ಹಾಕಿ (ಸಾಂಕೇತಿಕ ಚಿತ್ರ) 
ಕ್ರೀಡೆ

ಏಷ್ಯಾ ಕಪ್ ಹಾಕಿ: ಭಾರತದಲ್ಲಿ ಪಾಕಿಸ್ತಾನ ತಂಡ ಆಡುವುದನ್ನು ತಡೆಯಲು ಸಾಧ್ಯವಿಲ್ಲ

ಆಗಸ್ಟ್ 27 ರಿಂದ ಸೆಪ್ಟೆಂಬರ್ 7 ರವರೆಗೆ ಬಿಹಾರದ ರಾಜ್‌ಗಿರ್‌ನಲ್ಲಿ ಪುರುಷರ ಏಷ್ಯಾ ಕಪ್ ಹಾಕಿ ನಡೆಯಲಿದೆ.

ನವದೆಹಲಿ: ಮುಂದಿನ ತಿಂಗಳು ಭಾರತದಲ್ಲಿ ನಡೆಯಲಿರುವ ಏಷ್ಯಾ ಕಪ್ ಹಾಕಿ ಮತ್ತು ಜೂನಿಯರ್ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಹಾಕಿ ತಂಡಗಳು ಸ್ಪರ್ಧಿಸುವುದನ್ನು ತಡೆಯಲಾಗುವುದಿಲ್ಲ. ಏಕೆಂದರೆ ಸಾಂಪ್ರದಾಯಿಕ ಎದುರಾಳಿಗಳನ್ನು ತಡೆಯುವ ಯಾವುದೇ ಕ್ರಮ ಒಲಿಂಪಿಕ್ ಚಾರ್ಟರ್‌ನ ಉಲ್ಲಂಘನೆಯಾಗುತ್ತದೆ ಎಂದು ಕ್ರೀಡಾ ಸಚಿವಾಲಯದ ಮೂಲಗಳು ಗುರುವಾರ ತಿಳಿಸಿವೆ.

ಆಗಸ್ಟ್ 27 ರಿಂದ ಸೆಪ್ಟೆಂಬರ್ 7 ರವರೆಗೆ ಬಿಹಾರದ ರಾಜ್‌ಗಿರ್‌ನಲ್ಲಿ ಪುರುಷರ ಏಷ್ಯಾ ಕಪ್ ಹಾಕಿ ನಡೆಯಲಿದ್ದು, ನವೆಂಬರ್ 28 ರಿಂದ ಡಿಸೆಂಬರ್ 10 ರವರೆಗೆ ಚೆನ್ನೈ ಮತ್ತು ಮಧುರೈನಲ್ಲಿ ಜೂನಿಯರ್ ವಿಶ್ವಕಪ್ ಆಯೋಜಿಸಲಾಗುತ್ತಿದೆ.

"ಭಾರತದಲ್ಲಿ ನಡೆಯುವ ಬಹುರಾಷ್ಟ್ರೀಯ ಪಂದ್ಯಗಳಲ್ಲಿ ಸ್ಪರ್ಧಿಸುವ ಯಾವುದೇ ತಂಡವನ್ನು ನಾವು ವಿರೋಧಿಸುವುದಿಲ್ಲ. ಪಾಕಿಸ್ತಾನವನ್ನು ತಡೆಯಲು ನಾವು ಪ್ರಯತ್ನಿಸಿದರೆ ಅದು ಒಲಿಂಪಿಕ್ ಚಾರ್ಟರ್‌ನ ಉಲ್ಲಂಘನೆಯಾಗುತ್ತದೆ. ಆದರೆ ದ್ವಿಪಕ್ಷೀಯ ಟೂರ್ನಿಗಳು ಇದಕ್ಕಿಂತ ವಿಭಿನ್ನವಾಗಿವೆ ಮತ್ತು ಆ ವಿಷಯದಲ್ಲಿ ಯಾವುದೇ ಸಡಿಲಿಕೆ ಇರುವುದಿಲ್ಲ" ಎಂದು ಮೂಲಗಳು ತಿಳಿಸಿವೆ.

ಏಷ್ಯಾ ಕಪ್ ಹಾಕಿಇನ್ನು ಸೆಪ್ಟೆಂಬರ್‌ನಲ್ಲಿ ಭಾರತದಲ್ಲಿ ನಡೆಯಲಿರುವ ಏಷ್ಯಾ ಕಪ್ ಕ್ರಿಕೆಟ್‌ ಟೂರ್ನಿಯಲ್ಲಿ ಪಾಕಿಸ್ತಾನ ಆಡಲು ಅವಕಾಶ ನೀಡಲಾಗುತ್ತದೆಯೇ ಎಂದು ಕೇಳಿದಾಗ, "ಬಿಸಿಸಿಐ ಇನ್ನೂ ಈ ಬಗ್ಗೆ ಸಚಿವಾಲಯವನ್ನು ಸಂಪರ್ಕಿಸಿಲ್ಲ. ಅವರು ನಮ್ಮನ್ನು ಸಂಪರ್ಕಿಸಿದಾಗ ನಾವು ಈ ಪ್ರಶ್ನೆಗೆ ಉತ್ತರಿಸುತ್ತೇವೆ" ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸೌದಿಯಲ್ಲಿ ಬಸ್–ಡೀಸೆಲ್ ಟ್ಯಾಂಕರ್ ಡಿಕ್ಕಿಯಾಗಿ ಘೋರ ದುರಂತ: 45 ಮಂದಿ ಭಾರತೀಯ ಯಾತ್ರಿಕರು ದುರ್ಮರಣ, ಸಹಾಯವಾಣಿ ಆರಂಭ

"ನನಗೆ ಚಿಂತೆಯೇ ಇಲ್ಲ. ಅಲ್ಲಾಹ್ ಜೀವ ಕೊಟ್ಟಿದ್ದಾನೆ.. ಅವನೇ ತೆಗೆದುಕೊಳ್ಳುತ್ತಾನೆ": ಕೋರ್ಟ್ ತೀರ್ಪಿಗೂ ಮೊದಲು ಶೇಖ್ ಹಸೀನಾ!

Congo copper mine: ಕಾಂಗೋದಲ್ಲಿ ಭೀಕರ ಗಣಿ ಅವಘಡ, ಭೂ ಕುಸಿತದಲ್ಲಿ ಕನಿಷ್ಟ 80 ಮಂದಿ ಸಾವು! Video

ಬಿಹಾರದಲ್ಲಿ ಶಾಕಿಂಗ್ ಟ್ವಿಸ್ಟ್: ಎನ್ ಡಿಎಗೆ ಲಾಲೂ ಪ್ರಸಾದ್ ಪುತ್ರ ತೇಜ್ ಪ್ರತಾಪ್ ಯಾದವ್ ಬೆಂಬಲ!

ಬಿಹಾರ: ನ. 20ಕ್ಕೆ ನೂತನ ಸಿಎಂ ಪದ ಗ್ರಹಣ, ಪ್ರಧಾನಿ ಮೋದಿ ಸಮಾರಂಭದಲ್ಲಿ ಭಾಗಿ!

SCROLL FOR NEXT