: ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ವಿರುದ್ಧ ಲ್ಯೂಕಾಸ್ ಕಾರ್ವಿ ಮತ್ತು ರೊನಾನ್ ಲಾಬರ್ (ಫ್ರಾನ್ಸ್) (ರಾತ್ರಿ 8 ಗಂಟೆಗೆ).
ಮಹಿಳೆಯರ ಡಬಲ್ಸ್ ಗುಂಪು ಪಂದ್ಯ: ಅಶ್ವಿನಿ ಪೊನ್ನಪ್ಪ ಮತ್ತು ತನಿಶಾ ಕ್ರಾಸ್ಟೊ ವಿರುದ್ಧ ಕಿಮ್ ಸೊ ಯೊಂಗ್ ಮತ್ತು ಕಾಂಗ್ ಹೀ ಯೊಂಗ್ (ಕೊರಿಯಾ) (ರಾತ್ರಿ 11:50)
ಬಾಕ್ಸಿಂಗ್
ಮಹಿಳೆಯರ 54 ಕೆಜಿ ಆರಂಭಿಕ ಸುತ್ತಿನ ಬೌಟ್: ಪ್ರೀತಿ ಪವಾರ್ ವಿರುದ್ಧ ಥಿ ಕಿಮ್ ಅನ್ಹ್ ವೋ (ವಿಯೆಟ್ನಾಂ) (ಜನವರಿ 28 ರಂದು ಬೆಳಿಗ್ಗೆ 12.05).
ಹಾಕಿ
ಪೂಲ್ ಬಿ ಪಂದ್ಯ: ಭಾರತ vs ನ್ಯೂಜಿಲೆಂಡ್ (ರಾತ್ರಿ 9 ಗಂಟೆಗೆ IST)
ರೋಯಿಂಗ್
ಪುರುಷರ ಸಿಂಗಲ್ ಸ್ಕಲ್ಸ್: ಪನ್ವರ್ ಬಾಲರಾಜ್ (ಮಧ್ಯಾಹ್ನ 12:30 IST)
ಟೇಬಲ್ ಟೆನ್ನಿಸ್
*ಪುರುಷರ ಸಿಂಗಲ್ಸ್ ಪ್ರಾಥಮಿಕ ಸುತ್ತು: ಹರ್ಮೀತ್ ದೇಸಾಯಿ ವಿರುದ್ಧ ಜೋರ್ಡಾನ್‌ನ ಜೈದ್ ಅಬೋ ಯಮನ್ (ರಾತ್ರಿ 7:15)
ಟೆನ್ನಿಸ್
ಪುರುಷರ ಡಬಲ್ಸ್ ಮೊದಲ ಸುತ್ತಿನ ಪಂದ್ಯ: ರೋಹನ್ ಬೋಪಣ್ಣ ಮತ್ತು ಎನ್ ಶ್ರೀರಾಮ್ ಬಾಲಾಜಿ ವಿರುದ್ಧ ಎಡ್ವರ್ಡ್ ರೋಜರ್-ವಾಸೆಲಿನ್ ಮತ್ತು ಫ್ಯಾಬಿಯನ್ ರೆಬೌಲ್ (ಫ್ರಾನ್ಸ್) (ಮಧ್ಯಾಹ್ನ 3:30)
ಶೂಟಿಂಗ್
10ಮೀ ಏರ್ ರೈಫಲ್ ಮಿಶ್ರ ತಂಡ ಅರ್ಹತೆ: ಸಂದೀಪ್ ಸಿಂಗ್/ಎಲವೆನಿಲ್ ವಲರಿವನ್, ಅರ್ಜುನ್ ಬಾಬುತಾ/ರಮಿತಾ ಜಿಂದಾಲ್ (ಮಧ್ಯಾಹ್ನ 12:30).
10 ಮೀ ಏರ್ ಪಿಸ್ತೂಲ್ ಪುರುಷರ ಅರ್ಹತೆ: ಅರ್ಜುನ್ ಸಿಂಗ್ ಚೀಮಾ ಮತ್ತು ಸರಬ್ಜೋತ್ ಸಿಂಗ್ (ಮಧ್ಯಾಹ್ನ 2 ಗಂಟೆಗೆ).
10 ಮೀ ಏರ್ ಪಿಸ್ತೂಲ್ ಮಹಿಳೆಯರ ಅರ್ಹತೆ: ಮನು ಭಾಕರ್ ಮತ್ತು ರಿದಮ್ ಸಾಂಗ್ವಾನ್ (ಸಂಜೆ 4 ಗಂಟೆಗೆ).