ದಿವ್ಯಾ ದೇಶಮುಖ್ 
ಕ್ರೀಡೆ

FIDE ಮಹಿಳಾ ವಿಶ್ವಕಪ್ 2025: ಕೊನೇರು ಹಂಪಿ ಮಣಿಸಿದ ದಿವ್ಯಾ ದೇಶಮುಖ್; ಗ್ರ್ಯಾಂಡ್‌ಮಾಸ್ಟರ್ ಪಟ್ಟ

19 ವರ್ಷದ ನಾಗ್ಪುರ ಆಟಗಾರ್ತಿ ದಿವ್ಯಾ ದೇಶಮುಖ್ ಅವರು FIDE ಮಹಿಳಾ ಚೆಸ್ ವಿಶ್ವಕಪ್ ಗೆದ್ದ ಭಾರತದ ಮೊದಲ ಆಟಗಾರ್ತಿ ಎಂಬ ಗೌರವಕ್ಕೆ ಪಾತ್ರರಾದರು.

ಬಟುಮಿ: ಜಾರ್ಜಿಯಾದ ಬಟುಮಿಯಲ್ಲಿ ನಡೆದ 2025ರ FIDE ಮಹಿಳಾ ಚೆಸ್ ವಿಶ್ವಕಪ್ ಫೈನಲ್ ನಲ್ಲಿ ಅದ್ಬುತ ಪ್ರದರ್ಶನ ನೀಡಿದ ಭಾರತೀಯ ಚೆಸ್ ಆಟಗಾರ್ತಿ ದಿವ್ಯಾ ದೇಶಮುಖ್ ಅವರು ಸೋಮವಾರ ಅನುಭವಿ ಚೆಸ್ ಆಟಗಾರ್ತಿ ಕೊನೇರು ಹಂಪಿ ವಿರುದ್ಧ ಗುಲುವು ಸಾಧಿಸುವ ಮೂಲಕ ಗ್ರ್ಯಾಂಡ್‌ಮಾಸ್ಟರ್ ಆಗಿ ಹೊರಹೊಮ್ಮಿದ್ದಾರೆ.

ಈ ಮೂಲಕ 19 ವರ್ಷದ ನಾಗ್ಪುರ ಆಟಗಾರ್ತಿ ದಿವ್ಯಾ ದೇಶಮುಖ್ ಅವರು FIDE ಮಹಿಳಾ ಚೆಸ್ ವಿಶ್ವಕಪ್ ಗೆದ್ದ ಭಾರತದ ಮೊದಲ ಆಟಗಾರ್ತಿ ಎಂಬ ಗೌರವಕ್ಕೆ ಪಾತ್ರರಾದರು.

ಭಾರತದ ಮೊದಲ ಮಹಿಳಾ ಗ್ರ್ಯಾಂಡ್ ಮಾಸ್ಟರ್ ಕೊನೇರು ಹಂಪಿ ಮತ್ತು ದಿವ್ಯಾ ದೇಶಮುಖ್ ಇಬ್ಬರೂ ಕೂಡ ಫೈನಲ್ ಪ್ರವೇಶಿಸಿದ್ದರು. ಫೈನಲ್ ಪ್ರವೇಶಿಸಿದವರು ಇಬ್ಬರೂ ಭಾರತೀಯರಾಗಿರುವುದರಿಂದ ಪ್ರಶಸ್ತಿ ಭಾರತದ ಪಾಲಾಗುವುದು ಖಚಿತವಾಗಿತ್ತು. ಅದರಂತೆ ಇಂದು ನಡೆದ ಫೈನಲ್ ಪಂದ್ಯದಲ್ಲಿ ಕೊನೇರು ಹಂಪಿ ಅವರನ್ನು ಸೋಲಿಸಿ ದಿವ್ಯಾ ದೇಶಮುಖ್ ಚೆಸ್ ವಿಶ್ವಕಪ್ ಗೆದ್ದುಕೊಂಡಿದ್ದಾರೆ.

ಶನಿವಾರ ಮತ್ತು ಭಾನುವಾರ ಕೊನೇರು ಹಂಪಿ ಮತ್ತು ದಿವ್ಯಾ ದೇಶಮುಖ್ ಅವರ ನಡುವೆ ನಡೆದ ಎರಡು ಕ್ಲಾಸಿಕಲ್ ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡಿತ್ತು. ಇದರಿಂದ ಪಂದ್ಯವು ಜುಲೈ 28ರಂದು ರ‍್ಯಾಪಿಡ್ ಟೈಬ್ರೇಕ್‌ಗೆ ತೆರಳಿತು.

ಗುರುವಾರ ನಡೆದ ಟೈಬ್ರೇಕ್‌ನಲ್ಲಿ ಚೀನಾದ ಲೀ ಟಿಂಗ್ಜಿ ಅವರನ್ನು ಕೊನೇರು ಹಂಪಿ ಸೋಲಿಸಿದ್ದರೆ, ದಿವ್ಯಾ ದೇಶ್ ಮುಖ್ ಅವರು, ಚೀನಾದ ಮತ್ತೋರ್ವ ಪ್ರಬಲ ಎದುರಾಳಿ ತಾನ್ ಝೊಂಗಿ ಅವರನ್ನು ಸೋಲಿಸಿ ಮೊದಲ ಬಾರಿಗೆ ವಿಶ್ವ ಕಪ್ ಫೈನಲ್ ಪ್ರವೇಶಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜೈಪುರ: ಸವಾಯಿ ಮಾನ್ ಸಿಂಗ್ ಆಸ್ಪತ್ರೆಯಲ್ಲಿ ಬೆಂಕಿ ಅವಘಡ: ಆರು ರೋಗಿಗಳು ಸಾವು

'ಶಾಂತಿ ಇದೆ, ಕ್ರಾಂತಿ ಎಲ್ಲಿದೆ? ನಾವೆಲ್ಲರೂ ಶಾಂತಿ ಪ್ರಿಯರು'; ಸಿಎಂ ಬದಲಾವಣೆ ವಿಚಾರ 'ಅಪ್ರಸ್ತುತ': ಬಸವರಾಜ ರಾಯರೆಡ್ಡಿ

ಯಾರು ಎಷ್ಟೇ ವಿರೋಧಿಸಿದರೂ ಸಮೀಕ್ಷೆ ನಡೆಯುತ್ತದೆ, ಎಲ್ಲರೂ ಸಹಕರಿಸಿ: DCM ಡಿಕೆ ಶಿವಕುಮಾರ್ ಮನವಿ

Women's World cup 2025: ಪಾಕಿಸ್ತಾನ ವಿರುದ್ಧ ಭಾರತ 88 ರನ್ ಗೆಲುವು

West Bengal: ಡಾರ್ಜಿಲಿಂಗ್‌ನಲ್ಲಿ ಭಾರೀ ಮಳೆ; ಭೂಕುಸಿತದಲ್ಲಿ ಮಕ್ಕಳು ಸೇರಿ ಕನಿಷ್ಠ 20 ಮಂದಿ ಸಾವು

SCROLL FOR NEXT