ಥ್ರೋಬಾಲ್ ಚಾಂಪಿಯನ್‌ಗಳಿಗೆ ಅಭಿನಂದಿಸಿದ ಸಿಎಂ 
ಕ್ರೀಡೆ

ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಥ್ರೋಬಾಲ್ ಚಾಂಪಿಯನ್‌ಗಳಿಗೆ ಭವ್ಯ ಸ್ವಾಗತ

ತೀವ್ರ ಪೈಪೋಟಿಯಿಂದ ಕೂಡಿದ್ದ ಫೈನಲ್‌ನಲ್ಲಿ ಮಲೇಷ್ಯಾವನ್ನು ಸೋಲಿಸಿದ ಭಾರತ ತಂಡ, 25-23, 23-25, 25-21 ಅಂತರದಲ್ಲಿ ಜಯಗಳಿಸಿತು.

ಬೆಂಗಳೂರು: ಕಾಂಬೋಡಿಯಾದಲ್ಲಿ ನಡೆದ ಅಂತರರಾಷ್ಟ್ರೀಯ ಥ್ರೋಬಾಲ್ ಪಂದ್ಯಾವಳಿಯಲ್ಲಿ ಪ್ರಶಸ್ತಿ ಗೆದ್ದ ಭಾರತೀಯ ಕ್ರೀಡಾಪಟುಗಳಿಗೆ ಫೆಬ್ರವರಿ 16 ರಂದು ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ ನೀಡಲಾಯಿತು.

ತೀವ್ರ ಪೈಪೋಟಿಯಿಂದ ಕೂಡಿದ್ದ ಫೈನಲ್‌ನಲ್ಲಿ ಮಲೇಷ್ಯಾವನ್ನು ಸೋಲಿಸಿದ ಭಾರತ ತಂಡ, 25-23, 23-25, 25-21 ಅಂತರದಲ್ಲಿ ಜಯಗಳಿಸಿತು. ಬೆಂಗಳೂರಿನ ಎಂಡೀವರ್ಸ್ ಇಂಟರ್ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳಾದ ಅಕ್ಷಯ್ ಮತ್ತು ಚಂದನ್ ರೆಡ್ಡಿ ಸಹ ತಂಡದಲ್ಲಿದ್ದಾರೆ.

ಪೋಷಕರು, ಶಾಲಾ ಆಡಳಿತ ಮಂಡಳಿ ಮತ್ತು ಬೆಂಬಲಿಗರು ತಂಡವನ್ನು ಬರಮಾಡಿಕೊಂಡರು. ಶಾಲೆಯ ಅಧ್ಯಕ್ಷ ಎಂ.ಎಲ್. ಶಿವಶಂಕರ್ ಅವರು ಕ್ರೀಡಾಪಟುಗಳನ್ನು ಅಭಿನಂದಿಸಿ, ಗೌರವಿಸಿದರು.

ನಂತರ ಭಾರತ ತಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಪಂದ್ಯಾವಳಿಯ ಅನುಭವವನ್ನು ಹಂಚಿಕೊಂಡಿತು. ಈ ವೇಳೆ ಸಿಎಂ ಸಿದ್ದರಾಮಯ್ಯ ಅವರು ತಂಡವನ್ನು ಅಭಿನಂದಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

US-Iran Peace Talks: ಹಾರ್ಮುಜ್ ಜಲಸಂಧಿಯಲ್ಲಿ ಮುಂದುವರೆದ ಉದ್ವಿಗ್ನತೆ; ಇರಾನ್‌-ಅಮೆರಿಕಾ ನಡುವೆ ಶೀಘ್ರದಲ್ಲೇ ಮತ್ತೊಂದು ಸುತ್ತಿನ ಮಾತುಕತೆ..!

ದೇಶದ ಹಿತಾಸಕ್ತಿಯೇ ಮುಖ್ಯ, ಭಾರತದ ಪರವಾಗಿ ಲಾಬಿ ನಡೆಸುವಂತೆ ಅತ್ತೆ-ಮಾವ ಎಂದಿಗೂ ಒತ್ತಡ ಹೇರಿಲ್ಲ: H-1B ಕಠಿಣ ನಿಯಮ ಸಮರ್ಥಿಸಿಕೊಂಡ ಜೆಡಿ ವ್ಯಾನ್ಸ್..!

'ಹಾರ್ಮುಜ್ ಜಲಸಂಧಿ' ದಿಗ್ಬಂಧನ ನಡುವೆ ಟ್ರಂಪ್-ಪ್ರಧಾನಿ ಮೋದಿ ದೂರವಾಣಿ ಸಂಭಾಷಣೆ! ಏನೆಲ್ಲಾ ಮಾತುಕತೆ ಆಯ್ತು?

ಅಮೆರಿಕದ ಹಾರ್ಮುಜ್ ದಿಗ್ಬಂಧನದಿಂದ ಇರಾನ್‌ಗೆ ದಿನಕ್ಕೆ ಅಂದಾಜು $435 ಮಿಲಿಯನ್ ನಷ್ಟ; ಆದರೂ ದೀರ್ಘಾವಧಿಯ ಬ್ಲಾಕೇಡ್ ಕಷ್ಟ!

ಚಿಕ್ಕಮಗಳೂರು: ಅಂಬೇಡ್ಕರ್ ಜಯಂತಿ ಮೆರವಣಿಗೆ ವೇಳೆ ಅವಘಡ, ಬಾಲಕಿ ಸಾವು, 9 ಮಂದಿಗೆ ಗಾಯ

SCROLL FOR NEXT