ಬಿ.ಸಿ ರಮೇಶ್ ಕುಮಾರ್ 
ಕ್ರೀಡೆ

Pro Kabaddi League: ಬೆಂಗಳೂರು ಬುಲ್ಸ್ ತಂಡಕ್ಕೆ ಕೊನೆಗೂ 'ಕನ್ನಡಿಗ' ಕೋಚ್; ರಣ್ದೀರ್ ಸಿಂಗ್ ಸೆಹ್ರಾವತ್ ತಲೆದಂಡ

ಕಳೆದೊಂದು ದಶಕದಿಂದ ಬೆಂಗಳೂರು ಬುಲ್ಸ್ ತಂಡದ ಹೆಡ್ ಕೋಚ್ ಅಗಿ ಕಾರ್ಯ ನಿರ್ವಹಿಸಿದ್ದ ರಣ್ದೀರ್ ಸಿಂಗ್ ಸೆಹ್ರಾವತ್ ಇದೀಗ ಬುಲ್ಸ್ ಕೋಚ್ ಸ್ಥಾನದಿಂದ ಕೆಳಗಿಳಿದಿದ್ದಾರೆ.

ಬೆಂಗಳೂರು: ಈ ಬಾರಿಯ ಪ್ರೊಕಬಡ್ಡಿ ಲೀಗ್ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ತಂಡದಲ್ಲಿ ಮಹತ್ತರ ಬದಲಾಣೆಯಾಗುತ್ತಿದ್ದು, ಕನ್ನಡಿಗ ಬಿ.ಸಿ. ರಮೇಶ್ ಕುಮಾರ್ ಹೊಸ ಹೆಡ್ ಕೋಚ್ ಆಗಿ ನೇಮಕವಾಗಿದ್ದಾರೆ.

ಹೌದು.. ಕಳೆದೊಂದು ದಶಕದಿಂದ ಬೆಂಗಳೂರು ಬುಲ್ಸ್ ತಂಡದ ಹೆಡ್ ಕೋಚ್ ಅಗಿ ಕಾರ್ಯ ನಿರ್ವಹಿಸಿದ್ದ ರಣ್ದೀರ್ ಸಿಂಗ್ ಸೆಹ್ರಾವತ್ ಅವರು ಇದೀಗ ಬುಲ್ಸ್ ಹೆಡ್‌ಕೋಚ್ ಸ್ಥಾನದಿಂದ ಕೆಳಗಿಳಿದಿದ್ದಾರೆ. ಅವರ ಸ್ಥಾನಕ್ಕೆ ಟೂರ್ನಿಯ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಕೋಚ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ಕನ್ನಡಿಗ ಬಿ.ಸಿ. ರಮೇಶ್ ಕುಮಾರ್ ನೇಮಕವಾಗಿದ್ದಾರೆ. ಆ ಮೂಲಕ ಕಳೆದ ಋತುವಿನಲ್ಲಿ ನೀರಸ ಪ್ರದರ್ಶನ ತೋರಿದ್ದ ಬುಲ್ಸ್ ತಂಡಕ್ಕೆ ರಮೇಶ್ ಆಗಮನದಿಂದ ಹೊಸ ಭರವಸೆ ಮೂಡಿದೆ.

ಸೆಹ್ರಾವತ್ ನೇತೃತ್ವದಲ್ಲಿ ನೀರಸ ಪ್ರದರ್ಶನ

ಇನ್ನು 2024ನೇ ಸಾಲಿನ ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಬೆಂಗಳೂರು ಬುಲ್ಸ್ ತಂಡವು ನೀರಸ ಪ್ರದರ್ಶನ ತೋರಿತ್ತು. ತಾನಾಡಿದ 22 ಪಂದ್ಯಗಳಲ್ಲಿ ಕೇವಲ 2 ಗೆಲುವು ಸಾಧಿಸಿ ಬರೊಬ್ಬರಿ 19 ಪಂದ್ಯಗಳಲ್ಲಿ ಸೋಲು ಕಂಡಿತ್ತು. ಒಂದು ಪಂದ್ಯ ಮಾತ್ರ ಟೈ ಆಗಿತ್ತು. ಆ ಮೂಲಕ ಅಂಕಪಟ್ಟಿಯಲ್ಲಿ ಬೆಂಗಳೂರು ತಂಡ ಕೊನೆಯ ಸ್ಥಾನ ಪಡೆದು ನೀರಸವಾಗಿ ತನ್ನ ಅಭಿಯಾನ ಮುಗಿಸಿತ್ತು.

ಯಾರು ಈ ಬಿ.ಸಿ ರಮೇಶ್ ಕುಮಾರ್?

ಭಾರತದ ಕಬ್ಬಡಿ ವಲಯದಲ್ಲಿ ಬಿ.ಸಿ ರಮೇಶ್ ಕುಮಾರ್ 'ದ್ರೋಣಾಚಾರ್ಯ' ಎಂದ ಖ್ಯಾತಿ ಪಡೆದಿದ್ದಾರೆ. ತಮ್ಮ ಅದ್ಭುತ ಸೇವೆಗೆ ಅವರು ಅರ್ಜುನ ಪ್ರಶಸ್ತಿ ಕೂಡ ಪಡೆದಿದ್ದಾರೆ. 2018ರಲ್ಲಿ ಬಿ.ಸಿ. ರಮೇಶ್ ಕುಮಾರ್ ಮಾರ್ಗದರ್ಶನದಲ್ಲಿಯೇ ಬೆಂಗಳೂರು ಬುಲ್ಸ್ ತಂಡವು ಮೊದಲ ಬಾರಿಗೆ ಪಿಕೆಎಲ್ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಬಳಿಕ ರಮೇಶ್ ಕುಮಾರ್ ಪುಣೇರಿ ಪಲ್ಟನ್ ಮತ್ತು ಬೆಂಗಾಲ್ ವಾರಿಯರ್ಸ್ ತಂಡಗಳ ಸೇರಿದ್ದರು. ಇದೇ ರಮೇಶ್ ಕುಮಾರ್ ಮಾರ್ಗದರ್ಶನದಲ್ಲಿ ಪುಣೇರಿ ಪಲ್ಟನ್ ಹಾಗೂ ಬೆಂಗಾಲ್ ವಾರಿಯರ್ಸ್ ತಂಡಗಳು ಚಾಂಪಿಯನ್ ಆಗಿದ್ದವು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel